ರಾಜ್ಯದಲ್ಲಿ ಬೇಜವಾಬ್ದಾರಿ ಮುಖ್ಯಮಂತ್ರಿ: ಯಡಿಯೂರಪ್ಪ
ಕನ್ನಡಪ್ರಭ ವಾರ್ತೆ, ಗುಬ್ಬಿ, ಏ.27
ಬಿಜೆಪಿಯವರು ರಾಜ್ಯಕ್ಕೆ ಬೇಜವಾಬ್ದಾರಿ ಮುಖ್ಯಮಂತ್ರಿ ಕೊಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ರಾಜ್ಯಾಧಕ್ಷ ಬಿ.ಎಸ್. ಯಡಿಯೂರಪ್ಪ ಟೀಕಿಸಿದರು.
ಅವರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಅವರಣದಲ್ಲಿ ಕೆಜೆಪಿಯಿಂದ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿ, ನಾನು ಗುಬ್ಬಿ ತಾಲೂಕಿಗೆ ಹಿಂದುಳಿದ ಸಮುದಾಯ ಗಮನದಲ್ಲಿಟ್ಟುಕೊಂಡು ಜಿ.ಎನ್. ಬೆಟ್ಟಸ್ವಾಮಿಯನ್ನು ಆಯ್ಕೆ ಮಾಡಿದ್ದೇನೆ. ಹಿಂದುಳಿದ ವರ್ಗವನ್ನು ಸಮಾಜದ ಮುಖ್ಯ ವೇದಿಕೆಗೆ ತರಲು ನಿಮ್ಮೆಲ್ಲರ ಮತವನ್ನು ಕೆಜೆಪಿಯ ತೆಂಗಿನ ಕಾಯಿ ಗುರುತಿಗೆ ಹಾಕುವಂತೆ ಮನವಿ ಮಾಡಿದರು. ಮತದಾರರು ಕೊಡುವ ಮತ ಬೆಟ್ಟಸ್ವಾಮಿಗೆ ಅಲ್ಲ, ಅದು ಯಡಿಯೂರಪ್ಪ ಮತ್ತು ಜಿ.ಎಸ್. ಬಸವರಾಜುರವರಿಗೆ ಎಂದು ಹಾಕಬೇಕು. ನಾನು ಮುಖ್ಯಮಂತ್ರಿಯಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾಗ್ಯೂ ಬಿಜೆಪಿಯಲ್ಲಿದ್ದ ಹಲವರ ಕುತಂತ್ರದಿಂದ ರಾಜಿನಾಮೆ ನೀಡಿ ಮತ್ತೆ ಜನರ ಮುಂದೆ ಬಂದಿದ್ದೇನೆ. ಹೊಸ ಪಕ್ಷ ಕಟ್ಟಿ 212 ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿಗೆ ಸವಾಲು ಹಾಕಿದ್ದೇನೆ. ನನ್ನ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜನ ಮತ್ತೆ ನನ್ನನ್ನು ಮುಖ್ಯಮಂತ್ರಿ ಪದವಿಗೆ ತರಲಿ ಎಂದರು.
ನಾನು ಅಧಿಕಾರದಲ್ಲಿದ್ದಾಗ ರೈತರಿಗೆ ಸಹಕಾರಿ ಬ್ಯಾಂಕ್ಗಳಲ್ಲಿ ಶೇ.3ರ ಬಡ್ಡಿದರದಲ್ಲಿ ಸಾಲ ವಿತರಣೆ, 17 ಸಾವಿರ ಕೋಟಿ ಪ್ರತ್ಯೇಕ ಕೃಷಿ ಬಜೆಟ್, 30 ಲಕ್ಷ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್, ಭಾಗ್ಯಲಕ್ಷ್ಮಿ ಯೋಜನೆ ಮುಂತಾದ ಕಾರ್ಯಕ್ರಮಗಳನ್ನು ನೀಡಿದ್ದೇನೆ ಎಂದರು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಹಲವು ಹಗರಣಗಳ ಮೂಲಕ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದೆ. ರಾವುವ್ ಗಾಂಧಿ ಅಭಿವೃದ್ಧಿ ಮಂತ್ರ ಜಪಿಸುತ್ತಾರೆ. ದಿನ ನಿತ್ಯದ ವಸ್ತುಗಳ ಬೆಲೆಯನ್ನು ಏರಿಸುವ ಮೂಲಕ ಜನ ಸಾಮಾನ್ಯರಿಗೆ ಹೆಚ್ಚಿನ ಹೊರೆ ಹೊರಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ತಾಲೂಕು ದತ್ತು ತೆಗೆದುಕೊಳ್ಳುತ್ತೇನೆ: ನಾನು ನಿರಂತರ ವಿದ್ಯುತ್ನ್ನು ರಾಜ್ಯದ ಜನತೆಗೆ ಕೊಡುವ ಉದ್ದೇಶದಿಂದ ಛತ್ತೀಸ್ಗಡದಲ್ಲಿ ಭೂಮಿ ಕೊಂಡು ವಿದ್ಯುತ್ ತಯಾರಿಸಲು ಒಪ್ಪಂದ ಮಾಡಿಕೊಂಡರೆ ಕೇಂದ್ರ ಸರ್ಕಾರ ದುರುದ್ದೇಶದಿಂದ ಕಲ್ಲಿದ್ದಲು ಪೂರೈಕೆ ಮಾಡಲು ಮುಂದಾಗಲಿಲ್ಲ ಎಂದು ಆರೋಪಿಸಿದರು. ಗುಬ್ಬಿ ತಾಲೂಕನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡಲು ನಾನು ಶ್ರಮಿಸುತ್ತೇನೆ ಎಂದರು.
ಕೆಜೆಪಿ ಅಭ್ಯರ್ಥಿ ಜಿ.ಎನ್.ಬೆಟ್ಟಸ್ವಾಮಿ ಮತನಾಡಿ, ಸಂಸದ ಜಿ.ಎಸ್.ಬಸವರಾಜು ಹಿಂದುಳಿದ ವರ್ಗದ ಗೊಲ್ಲ ಸಮುದಾಯದ ನನ್ನನ್ನು ಗುಬ್ಬಿ ತಾಲೂಕಿನ ವಿಧಾನಸಭಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದರು. ಅಲ್ಲದೆ ಹೆಚ್ಚು ಮತದಾರರನ್ನು ಹೊಂದಿರುವ ವೀರಶೈವ ಸಮಾಜ ನಿಮ್ಮೊಂದಿಗೆ ಇದ್ದು, ನಿಮ್ಮನ್ನು ಗೆಲ್ಲಿಸುವ ಮೂಲಕ ಗೊಲ್ಲ ಸಮಾಜವನ್ನು ವಿಧಾನ ಸಭೆಗೆ ಕಳಿಸಿಕೊಡುವ ಭರವಸೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

