ತುಮಕೂರು

ವೆಂಕಟರಮಣಪ್ಪ ಪುತ್ರ ಜೆಡಿಎಸ್ ಸೇರ್ಪಡೆ

Published On :

ಪಾವಗಡ: ಶಾಸಕ ವೆಂಕಟರಮಣಪ್ಪ ಅವರ ಹಿರಿಯ ಪುತ್ರ ಎಚ್.ವಿ.ಕುಮಾರಸ್ವಾಮಿ ಹಾಗೂ ಇವರ ಆನೇಕ ಮಂದಿ ಬೆಂಬಲಿಗರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದರು. ಅವರು ಶುಕ್ರವಾರ ತಮ್ಮ ಪಟ್ಟಣದ ವೆಂಕಟೇಶ್ವರ ವಿದ್ಯಾ ಸಂಸ್ಥೆಯಲ್ಲಿ ತಮ್ಮ ಅಪಾರ ಬೆಂಬಲಿಗ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ 2 ಗಂಟೆಗೂ ಹೆಚ್ಚು ಕಾಲ ಸಮಾಲೋಚನಾ ಸಭೆ ನೆಡೆಸಿ ನಿರ್ಣಯ ಕೈಗೊಂಡು ವಿದ್ಯಾ ಸಂಸ್ಥೆ ಅವರಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಸಮಾರಂಭದಲ್ಲಿ ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಕೆ.ಎಂ ತಿಮ್ಮರಾಯಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷ ಎನ್.ತಿಮ್ಮಾರೆಡ್ಡಿ, ಮುಖಂಡರಾದ ಗೋವಿಂದಬಾಬು, ಕೆ.ಆರ್.ಸುರೇಶ್, ಸತ್ಯನಾರಾಯಣ ಚೌದರಿ,ಪ್ರಸಾದ್‌ರೆಡ್ಡಿ, ಡಾ.ಕಿರಣ್ ಮುಂತಾದವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು. ಶಾಸಕ ವೆಂಕಟಮಣಪ್ಪ ಕುಟುಂಬದಲ್ಲಿದ್ದ ರ್ನಾಕೀಯ ಮುನಿಸಿನ ಹಿನ್ನಲೆಯಲ್ಲಿ ಕಳೆದ 2ವರ್ಷಗಳಿಂದ ಎಚ್.ವಿ.ಕುಮಾರಸ್ವಾಮಿ ಜೆಡಿಎಸ್ ಕಡೆ ಮುಖ ಮಾಡಿದ್ದರು. ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರು ಕೆಪಿಸಿಸಿ ವತಿಯಿಂದ ತಮ್ಮ ಸಹೋದರ ಎಚ್.ವಿ.ವೆಂಕಟೇಶ್ ಅವರಿಗೆ ಕಾಂಗ್ರೆಸ್ ಟಿಕೆಟ್ ದೊರಯುತ್ತಿದ್ದಂತೆ ಕಾರ್ಯಚಟವಟಿಕೆ ಚುರುಕುಗೊಳಿಸಿದ ಎಚ್.ವಿ.ಕುಮಾರಸ್ವಾಮಿ ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್‌ಗೆ ಸೇರ್ಪಡೆಯಾಗಿ ಕೆ.ಎಂ.ತಿಮ್ಮರಾಯಪ್ಪ ಅವರನ್ನು ಗೆಲ್ಲಿಸುವುದೆ ನಮ್ಮ ಗುರಿ ಎಂದು ತಿಳಿಸಿದರು. ಮುಖಂಡರಾದ ಎ.ಶಂಕರರೆಡ್ಡಿ, ವಿ.ಚಿಂತಲರೆಡ್ಡಿ, ಬಲರಾಮರೆರೆಡ್ಡಿ, ಅಂ್ನಯ್ಯ, ಎಸ್.ಟಿ ನಾಗರಾಜ್, ಜಿ.ಬಿ.ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.