ಬಡಬಗ್ಗರಿಗೆ ದಾನ ಮಾಡಿದಾಗ ಶ್ರೀಮಂತಿಕೆಗೆ ಅರ್ಥ
ಚಿಕ್ಕನಾಯಕನಹಳ್ಳಿ: ದೇವರು ಕೈತುಂಬ ಕೊಟ್ಟಕಾಲದಲ್ಲಿ ನಾವು ಬಡಬಗ್ಗರಿಗೆ ದಾನಮಾಡಿದರೆ ಶ್ರೀಮಂತಿಕೆಗೆ ಅರ್ಥವಿರುತ್ತದೆ ಎಂದು ಬೆಂಗಳೂರಿನ ದಾನಿಗಳಾದ ಚಂದ್ರಶೇಖರ್ (ಬಾಬು) ನುಡಿದರು.
ಅವರು ಭಾನುವಾರ ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಶ್ರೀಮತಿ ಗಂಗಮ್ಮ ತಬಲದ ಸಿ.ಎಸ್. ಮಲ್ಲಪ್ಪ ಸೇವಾಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿರತಣೆ, ಉಚಿತ ನೋಟ್ ಪುಸ್ತಕ ವಿತರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಮಾನವ ಜನ್ಮ ದೊಡ್ಡದು, ನಮ್ಮ ಜೀವಿತ ಕಾಲದಲ್ಲಿ ಭಗವಂತ ಶಕ್ತಿ ಮತ್ತು ಅವಕಾಶಗಳನ್ನು ಕೊಟ್ಟಾಗ, ಸಿರಿಬಂದಕಾಲಕ್ಕೆ ಕರೆದು ದಾನವ ಮಾಡು, ನಿನಗೆ ಕೈಲಾಸ ಸಿಗುತ್ತದೆಂಬ ಸರ್ವಜ್ಞನ ವಚನದಂತೆ ಅದನ್ನು ಸಮಾಜದ ದುರ್ಬಲರ ಶಿಕ್ಷಣ ಮತ್ತು ಹಸಿವನ್ನು ನೀಗಿಸಲು ಕೈಜೋಡಿಸೋಣ. ಈ ಸಂದರ್ಭದಲ್ಲಿ ನಾವು ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಅಗತ್ಯವಾದ ಶಿಕ್ಷಣ ಕೊಟ್ಟ ಗುರುಗಳನ್ನು ಮರೆಯುವುದು ತರವಲ್ಲ. ಯಾವ ವ್ಯಕ್ತಿ ಗುರುವಿನ ಗುಲಾಮನಾಗುವುದಿಲ್ಲವೋ ಅವನು ಜೀವನದಲ್ಲಿ ಏನನ್ನೂ ಸಾಧಿಸಲಾರ.ಅಂತಹ ಗುರುವನ್ನು ಗೌವವಿಸುವುದು ನಮ್ಮ ಆದ್ಯಕರ್ತವ್ಯ. ಇದರ ಜೊತೆಗೆ ಉಳ್ಳವರು ಶಿವಾಲಯವ ಮಾಡುವರಯ್ಯ, ನಾನೇನು ಮಾಡಲಿ, ಎನ್ನಕಾಲೇ ಕಂಬ, ದೇಹವೇ ದೇಗುಲ ಎಂಬ ಬಸವಣ್ಣನವರ ವಚನದಂತೆ ನಮ್ಮ ದುಡಿಮೆಯಲ್ಲಿ ಮನುಷ್ಯನ ಮಾನಸಿಕ ತೊಳಲಾಟದ ಸಂದರ್ಭದಲ್ಲಿ ನೆಮ್ಮದಿ ಕಂಡುಕೊಳ್ಳುವ ತಾಣವಾದ ದೇವಾಲಯಗಳ ನಿರ್ಮಾಣವನ್ನು ನಾವು ಮರೆಯಬಾರದು. ಆದ್ದರಿಂದ ನಾವು ನಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಇಂತಹ ಸಮಾಜ ಮುಖಿ ಕಾರ್ಯಗಳಿಗೆ ವಿನಿಯೋಗಿಸಿದಾಗ ಸಿಗುವ ನೆಮ್ಮದಿ ಯಾವ ಸಂಪತ್ತಿನಿಂದಲು ಅಳೆಯಲು ಸಾಧ್ಯವಿಲ್ಲ ಎಂದರು.
ಸನ್ಮಾನ: ಇದೇ ಸಂದರ್ಭದಲ್ಲಿ ನಿವತ್ತ ಶಿಕ್ಷಕರಾದ ಜಿ.ರಂಗಯ್ಯ, ಪುಟ್ಟನರಸಿಂಹಯ್ಯ, ಸಿ.ಎಸ್.ರಂಗಸ್ವಾಮಯ್ಯ, ಎಂ.ಲಿಂಗದೇವರು ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಎಂ.ಎಸ್. ಲತಾಚಂದ್ರಶೇಖರ್ ವಹಿಸಿದ್ದರು. ದೇವಾಂಗ ಸಂಘದ ಅಧ್ಯಕ್ಷರಾದ ಕೋದಂಡರಾಮಯ್ಯ ಕಾರ್ಯಕ್ರಮವ್ನನು ಉದ್ಘಾಟಿಸಿದರು. ಈಶ್ವರ ಭಾಗವತ್ ಕಾರ್ಯಕ್ರಮದ ನಿರೂಪಣೆ ನೆರವೇರಿಸಿದರು. ಸಮಾರಂಭದಲ್ಲಿ ಪುರಸಭಾ ಸದಸ್ಯ ತಿಮ್ಮಪ್ಪ, ಪುರಸಭಾ ಮಾಜಿ ಅಧ್ಯಕ್ಷ ಸಿ.ಟಿ.ವರದರಾಜು, ಶಿಕ್ಷಕ ಬನಶಂಕರಯ್ಯ, ಸಿ.ಎ. ಕುಮಾರಸ್ವಾಮಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

