ಕಾಂಗ್ರೆಸ್ ಗೆಲವು ಖಚಿತ: ಸಾಸಲು ಸತೀಶ್
ಚಿಕ್ಕನಾಯಕನಹಳ್ಳಿ: ಕ್ಷೇತ್ರದ ಜನರು ಇದುವರೆಗೆ ಆಳಿರುವ ಶಾಸಕರ ಬಗ್ಗೆ ಭ್ರಮನಿರಸನ ಹೊಂದಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾದ ಅಲೆಯಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಾಸಲು ಸತೀಶ್ ನುಡಿದರು.
ಭಾನುವಾರ ಅವರು ಚುನಾವಣಾ ಪ್ರಚಾರದ ವೇಳೆ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದು, ಕಣದಲ್ಲಿ ಪಕ್ಷದ ಬಗ್ಗೆ ಜನರ ಒಲವು ಆಶಾದಾಯಕವಾಗಿದೆ. ನನ್ನ ಗೆಲವಿಗೆ ಪೂರಕವಾದ ಅಂಶಗಳು ವ್ಯಕ್ತವಾಗುತ್ತಿವೆ. ಇದುವರೆಗೂ ತಾಲೂಕನ್ನು ಆಳಿರುವ ಶಾಸಕರು, ಬರೀ ಭಾವನಾತ್ಮಕವಾದ ಅಂಶದ ಮೇಲೆ ಮತಗಳಿಸಿ ಆಯ್ಕೆಯಾಗುತ್ತಿದ್ದರು. ಕಣದಲ್ಲಿ ಕೇವಲ ಇಬ್ಬರೇ ಇರುತ್ತಿದ್ದುದರಿಂದ ಮತದಾರನಿಗೆ ಆಯ್ಕೆಯ ಅವಕಾಶವೇ ಇರುತ್ತಿರಲಿಲ್ಲ. ಆದ್ದರಿಂದ ಜನ ಅನಿವಾರ್ಯವಾಗಿ ಸರತಿಯ ಮೇಲೆ ಪ್ರತಿಸಲವು ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಬದಲಾವಣೆ ಬಯಸುತ್ತಿದ್ದರು. ಇದು ಅಭ್ಯರ್ಥಿಗಳಿಗು ಗೊತ್ತಾಗಿ, ಅವರು ಅಭಿವೃದ್ಧಿಯ ಕಡೆ ಗಮನಹರಿಸದೆ, ತಮ್ಮ ಅಭಿವೃದ್ಧಿಯಲ್ಲೇ ಕಾಲಕಳೆದರು. ಇದರಿಂದ ತಾಲೂಕು ಅಭಿವೃದ್ಧಿಯಲ್ಲಿ ಬಹ ಹಿಂದುಳಿದೆ. ಆದರೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ನನ್ನ ಗೆಲವಿಗೆ ಪೂರಕವಾದ ಅಂಶವಾಗಿದೆ.
ನನಗೆ ಸಿಕ್ಕ ಕಡಿಮೆ ಅವಧಿಯಲ್ಲೇ ಕ್ಷೇತ್ರದ ತುಂಬಾ ಸಂಚರಿಸಿ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇನೆ.ಈ ಚುನಾವಣೆಯಲ್ಲಿ ನನ್ನ ಗೆಲವು ನಿಶ್ಚಿತ ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

