ತುಮಕೂರು

ಗುಂಪು ಸಂಘಟನೆಗೆ ಎನ್‌ಜಿಓ ಪಾತ್ರ ಮುಖ್ಯ

Published On :

ಕ.ಪ್ರ.ವಾರ್ತೆ  ತುಮಕೂರು  ಆ.11
ಗುಂಪು ಸಂಘಟನೆಗೆ ಎನ್‌ಜಿಓಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ ಎಂದು ವಾಸುದೇವ ಎನ್. ನಾದೂರು ಅಭಿಪ್ರಾಯಪಟ್ಟರು.
ಅವರು ಶಿರಾ ನಗರದ ನವ ಗ್ರಾಮೀಣ ಸಂಸ್ಥೆಯ ಸ್ಥಾನಿಕ ಕಚೇರಿಯಲ್ಲಿ ಮಹಿಳಾ ಸಬಲೀಕರಣ ಸಮಿತಿ ಮತ್ತು ಗಣಕಯಂತ್ರ ಹಾಗೂ ಅಂತರ್ಜಾಲ ಸೇವಾ ಕೇಂದ್ರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಒಬ್ಬ ವ್ಯಕ್ತಿ ಏಕಾಂಗಿಯಾಗಿ ಹಣ ಪಡೆಯಬೇಕಾದರೆ ಸಮಾಜದಲ್ಲಿ ಇಲ್ಲ ಸಲ್ಲದ ದಾಖಲಾತಿಗಳನ್ನು ತೋರಿಸಬೇಕಾಗುತ್ತದೆ.
ಆದರೆ ಇಡೀ ಸಮೂಹ ಅಥವಾ ಆರೇಳು ಜನ ಸೇರಿಕೊಂಡಾಗ ಅಥವಾ ಒಂದು ಗುಂಪಿನ ಸಂಘ ಮಾಡಿಕೊಂಡಾಗ ಯಾವುದೇ ಸಹಕಾರ ಸಂಘಗಳು, ಬ್ಯಾಂಕುಗಳು ನಮಗೆ ಸುಲಭವಾಗಿ ಸಾಲ ನೀಡಲು ಮುಂದಾಗುತ್ತದೆ. ಅದೇ ನಮ್ಮ ಗುಂಪಿನ ಶಕ್ತಿ ಎಂದರು.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹಿಂದುಳಿದವರು, ಅಬಲೆಯರು, ಅಲ್ಪಸಂಖ್ಯಾತರ ವಿವಿಧ ತಾಕಲಾಟಗಳನ್ನು ವಿವರಿಸಿದರು.
ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ್ ಜೆ. ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದಲ್ಲಿ ಇರುವ ಸ್ತರ ವ್ಯತ್ಯಾಸವನ್ನು ಹೋಗಲಾಡಿಲು ಸಂಸ್ಥೆಯಿಂದ ಹೊಂದಿರುವ ಧ್ಯೇಯೋದ್ದೇಶಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಶಾಂತರಾಜು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಲೋಕೇಶ್ ಆರ್. ಭಾಗವಹಿಸಿದ್ದರು. ಹೇಮಂತ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.