ತುಮಕೂರು

ಸಿದ್ಧರಾಮ ಪುರಾಣ ಭಕ್ತಿಕಾವ್ಯ: ಸಿದ್ಧರಾಮಯ್ಯ

Published On :

ತುಮಕೂರು: ಜಯದೇವಿ ತಾಯಿ ಲಿಗಾಡೆಯವರ ಸಿದ್ಧರಾಮ ಪುರಾಣ ಭಕ್ತಿಕಾವ್ಯ ಎಂದು ಕನ್ನಡ ಉಪನ್ಯಾಸಕ ವಿದ್ವಾನ್ ಎಂ.ಜಿ. ಸಿದ್ಧರಾಮಯ್ಯ ಪ್ರಶಂಸಿಸಿದರು. ಅವರು ನಗರದ ಬನಶಂಕರಿಯ ವೀರಭದ್ರೇಶ್ವರ ನಿಲಯದಲ್ಲಿ ನಡೆದ ಜಯದೇವಿ ತಾಯಿ ಲಿಗಾಡೆಯವರ ಬದುಕು-ಬರೆಹ ಸಾಧನೆ ಕುರಿತು ಉಪನ್ಯಾಸ ನೀಡಿದರು. ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಜನಿಸಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮರಾಠಿಯಲ್ಲಿ ಅಧ್ಯಯನ ಮಾಡಿ ಕನ್ನಡ-ಮರಾಠಿ ಭಾಷೆಗಳಲ್ಲಿ ಹಲವಾರು ಕೃತಿ ರಚಿಸಿ ಕನ್ನಡದ ತ್ರಿಪದಿ  ಛಂದಸ್ಸಿನಲ್ಲಿ ಸಿದ್ಧರಾಮೇಶ್ವರ ಪುರಾಣ ರಚಿಸುವ ಮೂಲಕ ಕನ್ನಡಿಗರ ಕಾವ್ಯಾಸಕ್ತರಲ್ಲಿ ಮನೆ ಮಾತಾದರು ಎಂದರು. ಈ ಕಾವ್ಯ 20ನೇ ಶತಮಾನದ ಕನ್ನಡ ಸಾಹಿತ್ಯ ಚರಿತ್ರೆ ಬಂದ ಆಧುನಿಕ ಪಂಚ ಮಹಾಕಾವ್ಯಗಳಲ್ಲಿ ಒಂದೆನಿಸಿ ಪ್ರಸಿದ್ಧವಾದ ಭಕ್ತಿ ರಸ ಕಾವ್ಯವಾಯಿತು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.