'ಶಿಬಿರ ಮನೋವಿಕಾಸಕ್ಕೆ ಮಾರ್ಗ ತೋರಲಿ'
ಕ.ಪ್ರಭ. ವಾರ್ತೆ ತುಮಕೂರು ಏ.10
ನಗರದ ಎಸ್.ಎಸ್.ಪುರಂನಲ್ಲಿರುವ ತ್ರಿನೇತ್ರ ನೃತ್ಯ ಕಲಾನಿಕೇತನದಲ್ಲಿ ಮಕ್ಕಳ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸೋಮು ಭಾಸ್ಕರಾಚಾರ್ ಶಿಬಿರದಲ್ಲಿ ಆಯೋಜಿಸಿರುವ ವೈವಿಧ್ಯಮಯ ಕಾರ್ಯಕ್ರಮ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿದೆ ಎಂದು ತಿಳಿಸಿದರು. ಸಾಂಸ್ಕೃತಿಕ ಮನೋಭಾವ ಬೆಳೆಸಿಕೊಳ್ಳಲು ಇದು ಸಹಕಾರಿಯಾಗಿದೆ. ಈ ಶಿಬಿರದಿಂದ ಮಕ್ಕಳನ್ನು ತಿದ್ದಿ ಸರಿದಾರಿಯಲ್ಲಿ ನಡೆಸಬಹುದು ಮತ್ತು ಶಿಸ್ತು ಸಂಯಮಗಳನ್ನು ಕಲಿಸಬಹುದು. ಈ ನಿಟ್ಟಿನಲ್ಲಿ ಶಿಬಿರ ಯಶಸ್ವಿಯಾಗಲಿ ಎಂದು ಹಾರೈಸಿದರು.
ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ ಎಂ.ಸಿ.ಲಲಿತ ಮಾತನಾಡಿ, ಶಿಬಿರದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಎಲ್ಲಾ ವಿಷಯಗಳಲ್ಲೂ ಪರಿ ಪೂರ್ಣತೆ ಪಡೆಯುತ್ತಾರೆ ಎನ್ನುವ ಭ್ರಮೆಯನ್ನು ಮಕ್ಕಳ ಪೋಷಕರು ಇಟ್ಟುಕೊಳ್ಳಬಾರದು ಎಂದರು. ಆಯಾ ಮಕ್ಕಳ ಗ್ರಹಣ ಶಕ್ತಿಗೆ ಅನುಗುಣವಾಗಿ ಅವರು ಕಲಿಯುತ್ತಾರೆ. ಹೋಲಿಕೆ ಮಾಡುವುದು ಬೇಡ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತ್ರಿನೇತ್ರ ನೃತ್ಯ ಶಾಲೆಯ ನಿರ್ದೇಶಕ ಹೆಚ್.ಆರ್. ನವೀನ್, ಕಡಿಮೆ ಅವಧಿಯಲ್ಲಿ ಮಕ್ಕಳು ಶಿಸ್ತು, ಸಂಯಮ ರೂಢಿಸಿಕೊಳ್ಳಬೇಕು. ಮತ್ತು ಸಮಯಪಾಲನೆಯಲ್ಲಿ ಗಮನವಿರಬೇಕು ಎಂದರು. ಇದೆ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸೋಮು ಭಾಸ್ಕರಾಚಾರ್ ಅವರನ್ನು ತ್ರಿನೇತ್ರ ನೃತ್ಯ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ತು.ಮ.ಬಸವರಾಜು ನಾಡು ನುಡಿ ಗೀತೆ ತರಬೇತಿ ನೀಡಿದರು. ರಂಗಸ್ವಾಮಿ ಚಿತ್ರಕಲಾ ಶಿಕ್ಷಣ ನೀಡಿದರು. ಶ್ರೀವಿದ್ಯಾ ಪ್ರಾರ್ಥಿಸಿದರು. ಮಹಾಲಿಂಗಪ್ಪ, ಸುಧಾರತ್ನ ಮತ್ತಿತರರು ಉಪಸ್ಥಿತರಿದ್ದರು. ರವಿಶರ್ಮ ಶ್ಲೋಕ ಹೇಳಿಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

