ಕರ್ನಾಟಕದಲ್ಲಿ ವಿರೋಧ ಪಕ್ಷ ಇಲ್ಲವೇ ಇಲ್ಲ'
ಕೊರಟಗೆರೆ: ಕರ್ನಾಟಕದಲ್ಲಿ ವಿರೋಧ ಪಕ್ಷ ಎನ್ನುವುದು ಇಲ್ಲವೇ ಇಲ್ಲ, ಇದುವರೆವಿಗೂ ಕಾಂಗ್ರೆಸ್ ಸದನ ಒಳಗೆ ಮತ್ತು ಹೊರಗೆ ಎಂದೂ ವಿರೋಧ ಪಕ್ಷದವರ ಹಾಗೆ ನಡೆದುಕೊಂಡೇ ಇಲ್ಲ ಎಂದು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಲೇವಡಿ ಮಾಡಿದರು. ಅವರು ಕೊರಟಗೆರೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ನನ್ನ ಮುಂದಿನ ಮುಖ್ಯಮಂತ್ರಿ ಯಾರೂ ಎಂದು ಹೇಳದೆಯೇ ಕಾಂಗ್ರೆಸ್ ಚುನಾಣೆಯನ್ನು ಎದುರಿಸುತ್ತಿದೆ. ನನಗೆ ಅವಕಾಶ ಸಿಕ್ಕರೆ ನಾನೇ ಮುಖ್ಯಮಂತ್ರಿ ಎಂದು ಪರಮೇಶ್ವರ್, ನಾನೇ ಮುಖ್ಯಂತ್ರಿ ಎಂದು ಸಿದ್ದರಾಮಯ್ಯ, ಜಾಫರ್ ಶರೀಫ್, ಶಾಮನೂರು ಶಿವಶಂಕರಪ್ಪ ಹೀಗೆ ಹತ್ತಾರು ಜನ ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ ಇದು ಕಾಂಗ್ರೆಸ್ ಸ್ಥಿತಿ ಎಂದರು. ಕಾಂಗ್ರೆಸ್ ನಾಯಕರು ಇಡೀ ರಾಜ್ಯದಲ್ಲಿ ಜಾತಿಯ ವಿಷ ಬೀಜವನ್ನು ಬಿತ್ತುತ್ತಾ ರಾಜಕಾರಣ ಮಾಡುತ್ತಿದ್ದಾರೆ. ಎಂದು ಹೇಳಿದರು. ಪರಮೇಶ್ವರ್, ಸಿದ್ದರಾಮಯ್ಯ ಇಬ್ಬರೂ ಸಹ ಸಿಎಂ ಕನಸನ್ನು ಕಾಣುತ್ತಿದ್ದಾರೆ. ಇದನ್ನು ಬಿಟ್ಟು ಇಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ತಮ್ಮನ್ನು ಮತದಾರರು ಗೆಲ್ಲಿಸುತ್ತಾರಾ ಎನ್ನುವ ಚಿಂತೆಯನ್ನು ಮಾಡಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

