ಮಾವನ ವಿರುದ್ಧವೂ ಮಾತನಾಡೋದೆ: ಚೌದ್ರಿ
ಕ.ಪ್ರ.ವಾರ್ತೆ ತುರುವೇಕೆರೆ ಏ.22
ಈಗಿನ ಚುನಾವಣೆಯಲ್ಲಿ ಯಾವುದೇ ಪಕ್ಷಗಳು ಬಹುಮತ ಪಡೆಯೋಲ್ಲ. ಮುಂಬರುವ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಬರುವುದು ಗ್ಯಾರಂಟಿ. ಪಕ್ಷೇತರ ಅಭ್ಯರ್ಥಿಗಳು ಗೆದ್ದರೆ ಅವರಿಗೆ ಡಿಮ್ಯಾಂಡ್ ಇರುತ್ತೆ. ಸರ್ಕಾರಕ್ಕೆ ಸಪೋರ್ಟ್ ಮಾಡಿದರೆ ಕ್ಷೇತ್ರದಲ್ಲಿ ಇತರೆ ಪ್ರದೇಶಗಳಿಗಿಂತ ಹೆಚ್ಚಿನ ಅಭಿವೃದ್ಧಿ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದ್ದರಿಂದಲೇ ನಾವೆಲ್ಲಾ ಈ ಕ್ಷೇತ್ರದಲ್ಲಿ ಪಕ್ಷೇತರರಾಗೇ ಸ್ಪರ್ಧಿಸಿ ಗೆಲ್ಲಬಲ್ಲ ವ್ಯಕ್ತಿ ಎಚ್.ಮಹೇಶ್ ಗೆ ಬೆಂಬಲ ಸೂಚಿಸಿದ್ದೇವೆ. ಇದರಲ್ಲಿ ಯಾವುದೇ ಅನುಮಾನಕ್ಕೆ ಅವಕಾಶವಿಲ್ಲ.
ಹೀಗೆಂದು ಹೇಳಿದವರು ಸ್ಥಳೀಯ ಜೆಡಿಎಸ್ ಅಭ್ಯರ್ಥಿ ಹಾಗೂ ಶಾಸಕ ಎಂ.ಟಿ.ಕೃಷ್ಣಪ್ಪನವರ ಅಳಿಯ ಡಾ.ಚೌದ್ರಿ ನಾಗೇಶ್. ಇತ್ತೀಚೆಗೆ ರಾಜಕೀಯ ರಂಗ ಪ್ರವೇಶವನ್ನು ಬಿಜೆಪಿ ಸೇರುವುದರೊಂದಿಗೆ ಮಾಡಿದ್ದ ನಾಗೇಶ್ ಬಿಜೆಪಿ ಅಭ್ಯರ್ಥಿಯಾಗಿ ಜೆಡಿಎಸ್ ಮುಖಂಡರಾಗಿದ್ದ ಬಿ.ಕೆ.ಸೋಮಣ್ಣ ಎಂದು ಘೋಷಣೆಯಾಗುತ್ತಿದ್ದಂತೆ ಬಿಜೆಪಿಯಿಂದ ದೂರವಾಗಿ ಪಕ್ಷೇತರ ಅಭ್ಯರ್ಥಿ ಹೆಚ್.ಮಹೇಶ್ ಅವರೊಂದಿಗೆ ಗುರುತಿಸಿಕೊಂಡಿದ್ದರು.
ಪ್ರಚಾರದಿಂದ ದೂರ: ಚುನಾವಣಾ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಡಾ.ಚೌದ್ರಿ ನಾಗೇಶ್ ಬಿಜೆಪಿಯಲ್ಲಿ ಟಿಕೆಟ್ ಅಪೇಕ್ಷೆ ಪಟ್ಟಿಯಲ್ಲೇ ಇಲ್ಲದ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ. ಏಕಾಏಕಿ ಈ ನಿರ್ಣಯ ತಮಗೆ ಸರಿಕಂಡುಬಾರದ ಹಿನ್ನೆಲೆಯಲ್ಲಿ ತಾವು ಬಿಜೆಪಿಯ ಚುನಾವಣಾ ಪ್ರಚಾರದಿಂದ ದೂರವಿರುವುದಾಗಿ ಹೇಳಿದರು. ತಾವು ಪಕ್ಷೇತರ ಅಭ್ಯಥಿಂಯ ಪರವಾಗಿ ಮತಯಾಚನೆ ಮಾಡುವ ವೇಳೆ ತಮ್ಮ ಮಾವನವರ ವಿರುದ್ಧವೂ ಮಾತನಾಡುವ ಅವಕಾಶ ಬರುತ್ತದೆ. ಸತ್ಯಾಂಶವಿದ್ದುದನ್ನು ಮಾತನಾಡಲೇ ಬೇಕಾಗುತ್ತದೆ. ಇದು ರಾಜಕೀಯ ಧರ್ಮ. ಅನಿವಾರ್ಯ ಕೂಡ ಎಂದರು.
ತಮ್ಮ ನಿಲುವು ಪಕ್ಷೇತರ ಅಭ್ಯರ್ಥಿಯಾಗಿರುವ ಸ್ನೇಹಿತ ಹೆಚ್.ಮಹೇಶ್‌ನ ಗೆಲವು ಕಾಣುವುದು ಅಷ್ಟೇ ಎಂದು ಡಾ.ಚೌದ್ರಿ ನಾಗೇಶ್ ಖಡಾಖಂಡಿತವಾಗಿ ಹೇಳಿದರು.
ದ್ರಾಕ್ಷಿ ಗೊಂಚಲು: ಪಕ್ಷೇತರ ಅಭ್ಯರ್ಥಿ ಹೆಚ್.ಮಹೇಶ್ ಅವರು ತಮ್ಮ ಚಿಹ್ನೆಯಾದ ದ್ರಾಕ್ಷಿಯನ್ನು ಕಾರ್ಯಕರ್ತರಿಗೆ ಮನದಟ್ಟು ಮಾಡಲು ಎಲ್ಲಾ ಮುಖಂಡರ ಕೈಗೆ ದ್ರಾಕ್ಷಿ ಗೊಂಚಲು ನೀಡಿ ಚುನಾವಣಾ ಪ್ರಚಾರ ಶುರು ಮಾಡಿದರು. ತಾವು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದರಿಂದ ಎಲ್ಲಾ ಪಕ್ಷಗಳ, ಎಲ್ಲಾ ಸಮುದಾಯದ ಮುಖಂಡರು, ಮತದಾರರು ತಮ್ಮನ್ನು ಬೆಂಬಲಿಸುತ್ತಿದ್ದಾರೆ.
ಆದ್ದರಿಂದ ಈ ಬಾರಿ ತಮ್ಮನ್ನು ಈ ಕ್ಷೇತ್ರದ ಜನರು ಶಾಸಕನನ್ನಾಗಿ ಆಯ್ಕೆ ಮಾಡುವುದರಲ್ಲಿ ಅನುಮಾನವೇ ಇಲ್ಲ ಎಂದು ಪಕ್ಷೇತರ ಅಭ್ಯರ್ಥಿ ಹೆಚ್.ಮಹೇಶ್ ವಿಶ್ವಾಸ ವ್ಯಕ್ತಪಡಿಸಿದರು. ಮುಖಂಡರಾದ ಜಯಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

