ತುಮಕೂರು

ಹಣ, ಹೆಂಡದಿಂದ ಮತದಾರರ ಓಲೈಕೆ ಸಾಧ್ಯವಿಲ್ಲ

Published On :

ಕ.ಪ್ರಭ. ವಾರ್ತೆ   ತುಮಕೂರು   ಏ.9
ಹಣ ಮತ್ತು ಹೆಂಡದಿಂದ ಮತದಾರರ ಓಲೈಕೆ ಸಾಧ್ಯವಿಲ್ಲ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್ಗೌಡ ಅಭಿಪ್ರಾಯಪಟ್ಟರು.
ಅವರು ಸಮೀಪದ ಹೆಗ್ಗೆರೆ ಗ್ರಾಮದಲ್ಲಿ ನಡೆದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ  ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾದಿದರು.
ಹೆಗ್ಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿದ್ದು. ಸುವರ್ಣ ಗ್ರಾಮ ನಿರಂತರ ವಿದ್ಯುತ್, ಸಾರಿಗೆ ಸಂಪರ್ಕ, ಎಸ್.ಎಸ್.ವೈ, ವಿಧವಾ ವೇತನ, ಅಂಗವಿಕಲರ ವೇತನ ಹಾಗೂ ಕಟ್ಟಡ ಕಾಮಗಾರಿಗಳು ಆಗಿರುವ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡಬೇಕೆಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಕಾರ್ಯಕರ್ತರು ಪಕ್ಷದ ಬೆನ್ನುಲುಬು. ಕೇವಲ ಒಬ್ಬ ಶಾಸಕನಾಗಿ ಎಲ್ಲವನ್ನು ಮಾಡಲು ಸಾಧ್ಯವಿಲ್ಲ ಇಂದು
ಚೈನ್ಲಿಂಕ್  ಮಾದರಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಪ್ರೀತಿ, ವಿಶ್ವಾಸ ಮುಖ್ಯ: ಇಂದಿನ ಚುನಾವಣೆಯಲ್ಲಿ ಹಣ ಮತ್ತು ಹೆಂಡದ ಸರಬರಾಜು ಕೆಲವು ರಾಜಕಾರಣಿಗಳು ಮಾಡುತ್ತಿದ್ದು ಕಾರ್ಯಕರ್ತರು ಮತ್ತು ಮತದಾರರು ಇದನ್ನು ಗಮನಿಸುತ್ತಿದ್ದು ಹಣ ಮತ್ತು ಹೆಂಡದ ಸರಬರಾಜಿನಿಂದ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ.  ಜನರ ಪ್ರೀತಿ, ವಿಶ್ವಾಸಿ, ಬಹಳ ಮುಖ್ಯವಾದದ್ದು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಎಚ್ಚೆತ್ತುಕೊಳ್ಳಿ: ಇಲ್ಲಿನ ಜನತೆ ಕಳೆದ 5 ವರ್ಷದಿಂದ ನೆಮ್ಮದಿಯ ಬದುಕನ್ನು ಕಾಣುತ್ತಿದ್ದು ಮುಂದೆ ಕೂಡ ನೆಮ್ಮದಿಯಿಂದ ಇರಬೇಕೆಂಬುವುದು ನನ್ನ  ಮಹಾದಾಸೆ ಎಂದರು.  ಆದರೆ ಪ್ರಸ್ತುತ ವಿದ್ಯಮಾನದಲ್ಲಿ ಕೆಲವರು ಜನರ ನೆಮ್ಮದಿಗೆ ಭಂಗ ತರುವಂತ ವ್ಯಕ್ತಿಗಳು ಕ್ಷೇತ್ರಕ್ಕೆ ಲೆಗ್ಗೆಯಿಟ್ಟಿದ್ದು ಆಡುವಂತ ಮಕ್ಕಳಿಗೆ ಎಲ್ಲ ಹಣ ಹಂಚುವ ಪದ್ಧತಿಯನ್ನು ಮೈಗೂಡಿಸಿಕೊಂಡಿರುವ ಕೆಲವರು ಇಲ್ಲಿನ ಯುವಕರನ್ನು ಹಾದಿ-ಬೀದಿಯಲ್ಲಿ ಹೆಂಡ ಕುಡಿಸಿ ತೂರಾಡುವಂತ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದು ನಿಮ್ಮ ಮಕ್ಕಳು ಒಳ್ಳೆಯ ಸಂಸ್ಕಾರವಂತರಾಗಿ ಉಳಿಯುವ ಹಾಗೂ ಗ್ರಾಮಾಂತರ ಕ್ಷೇತ್ರದ ಜನತೆ ನೆಮ್ಮದಿಯ ಬದುಕನ್ನು ಕಾಣಲು ಮತದಾರ ಪ್ರಭುಗಳು ಎಚ್ಚೆತ್ತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಈ ಕ್ಷೇತ್ರವು ನೆಮ್ಮದಿಯಿಂದ ಇರಬೇಕಾದರೆ, ಸಮಗ್ರ ಅಭಿವೃದ್ಧಿಯಾಗಬೇಕಾದರೆ ದೇಶದಲ್ಲಿ ಒಂದು ಮಾದರಿ ಕ್ಷೇತ್ರವನ್ನಾಗಿಸಲು ಸಂಕಲ್ಪ ಮಾಡಿರುವ ಶಾಸಕ ಬಿ.ಸುರೇಶ್ ಗೌಡರಿಗೆ ತಾವೆಲ್ಲ ಮತ ನೀಡಿ ಜಯಶೀಲರನ್ನಾಗಿ ಮಾಡಬೇಕಾಗಿದೆ ಎಂದು  ನೆರೆದಿದ್ದ ಬೂತ್ ಮಟ್ಟದ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಜಿ.ಪಂ.ಮೂರ್ತಿ, ಯರ್ರೇಗೌಡ, ರತ್ನಮ್ಮ, ಅನಂತು, ಶಂಕರಮೂರ್ತಿ, ರೇಣುಕಾಪ್ರಸಾದ್, ಟಿ.ಪಿ. ನಾಗರಾಜು, ಲೋಕೇಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.