'ಶಿರಾ ತಾಲೂಕನ್ನು ಜಿಲ್ಲಾ ಕೇಂದ್ರವಾಗಿಸುವೆ'
ಶಿರಾ: ದಿನೇ ದಿನೇ ಬೆಳೆಯುತ್ತಿರುವ ಶಿರಾ ತಾಲೂಕಿನ ಪ್ರತಿನಿಧಿಯಾಗಿ ನನ್ನನ್ನು ಗೆಲ್ಲಿಸಿದರೆ ಜಿಲ್ಲಾ ಕೇಂದ್ರವನ್ನಾಗಿ ಪರಿವರ್ತಿಸಿ ಇಲ್ಲಿನ ಜನರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೆಡಿಕಲ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಒತ್ತು ಕೊಡುವುದಾಗಿ ಕೆಜೆಪಿ ಅಭ್ಯರ್ಥಿ ಇಮ್ತಿಯಾಜ್ ಅಹಮದ್ ತಿಳಿಸಿದರು.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ನಾನು ಸ್ಪರ್ಧಿಸಿರುವುದರಿಂದ ಶಾಸಕ ಟಿ.ಬಿ.ಜಯಚಂದ್ರರಿಗೆ ಸೋಲಿನ ಭೀತಿ ಕಾಡುತ್ತಿದ್ದು, ಅವರ ಹಿಂಬಾಲಕರು ನನ್ನ ವಿರುದ್ಧ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿ ಕ್ಷೇತ್ರದಲ್ಲಿ ನೀರಿನ ರಾಜಕಾರಣ ಪ್ರಮುಖವಾಗಿದೆ. ಆದರೆ ತಾಲೂಕು ಕಚೇರಿಯಲ್ಲೆ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು ಅವರ ಗಮನಕ್ಕೆ ಬಂದಿಲ್ಲವೆ ಎಂದು ಪ್ರಶ್ನಿಸಿದರು.
ಕ್ಷೇತ್ರದಲ್ಲಿ ಮುಸ್ಲಿಂ ಬಾಂಧವರು ನನ್ನನ್ನು ಬೆಂಬಲಿಸಲಿದ್ದಾರೆ. ಜೊತೆಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಲಿಜ ಸಮುದಾಯಕ್ಕೆ ಹೆಚ್ಚಿಸಿದ ಮೀಸಲಾತಿ, ಲಂಬಾಣಿ ಹಾಗೂ ಭೋವಿ ಸಮಾಜಕ್ಕೆ ರಚನೆಯಾದ ಪ್ರಾಧಿಕಾರದಿಂದ ಈ ಸಮುದಾಯದ ಮತಗಳು ಕೆಜೆಪಿಗೆ ಬರಲಿವೆ. ಲಿಂಗಾಯಿತ ಮತಗಳ ಜೊತೆಗೆ ನನ್ನ ಗೆಲವು ಸುಲಭವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಜೆಪಿ ಮುಖಂಡ ವಾಜೀದ್ಖಾನ್, ಎಂ.ಎಸ್.ಯತೀಶ್ ಕುಮಾರ್, ಪಿ.ಎ.ರಘು, ನಫೀಜ್ ಅಹಮದ್, ನಿಸಾರ್ ಅಹಮದ್ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

