ಯುವಪೀಳಿಗೆಗೆ ಮದ್ಯದ ಆಮಿಷ ನಾಚಿಕೆಗೇಡು
ಕುಣಿಗಲ್: ದುಡ್ಡಿನ ಮದದಿಂದ ಸ್ತ್ರೀಶಕ್ತಿ ಸಂಘಗಳಿಗೆ ಹಣ ನೀಡುವುದರ ಜೊತೆಯಲ್ಲಿ, ಯುವಪೀಳಿಗೆಗೆ ಮದ್ಯದ ಆಮಿಶ ನೀಡುತ್ತಾ ಮತಯಾಚನೆಗೆ ಮುಂದಾಗಿರುವುದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ಇಂತಹವರಿಗೆ ಮತದಾರರು ತಕ್ಕ ಪಾಠಕಲಿಸಬೇಕೆಂದು ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್.ಹರೀಶ್ ತಿಳಿಸಿದರು.
ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಡಿ.ನಾಗರಾಜಯ್ಯ ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆಯಾದ ಹಿನ್ನೆಲೆಯಲ್ಲಿ, ಇತ್ತೀಚೆಗೆ ನಡೆದ ಪುರಸಭಾ ಚುನಾವಣೆಯಲ್ಲಿ ಜೆಡಿಎಸ್ ಬಂಡಾಯ ಹಾಗೂ ಮೂಲ ಅಭ್ಯರ್ಥಿಗಳಾಗಿದ್ದವರು ಮಾಜಿ ಸಚಿವರ ಮನೆಯಲ್ಲಿ, ಜೆಡಿಎಸ್ ಅಭ್ಯರ್ಥಿಯ ಗೆಲವಿಗಾಗಿ ಗುರುವಾರ ನಡೆದ ಪೂರ್ವಭಾವಿಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಗೆಲವಿಗೆ ಶ್ರಮಿಸಲಿ: ಕ್ಷೇತ್ರದ ಸಂಪೂರ್ಣ ಅರಿವಿರುವ, ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವಂತ ಅಭ್ಯರ್ಥಿಯ ಆಯ್ಕೆಗೆ ಮತದಾರರು ಒಲವು ತೋರಬೇಕಿದೆ. ಚುನಾವಣೆ ಸಮಯದಲ್ಲಿ ತಾಲೂಕಿಗೆ ಆಗಮಿಸಿ, ತಮ್ಮ ಹಣಬಲದಿಂದ ಮತದಾರರನ್ನು ಖರೀದಿಸುವಂತ ಪ್ರವೃತ್ತಿ ತೋರುವವರಿಗೆ ಮತದಾರರು ತಕ್ಕ ಪಾಠಕಲಿಸಬೇಕಿದೆ. ತಾಲೂಕಿನಲ್ಲಿ ಕಳೆದ ನಾಲ್ಕು ದಶಕಗಳಿಂದ ಜನಸಾಮಾನ್ಯರ ಸಮಸ್ಯೆಗೆ, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿರುವ ಮಾಜಿ ಸಚಿವ ಡಿ.ನಾಗರಾಜಯ್ಯನವರ ಗೆಲವಿಗೆ ಈ ಬಾರಿ ಜೆಡಿಎಸ್ ಕಾರ್ಯಕರ್ತರು ಯಾವುದೇ ಗೊಂದಲ, ಭಿನ್ನಾಭಿಪ್ರಾಯಗಳಿಲ್ಲದೆ ಶ್ರಮಿಸಬೇಕೆಂದರು.
ಪುರಸಭೆ ಮಾಜಿ ಸದಸ್ಯ ಜಯರಾಮ, ಕಳೆದ ಪುರಸಭೆ ಚುನಾವಣೆಯಲ್ಲಿ ಅಧಿಕೃತ ಜೆಡಿಎಸ್ ಅಭ್ಯರ್ಥಿಗಳ ವಿರುದ್ಧ ಬಂಡಾಯವಾಗಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಈಗ ಪರಿಸ್ಥಿತಿ ಬದಲಾವಣೆಯಾಗಿದೆ. ಮೂಲ, ಬಂಡಾಯ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಡಿ.ನಾಗರಾಜಯ್ಯನವರ ಗೆಲವಿಗೆ ಒಮ್ಮತದಿಂದ ಶ್ರಮಿಸಬೇಕೆಂದು ಆಗ್ರಹಿಸಿದರು. ಸಭೆಯಲ್ಲಿ ಪುರಸಭೆ ಜೆಡಿಎಸ್ ಸದ್ಯರಾದ ಈ.ಮಂಜು, ಆಯಿಶಾಬೀ, ಚಂದ್ರಶೇಖರ್, ಅನ್ಸರ್, ನಳಿನಾಭೈರಪ್ಪ ಮಾತನಾಡಿದರು. ಸದಸ್ಯರಾದ ಸತೀಶ್, ಸಮೀವುಲ್ಲಾ, ಅಶ್ವಾಕ್, ಪ್ರಮುಖರಾದ ವಾಸು, ಫಾಜಿಲ್, ರಹಮತ್, ಸದಾಖತ್, ಡಾ.ಬಿ.ಎನ್.ರವಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

