ತುಮಕೂರು

ಹಣಬಲವೋ, ಜನಬಲವೋ?

Published On :

ತುಮಕೂರು: ಹಣಬಲವುಳ್ಳ ಆದರೆ ಜನರಕೈಗೆ ಸಿಗದ ಡಾ.ಜಿ. ಪರಮೇಶ್ವರ್ ಬೇಕೋ ಅಥವಾ ಜನಪರ ಕಾಳಜಿಯುಳ್ಳ, ಸದಾ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸುಧಾಕರ್‌ಲಾಲ್ ಬೇಕೋ ಎಂಬುದನ್ನು ಕೊರಟಗೆರೆ ಜನತೆ ತೀರ್ಮಾನಿಸುವ ಕಾಲ ಬಂದೊದಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಅವರು ಕೊರಟಗೆರೆಯಲ್ಲಿ ಪಕ್ಷದ ಅಭ್ಯರ್ಥಿ ಸುಧಾಕರ್‌ಲಾಲ್ ಪರ ಪ್ರಚಾರ ಕೈಗೊಂಡು ಮಾತನಾಡಿದರು.
ಪರಮೇಶ್ವರ್ ಬಳಿ ಅಪಾರ ಪ್ರಮಾಣದಲ್ಲಿ ಹಣವಿದೆ. ಆದರೆ ಪ್ರಯೋಜನವಿಲ್ಲ.ಆದರೆ ಸುಧಾಕರ್‌ಲಾಲ್ ಬಗ್ಗೆ ಕ್ಷೇತ್ರದ ಜನತೆಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ಅವರ ಸರಳತೆ, ಸಜ್ಜನಿಕೆಯಿಂದಾಗಿ ಅವರು ಕಳೆದ 13 ವರ್ಷಗಳಿಂದ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಆಶೀರ್ವದಿಸುವುದೇ ಒಂದೇ, ತಮಗೆ ಆಶೀರ್ವದಿಸುವುದೂ ಒಂದೇ. ಹಣಕ್ಕಿಂತ ಜನಬಲ ದೊಡ್ಡದು ಅನ್ನೋದನ್ನ ತೋರಿಸೋ ಕಾಲ ಬಂದಿದೆ. ಅದನ್ನು ತೋರಿಸೋ ಜವಾಬ್ದಾರಿ ಕೊರಟಗೆರೆ ಜನತೆಯ ಮೇಲಿದೆ. ಕೊರಟಗೆರೆ ಜನತೆ ಇದನ್ನು ನಿರೂಪಿಸುತ್ತಾರೆ ಅನ್ನೋ ವಿಶ್ವಾಸವಿದೆ ಎಂದರು.
ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೆ ತಾವು ಬದ್ಧವಾಗಿರುವುದಾಗಿಯೂ, ನಾನು ಸಿಎಂ ಆಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಗೆ 4600 ಕೋಟಿ ರು.ಯೋಜನೆಗೆ ಒಪ್ಪಿಗೆ  ನೀಡಿದೆ.  ತುಮಕೂರು, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಇತರೆ ಜಿಲ್ಲೆಗಳಿಗೆ ಕುಡಿಯುವ ನೀರಿನ ಆದರೆ ಬಿಜೆಪಿ ಸರ್ಕಾರ ಯೋಜನೆಯನ್ನು ನಿರ್ಲಕ್ಷಿಸಿತು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಬಿಜೆಪಿ ಸರ್ಕಾರ ಭ್ರಷ್ಟಾಚಾರ, ಆಂತರಿಕ ಕಚ್ಚಾಟದಲ್ಲೇ ಮುಳುಗಿ, ತನ್ನ ಅವಧಿಯನ್ನು ಪೂರೈಸಿದೆ.ಅಭಿವದ್ಧಿ ಹೆಸರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹಣ ಲೂಟಿ ಹೊಡೆದಿವೆ.ಇದೇ ಇವೆರಡೂ ಪಕ್ಷಗಳ ಸಾಧನೆ ಎಂದು ಎಚ್‌ಡಿಕೆ ಲೇವಡಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.