ಕರ್ತವ್ಯ ನಿರ್ವಹಿಸುತ್ತಿದ್ದ ನೌಕರ ಸಾವು
ಮಧುಗಿರಿ: ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಧೀಶರ ಕಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಡಿ.ಗ್ರೂಪ್ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರನೋರ್ವ ಮಂಗಳವಾರ 11.15ರ ಸುಮಾರಿನಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದಾನೆ. ಸಿ.ನಾಗರಾಜು(45) ಮೃತಪಟ್ಟ ದುರ್ದೈವಿ. ಈತ ಎಂದಿನಂತೆ ಬೆಳಿಗ್ಗೆ ನ್ಯಾಯಾಲಯದ ಕರ್ತವ್ಯಕ್ಕೆ ಹಾಜರಾಗಿದ್ದಾನೆ. ಇದ್ದಕ್ಕಿಂದ್ದಂತೆ ಎದೆ ನೋವು ಕಾಣಿಸಿಕೊಂಡಿದೆ. ಆತ ಕರ್ತವ್ಯದಲ್ಲಿದ್ದ ನ್ಯಾಯಾಧೀಶರ ಬಳಿ ಹೇಳಿದಾಗ ಅವರು ಕೂಡಲೇ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ. ತಕ್ಷಣ ಪಟ್ಟಣದ ಖಾಸಗಿ ಶ್ರೀರಾಘವೇಂದ್ರ ನರ್ಸಿಂಗ್ ಹೋಂಗೆ ತೆರಳಿ ಚಿಕಿತ್ಸೆ ಪಡೆದಿದ್ದಾನೆ. ಚಿಕಿತ್ಸೆ ಫಲಕಾರಿಯಾಗದೇ ಏಕಾ ಏಕಿ ಹೃದಯಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಹೆಚ್ಚುವರಿ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಡಿ.ಕೆ.ವೇಲಾ, ಪ್ರಧಾನ ಸಿವಿಲ್ ನಾಯ್ಯಾಧೀಶ ಡಿ.ಸುರೇಶ್, ಜೆಎಂಎಫ್ಸಿ ನ್ಯಾಯಧೀಶೆ ಕೆ.ಲಕ್ಷ್ಮೀ, ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಜಯರಾಮ್, ಕಾರ್ಯದರ್ಶಿ ಅಶೋಕ್, ವಕೀಲರಾದ ಎಚ್.ಸಿ.ನಾಗಭೂಷಣ್, ರೆಡ್ಡಿ ಸೇರಿದಂತೆ ಎಲ್ಲ ವಕೀಲರು ಸಂತಾಪ ಸೂಚಿಸಿದರು. ನಂತರ ಪಾರ್ಥಿವ ಶರೀರವನ್ನು ಅವರ ಸ್ವಂತ ಗ್ರಾಮ ದೇವನಹಳ್ಳಿಗೆ ಕೊಂಡೊಯ್ದರು.
ತಿಪಟೂರು: ಘಟಕ ವ್ಯವಸ್ಥಾಪಕರಿಗೆ ಸನ್ಮಾನ
ತಿಪಟೂರು: ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ವೇದಿಕೆ ವತಿಯಿಂದ ತಿಪಟೂರಿನಿಂದ ಹಾಸನ ಡಿಪೋಗೆ ವರ್ಗಾವಣೆಗೊಂಡಿರುವ ತಿಪಟೂರು ಕೆ.ಎಸ್.ಆರ್.ಟಿ.ಸಿ. ಘಟಕ ವ್ಯವಸ್ಥಾಪಕರಾದ ನಂದಕುಮಾರ್ ಅವರಿಗೆ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿ ನಂದಕುಮಾರ್ ವೃತ್ತಿ ಜೀವನದಲ್ಲಿ ಪ್ರಾಮಾಣಿಕವಾಗಿ ಮತ್ತು ಜನಪರವಾಗಿ ಕಾರ್ಯನಿರ್ವಹಿಸಿದ್ದು, ನಿಲ್ದಾಣಕ್ಕೆ ಬರುವ ಸರ್ವಾಜನಿಕರು, ವಯೋವೃದ್ಧರು, ವಿದ್ಯಾರ್ಥಿಗಳಿಗೆ ಹಗಲಿರುಳೆನ್ನದೆ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಉತ್ತಮವಾಗಿ ಕಾರ್ಯನಿರ್ವಹಿಸಲು ಚಾಲಕರು, ನಿರ್ವಾಹಕರು ಸೇರಿದಂತೆ ಇಲಾಖೆಯ ಎಲ್ಲಾ ಸಿಬ್ಬಂದಿ ಸಹಕಾರ ನೀಡಿದ್ದು, ಸಾರ್ವಜನಿಕರ ಸಹಕಾರ ಮತ್ತು ಈ ಅಭಿನಂದನೆಗೆ ಸದಾ ಚಿರರುಣಿಯಾಗಿರುವುದಲ್ಲದೆ ಈ ಕಾರ್ಯಕ್ರಮದಿಂದ ಇನ್ನೂ ಹೆಚ್ಚಿನ ಸಾರ್ವಜನಿಕ ಸೇವೆ ಮಾಡಲು ಪ್ರೋತ್ಸಾಹ ಸಿಕ್ಕಂತಾಗಿದೆ ಎಂದರು. ಸಂಚಾರ ಮಾರ್ಗ ನಿಯಂತ್ರಕರಾದ ಶಿವಕುಮಾರ್, ನಾಗರಾಜ್ ನಾಯ್ಕ್, ಉಪನ್ಯಾಸಕರುಗಳಾದ ನೊಣವಿನಕೆರೆ ಜಗದೀಶ್, ಜಯರಾಂ, ಮುಖಂಡರಾದ ಬಿಸ್ಲೇಹಳ್ಳಿ ಜಗದೀಶ್, ಈಚನೂರು ಮಹದೇವ್, ಕರಡಿ ಗ್ರಾ.ಪಂ. ಅಧ್ಯಕ್ಷ ಶಂಕರ್ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

