ತುಮಕೂರು

ತುಮಕೂರು: ಇಂಟರ್‌ನೆಟ್‌ನಲ್ಲೂ ರೇಡಿಯೋ ಸಿದ್ಧಾರ್ಥ

Published On :

ಕ.ಪ್ರ. ವಾರ್ತೆ  ತುಮಕೂರು  ಏ.13
ತುಮಕೂರಿನ ದನಿ ರೇಡಿಯೋ ಸಿದ್ಧಾರ್ಥ 90.8 ಎಫ್‌ಎಂ ಸಮುದಾಯ ಬಾನುಲಿ ಕಾರ್ಯಕ್ರಮಗಳು ಇನ್ನು ಮುಂದೆ ಇಂಟರ್‌ನೆಟ್‌ನಲ್ಲೂ ಲಭ್ಯ.
ಮನೆಗಳಲ್ಲಿ ಕಂಪ್ಯೂಟರ್‌ನಲ್ಲಿ ಇಂಟರ್‌ನೆಟ್ ಸೌಲಭ್ಯ ಇರುವವರು ಢಿಢಿಢಿ.್ಠಛಜ್ಝ್ಟಡ್ಝಜಝಛ್ಠಝಿಛ.್ಛ್ಟಟ ಎಂದು ಮೌಸ್‌ನಲ್ಲಿ ಕ್ಲಿಕ್ ಮಾಡಿದರೆ ಸಾಕು ಕಾರ್ಯಕ್ರಮಗಳ ಧ್ವನಿ ನಿಮ್ಮ ಕಿವಿಗೆ ಬೀಳಲಿದೆ.
ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ಸಿ.ಎನ್. ನರಸಿಂಹಮೂರ್ತಿ ಅವರು ಎಸ್‌ಎಸ್‌ಐಟಿ ಕ್ಯಾಂಪಸ್‌ನಲ್ಲಿರುವ ರೇಡಿಯೋ ನಿಲಯದಲ್ಲಿ ಈ ವೆಬ್ ರೇಡಿಯೋಗೆ ಚಾಲನೆ ನೀಡಿದರು. ವಿದ್ಯಾರ್ಥಿಗಳಿಗೆ ಮತ್ತು ಗ್ರಾಮೀಣ ಜಛನರನ್ನು ಗಮನದಲ್ಲಿಟ್ಟುಕೊಂಡು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ನಾಲ್ಕು ವರ್ಷಗಳ ಹಿಂದೆ ಆರಂಭಿಸಿದ ಈ ಬಾನುಲಿಯನ್ನು ತುಮಕೂರು ಜಿಲ್ಲೆಯ ಜನರು ತಮ್ಮ ಪಾಲ್ಗೊಳ್ಳುವಿಕೆ ಮೂಲಕ ಬಾನುಲಿಯನ್ನು ಬೆಳೆಸಿ ತಾವು ಬೆಳೆಯಬೇಕು ಎಂದು ಕರೆ ನೀಡಿದರು.
ರೇಡಿಯೋದಲ್ಲಿ ನೇರ ಪ್ರಸಾರದಲ್ಲಿ ಕೇಳುಗರನ್ನು ಉದ್ದೇಶಿಸಿ ಮಾತನಾಡಿ ರೇಡಿಯೋ ಕೇಳುಗರಿಗಾಗಿ ನಮ್ಮ ಸಂಸ್ಥೆ ತಾಂತ್ರಿಕತೆಯ ಎಲ್ಲಾ ಸಾಧ್ಯತೆಗಳನ್ನು ಬಳಸಿಕೊಂಡು ಒಳ್ಳೆಯ ಕಾರ್ಯಕ್ರಮ ನೀಡುವ ಪ್ರಯತ್ನ ಮಾಡುತ್ತದೆ ಎಂದರು.
ವೆಬ್ ರೇಡಿಯೋ ಮೂಲ ಉದ್ದೇಶದದ ಬಗ್ಗೆ ಕಾರ್ಯಕ್ರಮ ಸಂಯೋಜಕ ಶಿವಾಜಿ ಗಣೇಶನ್ ವಿವರಿಸಿ ಸಮಾರಂಭಕ್ಕೆ ಆಗಮಿಸಿದ ಕೇಳುಗರು, ಕಲಾವಿದರು, ಸಾಹಿತಿಗಳು ಮತ್ತು ನಿರಂತರವಾಗಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಗಣ್ಯರನ್ನು ಸ್ವಾಗತಿಸಿದರು. ರೇಡಿಯೋ ಸಿದ್ದಾರ್ಥ ಸಮುದಾಯ ಬಾನುಲಿಯನ್ನು ಆರಂಭಿಸಿದ ಉದ್ದೇಶವನ್ನು ನಿರ್ದೇಶಕ ಡಾ. ಸುಚೇತನ ಸ್ವರೂಪ್ ವಿವರಿಸಿದರು. ನಿರೂಪಕಿ ರಶ್ಮಿ ಅಮ್ಮೆಂಬಳ ಅವರು ಎಲ್ಲರಿಗೂ ಬೇವು ಬೆಲ್ಲ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.