'ಗೌರಿಶಂಕರ್ಗೆ ರಾಜಕಾರಣವೆಂದರೆ ವ್ಯಾಪಾರ'
ಕ.ಪ್ರ.ವಾರ್ತೆ ತುಮಕೂರು ಏ.29
ಜೆಡಿಎಸ್ ಅಭ್ಯರ್ಥಿ ಗೌರಿಶಂಕರ್ ಅವರಿಗೆ ರಾಜಕಾರಣವೆಂದರೆ ವ್ಯಾಪಾರ ಇದ್ದಂತೆ ಎಂದು ತುಮಕೂರು ಗ್ರಾಮಾಂತರ ಶಾಸಕ ಸುರೇಶ್ಗೌಡ ಟೀಕಿಸಿದ್ದಾರೆ.
ಅವರು ಹೊನ್ನುಡಿಕೆ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.
ಗೌರಿಶಂಕರ್ನ ಬಂಡವಾಳ ಕ್ಷೇತ್ರದ ಮತದಾರಿಗೆ ತಿಳಿದಿದೆ. ಈ ಹಿಂದೆ ಮಧುಗಿರಿಯಲ್ಲಿ ನೀಡಿದ್ದ ಜನಾದೇಶವನ್ನು ತಿರಸ್ಕರಿಸಿ ಗೆದ್ದ 2 ತಿಂಗಳಲ್ಲಿ ಅಲ್ಲಿನ ಜನರಿಗೆ ಮಂಕುಬೂದಿ ಎರಚಿ ರಾಜಿನಾಮೆ ನೀಡಿ ಮತದಾರರಿಗೆ ಮತ್ತು ಸರ್ಕಾರದ ಬೊಕ್ಕಸಕ್ಕೆ ಸಷ್ಟವನ್ನು ಉಂಟುಮಾಡಿದ ಇವರು ರಾಜಕಾರಣವನ್ನು ವ್ಯಾಪಾರ ಮಾಡಿಕೊಂಡಿದ್ದಾರೆ ಎಂದು ಹರಿಹಾಯ್ದರು. ಪವಿತ್ರ ಶಾಸಕ ಪದವಿಯನ್ನು ಕೂಡಾ ವ್ಯಾಪಾರಕ್ಕೆ ಇಟ್ಟ ಇವರಿಗೆ ಈ ಚುನಾವಣೆಯಲ್ಲಿ ಮತದಾರ ತಕ್ಕ ಪಾಠ ಕಲಿಸಬೇಕು ಎಂದು ಬಿ ಸುರೇಶ್ಗೌಡ ಆಗ್ರಹಿಸಿದರು
ಜೆಡಿಎಸ್ ಅಭ್ಯರ್ಥಿ ಹಣ ಮತ್ತು ಮದ್ಯ ಸರಬರಾಜು ಮಾಡಿ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕ್ಷೇತ್ರವನ್ನು 889 ಕೋಟಿ ರು. ಗಳಲ್ಲಿ ಕುಡಿಯುವ ನೀರು, ಹೆಬ್ಬೂರು ಗೂಳೂರು ಎತ ನೀರಾವರಿ ಮುಖೇನ 52 ಕೆರೆಗಳಿಗೆ ನೀರು ಹರಿಸಿರುವುದು ನಿರಂತರ ವಿದ್ಯುತ್ ಯೋಜನೆ ಅನುಷ್ಠಾನ, ಉತ್ತಮ ರಸ್ತೆಗಳ ನಿರ್ಮಾಣ 10 ಸಾವಿರ ಮನೆಗಳ ಮುಂಜೂರಾತಿ ಮಾಡಿಸಿ ಇಡೀ ರಾಜ್ಯದಲ್ಲೆ ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದೇನೆ ಎಂದರು.
ಹೊನ್ನುಡಿಕೆಯ ಮುಖ್ಯರಸ್ತೆಯಲ್ಲಿ ಬಿ. ಸುರೇಶ್ ಗೌಡರನ್ನು ಕಾರ್ಯಕರ್ತರು ಮೆರವಣಿಗೆ ಮಾಡಿದರು. ಜಿ.ಪಂ ಸದಸ್ಯ ರಾಮಚಂದ್ರಯ್ಯ ಹೊನ್ನುಡಿಕೆ, ಪಂ ಅಧ್ಯಕ್ಷ ಶಿವರಾಜು, ಭಾರತೀ ವಿಶ್ವನಾಥ್, ನೀಲಕಂಠಪ್ಪ ಎಪಿಎಂಸಿ ಸದಸ್ಯ ಗೂಳೂರು ಶಿವಕುಮಾರ್ ಓಂನಮೋ ನಾರಾಯಣ್, ಪದ್ಮನಾಭ್, ಆನಂದಪ್ಪ ಸಿದ್ದೇಗೌಡ(ಬಿದರಕಟ್ಟೆ) ಸಾಸಲು ಮೂರ್ತಿ, ಕುರಬರ ನಾಯಕ ಕಿಟ್ಟಿ, ದುಬೈ ಹನುಮಂತು ಉಪಸ್ಥಿರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

