ತುಮಕೂರು

ಕಾರ್ಯಾಂಗದಲ್ಲಿ ಶಾಸಕಾಂಗ ಹಸ್ತಕ್ಷೇಪ ಅಧಿಕ: ಬಿದರಿ

Published On :

ಕ.ಪ್ರ.ವಾರ್ತೆ  ,   ಕೊರಟಗೆರೆ  ,   ಏ.28
ಇಂದಿನ ರಾಜ್ಯ ರಾಜಕಾರಣದಲ್ಲಿ ಪ್ರತಿಯೊಂದು ಪಕ್ಷವೂ ಶಾಸಕರನ್ನು ಅವಲಂಬಿಸಿವೆ. ಪ್ರತೀ ಕ್ಷೇತ್ರವೂ ಒಂದೊಂದು ರಾಜ್ಯವಾಗಿದೆ. ಇಂತಹ ಬೆಳವಣಿಗೆ ನಿಲ್ಲಬೇಕು ಎಂದು ನಿವೃತ್ತ ಡಿಐಜಿ ಶಂಕರ್ ಬಿದರಿ ತಿಳಿಸಿದರು.
ಅವರು ಭಾನುವಾರ  ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಕಾರ್ಯಾಂಗದಲ್ಲಿ ಶಾಸಕಾಂಗದ ಹಸ್ತಕ್ಷೇಪ ಹೆಚ್ಚಾಗಿದೆ. ಬಹುತೇಕ ಕೆಲಸಗಳು ವಿಳಂಬವಾಗುತ್ತಿವೆ. ಎಲ್ಲಾ ಅಧಿಕಾರಿಗಳ ಕೆಲಸಗಳನ್ನು ಆ ಭಾಗದ ಶಾಸಕರೇ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಕ್ರಮವನ್ನು ಎಸಗಿ ಜೈಲು ಸೇರುತ್ತಿದ್ದಾರೆ ಎಂದರು.
ಶಾಸಕ, ಮಂತ್ರಿ ಎಂದರೆ ಅವರು ಇಡೀ ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡಬೇಕು. ಬಹಳಷ್ಟು  ಶಾಸಕರು ಕೇವಲ ಅವರ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಇದು ರಾಜ್ಯದ  ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಪ್ರತಿಪಾದಿಸಿದರು.
ಕಾಂಗ್ರೆಸ್‌ಗೆ ಬಹುಮತ: ಈ ಬಾರಿ ಚುನಾಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಚಂಡ ಬಹುಮತ ಸಿಗುತ್ತದೆ.  ಈ ಹಿನ್ನೆಲೆಯಲ್ಲಿ ಕೊರಟಗೆರೆ ಕ್ಷೇತ್ರದ ಜನರು ಓರ್ವ  ಸಜ್ಜನ ವ್ಯಕ್ತಿ ಪರಮೇಶ್ವರ್ ಅವರಿಗೆ ಮತವನ್ನು ನೀಡಿ ವಿಜಯಿ ಮಾಡಬೇಕು ಎಂದು ಮನವಿ ಮಾಡಿದರು.
ಆಸೆ, ಆಮಿಷದಿಂದ ಬಂದಿಲ್ಲ: ನಾನು ಯಾವುದೇ ಆಸೆ, ಆಮಿಷದಿಂದ ರಾಜಕೀಯಕ್ಕೆ ಬಂದಿಲ್ಲ. ರಾಜಕೀಯಕ್ಕೆ ಬಂದಿರುವುದು ರಾಜ್ಯದಲ್ಲಿ ಬದಲಾವಣೆ ತರುವ ಉದ್ದೇಶದಿಂದ. ನನ್ನ ಮುಂದೆ ಸಾಮಾಜಿಕ ಕಳಕಳಿಯಿರುವಂತಹ ಹಲವಾರು ಮಂದಿ ಇನ್ನು ರಾಜಕೀಯಕ್ಕೆ ಪ್ರವೇಶ ಮಾಡಿಲ್ಲ. ಮಡಿವಂತರಿಗೆ ರಾಜಕೀಯವಲ್ಲ ಎನ್ನುವ ಅಪಾದನೆಯಿದೆ. ಇದು ತೊಲಗಬೇಕು. ರಾಜಕೀಯಕ್ಕೆ ಸಜ್ಜನರು ಹೆಚ್ಚು ಬರಬೇಕು. ಆಗ ಇಲ್ಲಿರುವಂತಹ ಸ್ವಾರ್ಥಪರರು, ಸ್ವಜನ ಪಕ್ಷಪಾತಿಗಳು, ಜಾತಿವಾದಿಗಳನ್ನು ಬಡಿದೋಡಿಸಬಹುದು ಎಂದರು.
ಸುದ್ದಿಗೋಷ್ಠಿಗೂ ಮುನ್ನ ವಿಧಾನ ಸಭಾ ಕ್ಷೇತ್ರದ ಚಿಕ್ಕತೊಟ್ಲಕೆರೆ, ಬ್ರಹ್ಮಸಂದ್ರ, ಕೆಸ್ತೂರು ಮಾರ್ಗದಲ್ಲಿ ಮತಯಾನೆ ಮಾಡಿದರು. ಇವರೊಂದಿಗೆ ಮುರುಳೀಧರ್ ಹಾಲಪ್ಪ, ರಂಗನಾಥಪ್ಪ, ಜಾಲಿ ಕೃಷ್ಣಮೂರ್ತಿ, ದೀನಾ ನಾಯ್ಕ, ಕಾರ್ಯಕರ್ತರಾದ ಮಲ್ಲಿಕಾರ್ಜುನ್, ಕೆ.ಆರ್. ಓಬಳರಾಜು, ರಾಮಕೃಷ್ಣಪ್ಪ ಸೇರಿಂದತೆ ನೂರಾರು ಜನ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.