'ಹಬ್ಬಕ್ಕೂ ಕಾವ್ಯಕ್ಕೂ ಭಾವನಾತ್ಮಕ ನಂಟಿದೆ'
ಚಿಕ್ಕನಾಯಕನಹಳ್ಳಿ: ಕಾವ್ಯದ ಹುಟ್ಟು ಕವಿಯ ಪರಿಸರ ಮತ್ತು ಆತನ ಮನಸ್ಥಿತಿ ಅವಲಂಬಿಸಿರುತ್ತದೆ ಎಂದು ಶಿಕ್ಷಕ ಸಿ.ಗುರುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ರೋಟರಿ ಬಾಲಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗು ರೋಟರಿ ಕ್ಲಬ್ ವತಿಯಿಂದ ಏರ್ಪಡಿಸಿದ್ದ ಕವಿಗೋಷ್ಠಿಯಲ್ಲಿ ಮಾತನಾಡಿದರು.
ಹಿಂದು ಸಂಸ್ಕೃತಿಯ ಹಬ್ಬಗಳಿಗೂ ಹಾಗೂ ಕಾವ್ಯಕ್ಕೂ ತನ್ನದೇ ಆದ ಭಾವನಾತ್ಮಕ ಸಂಬಧವಿದೆ. ಪರಿಸರದಲ್ಲಿನ ಮರಗಿಡಗಳು, ಪ್ರಾಣಿ, ಪಕ್ಷಿಗಳಿಗೆ ವಸಂತನ ಆಗಮನ ಸಂತಸ ತಂದರೆ, ಕವಿ ತನ್ನ ಸುತ್ತಮುತ್ತಲಿನ ಜೀವ ವೈವಿಧ್ಯಗಳಿಂದ ಪುಳಕಿತನಾಗಿ ತನ್ನ ಭಾವನೆಗಳಿಗೆ ಅಕ್ಷರ ರೂಪ ಕೊಡುತ್ತಾನೆ ಎಂದು ನುಡಿದರು.
ಕವಿ-ರಂಗಕರ್ಮಿ ನಟರಾಜ್ ಹೊನ್ನವಳ್ಳಿ ಮಾತನಾಡಿ, ಸಮಾಜ ದಿನೇದಿನೇ ಸಾಂಸ್ಕೃತಿಕವಾಗಿ ಬಡವಾಗುತ್ತಿದೆ. ಮಾತಿನಲ್ಲಿ ಸಂಸ್ಕೃತಿ ಅಭಿವೃದ್ಧಿಯತ್ತ ಕೊಂಡೊಯ್ಯುವ ಒಣ ಭಾಷಣಗಳನ್ನು ಸುರಿಯುತ್ತೇವೆಯೇ ಹೊರತು, ಕಾರ್ಯರೂಪಕ್ಕೆ ತರುತ್ತಿಲ್ಲ ಎಂದು ವಿಷಾದಿಸಿದರು.
ಈ ನಿಟ್ಟಿನಲ್ಲಿ ಇಂದಿನ ಸ್ಥಿತಿಯಲ್ಲಿ ಸಂಸ್ಕೃತಿ ಅಪಾಯದ ಅಂಚಿನಲ್ಲಿದೆ. ಇತಿಹಾಸವನ್ನು ಮರು ಪಡೆಯಲು ನಿರಂತರವಾಗಿ ಪ್ರಯತ್ನಿಸಬೇಕು. ಅನ್ನ ನೀಡುವ ರೈತನ ಕಾಯಕ ತಪಸ್ಸಿನಷ್ಟೇ ಶ್ರೇಷ್ಠ. ಈ ಹಿನ್ನೆಲೆಯಲ್ಲಿಯೇ ರಾಷ್ಟ್ರಕವಿ ಕುವೆಂಪು ರೈತನನ್ನು ನೇಗಿಲ ಯೋಗಿ ಎಂದು ತಮ್ಮ ಕಾವ್ಯದಲ್ಲಿ ಬಣ್ಣಿಸಿದ್ದು ಎಂದು ನೆನಪಿಸಿಕೊಂಡರು.
ವೃತ್ತ ನಿರೀಕ್ಷಕ ಸಿ.ಆರ್.ರವೀಶ್ ಮಾತನಾಡಿ, ಸಾಧನೆ ಮಾಡಲು ಉನ್ನತ ಹುದ್ದೆಯೇ ಬೇಕಿಲ್ಲ. ಸಾಧಿಸುವ ಛಲ, ಗೆಲ್ಲುವ ನಂಬಿಕೆಯಿದ್ದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು. ಹೊಗಳಿಕೆ, ಕೀರ್ತಿ ಬಯಸದೆ ಸೇವೆ ಮಾಡಿದಾಗ ಮಾತ್ರ, ಅದು ನಿಜವಾದ ಸಮಾಜಸೇವೆ ಆಗುತ್ತದೆ ಎಂದು ಕಿವಿಮಾತು ಹೇಳಿದರು.
ಸಾಹಿತಿ ಕವಿತಾಕೃಷ್ಣ, ಎಂ.ವಿ.ನಾರಜರಾವ್ ಮತ್ತಿತರರು ಮಾತನಾಡಿದರು. ಇದೆ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

