ಕಾಂಗ್ರೆಸ್ ಪರ ತಾರೆಯರ ಪ್ರಚಾರ
ತುಮಕೂರು: ಸರಳ, ಸಜ್ಜನ, ಸಚ್ಚಾರಿತ್ರ್ಯವಂತ ಪರಮೇಶ್ವರ್ ಅವರನ್ನು ಬೆಂಬಲಿಸುವಂತೆ ಸಿನಿಮಾ ತಾರೆಯರಾದ ರಮೇಶ್ಭಟ್, ಶ್ರೀನಿವಾಸಮೂರ್ತಿ ಹಾಗೂ ಜಯಂತಿ ಮನವಿ ಮಾಡಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪರಮೇಶ್ವರ್ ಅವರನ್ನು ನಾವು ಹಲವು ವರ್ಷಗಳಿಂದ ಬಲ್ಲೆವು. ಅವರು ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವರಾದಾಗಿನಿಂದ ಪರಿಚಯ. ಅವರ ಸಜ್ಜನಿಕೆ, ಸಚ್ಚಾರಿತ್ರ್ಯದ ಹಿನ್ನೆಲೆಯಲ್ಲಿ ಅವರ ಪರ ಮತ ಯಾಚಿಸಲು ಬಂದಿದ್ದೇವೆ ಎಂದರು.
ಯಾವುದೇ ಪಕ್ಷದ ಸಜ್ಜನ ಅಭ್ಯರ್ಥಿ ಅವರ ಪರ ಪ್ರಚಾರ ಮಾಡಲು ಕರೆದಲ್ಲಿ ತಾವು ಹೋಗುವುದಾಗಿ ಮೂರು ಮಂದಿ ತಾರೆಯರು ಸ್ಪಷ್ಟಪಡಿಸಿದರು. ಜನ ನಾವು ಹೇಳಿದಾಕ್ಷಣ ಮತ ನೀಡುವಷ್ಟು ಮೂರ್ಖರಲ್ಲ ಎಂಬುದು ತಮಗೆ ಗೊತ್ತಿದೆ. ಆದರೆ ಪರಮೇಶ್ವರ್ ಅವರ ಒಳ್ಳೆಯತನವನ್ನಷ್ಟೆ ದೃಷ್ಟಿಯಲ್ಲಿಟ್ಟುಕೊಂಡು ಮತ ಯಾಚಿಸುತ್ತಿದ್ದೇವೆ. ಇದರಲ್ಲಿ ಯಾವುದೇ ಲಾಭದ ದೃಷ್ಟಿಕೋನವಿಲ್ಲ ಎಂದರು. ಪರಮೇಶ್ವರ್ ತಪ್ಪುಗಳನ್ನು ಕ್ಷಮಿಸಿ ಮತ ನೀಡುವಂತೆ ಮನವಿ ಮಾಡಿದ ತಾರೆಯರು ಪರಮೇಶ್ವರ್ ಪರ ಕ್ಷೇತ್ರದಲ್ಲಿ ರೋಡ್ಶೋ ಮಾಡುವುದಾಗಿ ತಿಳಿಸಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

