ತುಮಕೂರು

ನನ್ನ ಪತಿ ಕ್ಷೇತ್ರ ಅಭಿವೃದ್ಧಿ ಎಂದೂ ಕಡೆಗಣಿಸಿಲ್ಲ

Published On :

ಕುಣಿಗಲ್: ಮಾಜಿ ಸಂಸದ ಎಚ್.ಡಿ. ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆಯಲ್ಲಿ ಅಯ್ಕೆಯಾದಾಗಿನಿಂದಲೂ ಕ್ಷೇತ್ರಕ್ಕೆ ಬಾರದಿರುವ ಬಗ್ಗೆ ಅವರ ಪತ್ನಿ ಅನಿತಾ ಕುಮಾರಸ್ವಾಮಿವಕಾಲತ್ತು ವಹಿಸಿ, ತಮ್ಮ ಪತಿ ಅತ್ಯಧಿಕ ಕಾರ್ಯಭಾರದ ಒತ್ತಡದಿಂದ ಕ್ಷೇತ್ರಕ್ಕೆ ಬರಲಿಲ್ಲ. ಬಾರದಿದ್ದರೂ ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಿಲ್ಲವೆಂದರು.
ಸೋಮವಾರ, ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪಚುನಾವಣೆಯಲ್ಲಿ, ಜೆಡಿಎಸ್ ಅಭ್ಯರ್ಥಿಯಾಗಿ ಪ್ರಚಾರಕ್ಕೆ ಮೊದಲ ಬಾರಿಗೆ ಆಗಮಿಸಿದ್ದ ಅನಿತಾಕುಮಾರಸ್ವಾಮಿ, ತಾಲೂಕಿನ ಅಂಚೇಪಾಳ್ಯ ಸಮೀಪ ರೋಡ್ ಶೋ ಮೂಲಕ ಪ್ರಚಾರ ಆರಂಭಿಸಿ, ಪ್ರಾದೇಶಿಕ ಪಕ್ಷಗಳಿಂದ ರಾಜ್ಯದ ನೆಲ, ಜಲ, ಭಾಷೆ ಸಂಸ್ಕೃತಿಯ ರಕ್ಷಣೆ ಸಾಧ್ಯವಾಗಿದೆ. ರಾಷ್ಟ್ರೀಯ ಪಕ್ಷಗಳಿಂದ ಈ ಕಾರ್ಯ ಅಸಾಧ್ಯವಾಗಿದ್ದು, ಜನತೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅನ್ನು ಬೆಂಬಲಿಸುವಂತೆ ಮನವಿ ಮಾಡಿದ ಅವರು, ಮಧುಗಿರಿ ಕ್ಷೇತ್ರದ ಶಾಸಕರಾಗಿದ್ದ ಅವಧಿಯಲ್ಲಿ ಈ ಹಿಂದೆ ಯಾವುದೇ ಶಾಸಕರೂ ಮಾಡದಷ್ಟು ಅಭಿವೃದ್ಧಿ ಕಾರ್ಯವನ್ನು ಮಾಡಿದ್ದು, ಪ್ರಚಾರದ ಕೊರತೆಯಿಂದಾಗಿ ಬೆಳಕಿಗೆ ಬರಲಿಲ್ಲವೆಂದು ವಿಷಾದಿಸಿದರು.
ಆರೋಪ ನಿಜ: ತಮ್ಮ ಪತಿ ಸಂಸದರಾಗಿ ಆಯ್ಕೆಯಾದಾಗಿನಿಂದಲೂ ಕ್ಷೇತ್ರಕ್ಕೆ ಬಂದಿಲ್ಲ ಎಂದು ಆರೋಪವಿದೆ. ಆದರೆ ಪ್ರಾದೇಶಿಕ ಪಕ್ಷದ ಮುಖಂಡರಾಗಿ ಪಕ್ಷದ ಹೊಣೆಗಾರಿಕೆಯನ್ನು ಜವಾಬ್ದಾರಿ ನಿರ್ವಹಿಸುವ ಅತ್ಯಧಿಕ ಕಾರ್ಯಭಾರದ ಒತ್ತಡದಿಂದ ಕ್ಷೇತ್ರಕ್ಕೆ ಬರಲಾಗಲಿಲ್ಲ. ಆದರೂ ರಾಜ್ಯಸಭಾ ಸದಸ್ಯ ರಾಮಸ್ವಾಮಿಯವ ನಿಧಿ ಸೇರಿದಂತೆ ಸಂಸದರ ನಿಧಿಯಿಂದಲೂ ಸಾಕಷ್ಟು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ದೇವೇಗೌಡ ಕುಟಂಬಕ್ಕೂ ಕುಣಿಗಲ್ ಕ್ಷೇತ್ರದ ಜನತೆಗೂ  ಅವಿನಾಭಾವ ಸಂಬಂಧವಿದ್ದು, ಕುಟುಂಬದ ಬಗ್ಗೆ ವಿಶೇಷ ಅಕ್ಕರೆ ಹೊಂದಿದ್ದು ಈ ಬಾರಿ ಜನತೆ ಒಮ್ಮತದಿಂದ ಜೆಡಿಎಸ್ ಬೆಂಬಲಿಸುವುದರಲ್ಲಿ ಅನುಮಾನವಿಲ್ಲ ಎಂದರು. ಜೆಡಿಎಸ್ - ಬಿಜೆಪಿ ಮೈತ್ರಿ ವಿಷಯ ಬಗ್ಗೆ ಕೆಲವರು ಪ್ರಶ್ನಿಸಿದಾಗ ಅದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸದೆ ಮೌನಕ್ಕೆ ಶರಣಾದರು. ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್.ಹರೀಶ್, ಶಾಸಕ ಡಿ.ನಾಗರಾಜಯ್ಯ, ಎಂ.ಟಿ.ಕೃಷ್ಣಪ್ಪ, ಜಿಪಂ
ಸದಸ್ಯರಾದ ಡಾ.ರವಿ, ವೈ.ಎಚ್. ಹುಚ್ಚಯ್ಯ, ಮಾಜಿ ಸದಸ್ಯರಾದ ಶಿವಣ್ಣ, ಮುಖಂಡರಾದ ಜಗದೀಶ್, ಶಿವರಾಜು, ಶಿವಣ್ಣ, ನಾಗರಾಜ್, ಈ ಮಂಜು, ಆಯಿಶಾಬೀ, ಹಮೀದ್, ಸಮೀವುಲ್ಲಾ ಇತರರು ಇದ್ದರು. ಸೋಮವಾರ ಬೆಳಗ್ಗೆ ಅಂಚೇಪಾಳ್ಯದ ಬಳಿ ಆಗಮಿಸಿದ ಅನಿತಾ ಕುಮಾರಸ್ವಾಮಿ, ಕಸಬಾ, ಹುತ್ರಿದುರ್ಗ, ಹುಲಿಯೂರುದುರ್ಗ ವಿವಿಡೆದೆ ರೋಡ್ ಶೋ ಮೂಲಕ ಪ್ರಚಾರ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.