ಮನೆ ಮಗ ವೀರಭದ್ರಯ್ಯ ಗೆಲ್ಲಿಸಿ: ಎಚ್.ಡಿ. ದೇವೇಗೌಡ
ಕ.ಪ್ರ.ವಾರ್ತೆ ಮಧುಗಿರಿ ಏ. 30
ಮಧುಗಿರಿಯ ಮನೆ ಮಗ ವೀರಭದ್ರಯ್ಯರನ್ನು ಗೆಲ್ಲಿಸಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕಾರ್ಯಕರ್ತರಿಗೆ ಮನವಿ ಮಾಡಿದರು.
ಅವರು ಇಲ್ಲಿನ ಮಾಲಿ ಮಹಲಿಂಗಪ್ಪ ರಂಗಮಂದಿರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ವೀರಭದ್ರಯ್ಯ ಅವರು ಉನ್ನತ ಹುದ್ದೆ ತ್ಯಜಿಸಿ ಮಧುಗಿರಿ ಕ್ಷೇತ್ರಕ್ಕೆ ಸೇವೆ ಮಾಡಲು ಬಂದಿದ್ದಾರೆ. ಅವರನ್ನು ಮಧುಗಿರಿ ಜನತೆ ಗೆಲ್ಲಿಸಬೇಕೆಂದು ಮನವಿ ಮಾಡಿದರು. ಅವರು ವಿಆರ್ಎಸ್ ಪಡೆಯಲು ಅನೇಕ ಕಿಡಿಗೇಡಿಗಳು ಅನೇಕ ತೊಂದರೆ ಮಾಡಿದ್ದಾರೆ. ಅವರು ಕೊನೆಗೆ ನ್ಯಾಯಾಲಯಕ್ಕೆ ಹೋಗಿ ಸ್ವಯಂ ನಿವೃತ್ತಿ ಆದೇಶ ತಂದರು. ಅವರ ಬಹು ದಿನದ ಬಯಕೆಯಂತೆ ಮಧುಗಿರಿ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಟಿಕೆಟ್ ನೀಡಿದೆ. ಅವರನ್ನು ಗೆಲ್ಲಿಸಿ ಶಾಸನ ಸಭೆಗೆ ಕಳುಹಿಸಿಕೊಡಿ ಎಂದರು. ಜೆಡಿಎಸ್ ಜಾತಿವಾದಿ ಪಕ್ಷವಲ್ಲ. ಜಾತ್ಯತೀತ ಪಕ್ಷ. ಎಲ್ಲಾ ಜಾತಿ, ಜನಾಂಗದವರಿಗೂ ಟಿಕೆಟ್ ನೀಡಿರುವ ಹೆಗ್ಗಳಿಕೆ ಜೆಡಿಎಸ್ದ್ದು. ಶೇ. 33 ರಷ್ಟು ಮಹಿಳಾ ಮೀಸಲಾತಿ ಹೋರಾಟದಲ್ಲೂ ಜೆಡಿಎಸ್ ಪಾತ್ರವಿದೆ ಎಂದರು. ಕಾರ್ಯಕ್ರದಮಲ್ಲಿ ಕೃಷ್ಣಪ್ಪ, ಅಭ್ಯರ್ಥಿ ವೀರಭದ್ರಯ್ಯ, ಗಂಗಹನುಮಯ್ಯ ಇತರರು ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

