'ಬನಶಂಕರಿ ಸನ್ನಿಧಿಯಲ್ಲಿ ದೇವರದಾಸಿಮಯ್ಯ ಜಯಂತಿ'
ಹುಳಿಯಾರು: ಪಟ್ಟಣದ ಶ್ರೀಬನಶಂಕರಿ ದೇವಾಲಯದಲ್ಲಿ ದೇವಾಂಗ ಮಂಡಳಿ, ಬನಶಂಕರಿ ದೇವಸ್ಥಾನ ಸಮಿತಿ ಹಾಗೂ ದಾಸಿಮಯ್ಯ ಸಮಿತಿ ವತಿಯಿಂದ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿಯನ್ನು ನೂರಾರು ಭಕ್ತರು ಸೇರಿ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಕಾರ್ಯಕ್ರಮದಲ್ಲಿ ಹೋಬಳಿ ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್.ಕೆ. ರಾಮಯ್ಯ ಮಾತನಾಡಿ ವಚನಕಾರ ದಾಸಿಮಯ್ಯನವರ ವಚನಗಳ ಮಹತ್ವ ಹಾಗೂ ಆತ ನಡೆದು ಬಂದ ದಾರಿಯ ಬಗ್ಗೆ ಪರಿಚಯ ಮಾಡಿಕೊಟ್ಟರು. ಭಕ್ತಿಯ ಬಗ್ಗೆ ದಾಸಿಮಯ್ಯ ಹೊಂದಿದ್ದ ನಿಲುವು, ದೇವರು ಎಂತಹ ಭಕ್ತಿಗೆ ಒಲಿಯುತ್ತಾನೆ ಎಂಬುದನ್ನು ವಿವರಿಸಿದರು. ತೋರುವಿಕೆಯ ಭಕ್ತಿಯಿಂದ ದೇವರನ್ನು ನೆಪ ಮಾತ್ರಕ್ಕೆ ಆರಾಧಿಸಿದಂತಾಗುತ್ತದೆ ಹೊರತು ದೈವಕೃಪೆಗೆ ಪಾತ್ರರಾಗಲು ಸಾಧ್ಯವಿಲ್ಲ ಎಂದರು. ಬಂಗಾರ, ಬೆಳ್ಳಿ, ಕಂಚು, ಒಡವೆ ಸೇರಿದಂತೆ ಧನ ಕನಕಾಧಿಗಳನ್ನು ಭಗವಂತ ಮೆಚ್ಚುವುದಿಲ್ಲ. ಬದಲಿಗೆ ಶ್ರದ್ಧೆಯಿಂದ ಯಾರು ಆತನ ಧ್ಯಾನ ಮಾಡುತ್ತಾರೆ ಅಂತಹವರ ಮೇಲೆ ತನ್ನ ಕೃಪೆ ತೋರುತ್ತಾನೆ ಎಂದು ದಾಸಿಮಯ್ಯ ನಂಬಿಕೆ ಹೊಂದಿದವನಾಗಿದ್ದನು.
ಎತ್ತಿನ ಗಾಡಿ ಸಾರಾಗವಾಗಿ ಚಲಿಸಲು ಕಡಕೀಲು ಎಷ್ಟು ಮುಖ್ಯ ಅಂತೆಯೇ ಶಿವಶರಣರ ಮಾತುಗಳು, ನುಡಿ ಮುತ್ತುಗಳು ಇಂದಿನ ಸಮಾಜಕ್ಕೆ ಮುಖ್ಯವಾಗಿದೆ ಎಂದರು. ಜಯಂತಿ ಅಂಗವಾಗಿ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಮಿತಿಯ ಅನಂತಕುಮಾರ್, ದಾಸಪ್ಪ, ಸೀನಣ್ಣ, ಗೌಡಿ, ಬಿಟಿಆರ್ ರಾಜಣ್ಣ, ಶಶಿ, ವರದರಾಜು, ಕನ್ನಡ ಸಾಹಿತ್ಯ ಪರಿಷತ್ನ ತ.ಶಿ.ಬಸವಮೂರ್ತಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

