ತುಮಕೂರು

ತೆಂಗಿನಪುಡಿ ಘಟಕಕ್ಕೆ ಬೆಂಕಿ; 25ಲಕ್ಷ ಹಾನಿ

Published On :

ತಿಪಟೂರು: ಆಕಸ್ಮಿಕ ಬೆಂಕಿ ಅನಾಹುತದಿಂದ ತೆಂಗಿನಪುಡಿ ಉತ್ಪಾದನಾ ಘಟಕವೊಂದರಲ್ಲಿ 25ಲಕ್ಷಕ್ಕೂ ಹೆಚ್ಚು ಹಾನಿ ಸಂಭವಿಸಿರುವ ಘಟನೆ ನಡೆದಿದೆ. ನಗರದ ಹಳೇಪಾಳ್ಯದಲ್ಲಿರುವ ಉದ್ಯಮಿ ಹೇಮಚಂದ್ರರವರ ಒಡೆತನದ ವೈಷ್ಣವಿ ತೆಂಗಿನಪುಡಿ ಉತ್ಪಾದನಾ ಘಟಕದಲ್ಲಿ ಶುಕ್ರವಾರ ರಾತ್ರಿ ಸುಮಾರು 10ಗಂಟೆಯ ಸಮಯದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಕಾರ್ಮಿಕರು ಬೆಂಕಿ ನಂದಿಸಲು ಹರಸಾಹಸಪಟ್ಟರೂ ಪ್ರಯೋಜನವಾಗದೆ ಬೆಂಕಿ ವ್ಯಾಪಕವಾದ ಪರಿಣಾಮ ಯಂತ್ರೋಪಕರಣಗಳಾದ 2 ಬಾಯ್ಲರ್, ಷಿಪ್ಟರ್, ದಾಸ್ತಾನು ಮಾಡಿಟ್ಟಿದಂತಹ ತೆಂಗಿನಪುಡಿ, ಎಲೆಕ್ಟ್ರಾನಿಕ್ ವಸ್ತುಗಳು ಬೆಂಕಿಗೆ ಸಂಪೂರ್ಣ ಆಹುತಿಯಾಗಿವೆ. ಬೆಂಕಿಯ ಜ್ವಾಲೆಗೆ ತೆಂಗಿನಪುಡಿ ಘಟಕದ ಗೋಡೆಗಳೂ ಬಿರುಕು ಬಿಟ್ಟುಕೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಅಗ್ನಿಶಾಮಕ ದಳದ ವಾಹಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದು, 3ಗಂಟೆಗೂ ಹೆಚ್ಚು ಕಾಲ ಬೆಂಕಿಯ ಉಗ್ರನರ್ತನ ನಡೆದಿದೆ


ಬಸ್ನಿಂದ ಬಿದ್ದು ವೃದ್ಧೆ ಸಾವು
ಕುಣಿಗಲ್: ಚಲಿಸುತ್ತಿರುವ ಸಾರಿಗೆ ಸಂಸ್ಥೆ ಬಸ್ನಿಂದ ವೃದ್ಧೆಯೊಬ್ಬರು ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ ಸಂತೇಮಾವತ್ತೂರು ಬಳಿ ಸಂಭವಿಸಿದೆ. ಮೃತರನ್ನು ಹಂಗರಳ್ಳಿಯ ವಾಸಿ ಜಯಮ್ಮ (65ವರ್ಷ) ಎಂದು ಗುರುತಿಸಲಾಗಿದ್ದು, ಶನಿವಾರ ಕಾರ್ಯನಿಮಿತ್ತ ಕಾಡುಬೋರನಹಳ್ಳಿಗೆ ತೆರಳಿ ಅಲ್ಲಿಂದ ಕುಣಿಗಲ್ಗೆ ಬರುವ ಸಾರಿಗೆ ಸಂಸ್ಥೆ ಬಸ್ ಮೂಲಕ, ಮಧ್ಯಾಹ್ನದಂದು ಕುಣಿಗಲ್ ಕಡೆಗೆ ಆಗಮಿಸುತ್ತಿದ್ದು, ಬಸ್ನ ಹಿಂಬದಿಯಲ್ಲಿ ಕೂತಿದ್ದ ಜಯಮ್ಮ, ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.