ಕಾಂಗ್ರೆಸ್ಗೆ ನಾಯಕತ್ವ ಗೊಂದಲ: ಶೆಟ್ಟರ್
ಗುಬ್ಬಿ: ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಗೊಂದಲದಲ್ಲಿ ಇರುವುದರಿಂದ ಆ ಪಕ್ಷ ಇನ್ನು ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ. ಪಟ್ಟಣದ ಸರ್ಕಾರಿ ಬಾಲಕಿಯರ ಪಾಠಶಾಲೆ ಅವರಣದಲ್ಲಿ ಬಿಜೆಪಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಮುಂದಿನ ನಾಯಕತ್ವದ ಬಗ್ಗೆ ಯಾವುದೇ ಗೊಂದಲ ಇಲ್ಲ. ಆದರೆ, ಕಾಂಗ್ರೆಸ್ ಈ ವಿಚಾರದಲ್ಲಿ ಗೊಂದಲದಲ್ಲಿದೆ ಎಂಬುದನ್ನು ಮತದಾರರು ಮನಗಾಣಬೇಕಾಗಿದೆ ಎಂದರು. ಬಿಜೆಪಿ ಸರ್ಕಾರ ಇಲ್ಲಿಯವರೆಗೂ ಮಾಡಿರುವ ಸಾಧನೆ ಮುಂದಿಟ್ಟುಕೊಂಡು ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಮತದಾರ ಈ ಬಾರಿ ಯೋಚಿಸಿ ಮತ ನೀಡಬೇಕಿದೆ. ಬಿಜೆಪಿ ಪ್ರಣಾಳಿಕೆಯನ್ನು ಕಾಂಗ್ರೆಸ್ ಕಾಪಿಮಾಡಿ ನಂತರ ಅವರ ಕಾರ್ಯಕರ್ತರು ನಾವೇ ಮೊದಲು ಪ್ರಣಾಳಿಕೆ ಮಾಡಿದ್ದು, ನಾವು ಪ್ರಣಾಳಿಕೆ ರಚಿಸುವಾಗ ಲೀಕ್ ಆಗಿದೆ ಎಂದು ಹೇಳುವರು ಅಡಳಿತವನ್ನು ಯಾವ ರೀತಿ ಮಾಡುತ್ತಾರೆ ಎಂದು ಕಟಕಿಯಾಡಿದರು. ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಆರ್.ನಾಟರಾಜು. ತಾಲೂಕು ಬಿಜೆಪಿ ಅಧ್ಯಕ್ಷ ಸಾಗರನಹಳ್ಳಿ ನಟರಾಜು, ಜಿಲ್ಲಾ ಉಪಾಧ್ಯಕ್ಷ ಹೆಚ್.ಟಿ.ಭೈರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಂಚಾಕ್ಷರಿ, ನಂದೀಶ್, ಎನ್.ಸಿ,ಪ್ರಕಾಶ್, ನಂಜೇಗೌಡ, ನಾಗರತ್ನಮ್ಮ, ಮತ್ತಿತರರು ಉಪಸ್ಥಿತರಿದ್ದರು.
ಬಸ್ನಿಂದ ಜಾರಿ ಬಿದ್ದು ವ್ಯಕ್ತಿ ಸಾವು
ಪಾವಗಡ: ಖಾಸಗಿ ಬಸ್ವೊಂದರಿಂದ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಪಟ್ಟಣದ ನಾಗರಕಟ್ಟೆ ಬಳಿ ಶುಕ್ರವಾರ ನಡೆದಿದೆ. ರಂಗನಾಥಪ್ಪ (50) ಮೃತ ವ್ಯಕ್ತಿ. ಪಟ್ಟಣದಿಂದ ರಂಗನಾಥ್ ಎಂಬ ಖಾಸಗಿ ಬಸ್ವೊಂದರಲ್ಲಿ ತಮ್ಮ ಗ್ರಾಮಕ್ಕೆ ವಾಪಸ್ಸು ಹೋಗುತ್ತಿರುವಾಗ ಆಕಸ್ಮತ್ ಬಸ್ನಿಂದ ಕಾಲು ಜಾರಿ ಕಳೆಗೆ ಬಿದ್ದ ಪರಿಣಾಮ ಆತ ಸ್ಥಳದಲ್ಲಿಯೆ ಮ್ರತಪಟ್ಟಿದ್ದಾರೆ. ಸ್ಥಳಕ್ಕೆ ಪಾವಗಡ ಠಾಣಾ ಪಿಎಸ್ಐ ರಾಮಕೃಷ್ಣಪ್ಪ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜೀಪ್ ಉರುಳಿ ವ್ಯಕ್ತಿ ಸಾವು
ಗುಬ್ಬಿ: ತಾಲೂಕಿನ ಚನ್ನವಡೇರಹಳ್ಳಿ ಗ್ರಾಮದಲ್ಲಿ ಜೀಪ್ವೊಂದು ಉರುಳಿ ಬಿದ್ದ ಪರಿಣಾಮ, ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ. ಇಲ್ಲಿನ ಮಳೇಕಲ್ಲಹಳ್ಳಿ ಗ್ರಾಮದ ಜಗದೀಶ್ (32) ಮೃತಪಟ್ಟವರು. ಸ್ವಗ್ರಾಮಕ್ಕೆ ಬರುವಾಗ ಮಾರ್ಗ ಮಧ್ಯೆ ಆಯ ತಪ್ಪಿ ಬಿದ್ದ ಜೀಪ್ ಕೆಳೆಗೆ ಸಿಲುಕಿ ಜಗದೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

