ಸ್ವಾತಂತ್ರ್ಯ ದಿನ ಹೆಮ್ಮೆಯಿಂದಾಚರಿಸುವಂತಾಗಲಿ
ಕ.ಪ್ರ.ವಾರ್ತೆ ಕುಣಿಗಲ್ ಆ. 15
ಸ್ವಾತಂತ್ರ್ಯ ದಿನಾಚರಣೆಯು ಕೇವಲ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು ಕಾನೂನಿನ ಕಟ್ಟುಪಾಡಿಗೆ ಬಿದ್ದು, ಶಾಲಾ ಮಕ್ಕಳನ್ನು ಬಲವಂತವಾಗಿ ಕರೆತಂದು ಮಾಡುವ ದಿನಾಚರಣೆಯಾಗದೆ, ದೇಶದ ಪ್ರತಿಯೊಬ್ಬ ನಾಗರಿಕನು ಹೆಮ್ಮೆಯಿಂದ ಆಚರಿಸುವಂತ ಆಚರಣೆ ಆಗಬೇಕು ಎಂದು ಶಾಸಕ ಡಿ.ನಾಗರಾಜಯ್ಯ ಅಭಿಪ್ರಾಯಪಟ್ಟರು.
ಗುರುವಾರ, ಪಟ್ಟಣದ ಮಹಾತ್ಮಗಾಂಧಿ ಸರ್ಕಾರಿ ಪ.ಪೂ.ಕಾಲೇಜು ಅವರಣದಲ್ಲಿ ತಾಲೂಕು ಅಡಳಿತ ಏರ್ಪಡಿಸಿದ್ದ 67ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ರಿಟಿಷರ ದಾಸ್ಯದಿಂದ ದೇಶವನ್ನು ಸ್ವಾತಂತ್ರಗೊಳಿಸಲು ಹಲವು ಮಹನೀಯರು, ದೇಶದ ಎಲ್ಲಾ ಭಾಗದ ಜನರು, ಮಹಾನ್ ನಾಯಕರ ನೇತೃತ್ವದಲ್ಲಿ ಹಲವು ತ್ಯಾಗಬಲಿದಾನಗಳಿಂದ, ಸದೃಢರಾಷ್ಟ್ರ ನಿರ್ಮಾಣದ ಕನಸು ಕಂಡು, ಕಷ್ಟಪಟ್ಟು ಸ್ವಾತಂತ್ರ್ಯಗಳಿಸಿದೆ. ಸಶಕ್ತ ಭಾರತ ರಾಷ್ಟ್ರ ನಿರ್ಮಾಣ ನಿಟ್ಟಿನಲ್ಲಿ ನಾವೆಲ್ಲ ಶ್ರಮಿಸಬೇಕೆಂದರು.
ಧ್ವಜಾರೋಹಣೆ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ಜಗದೀಶ್, ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತ ರಾಷ್ಟ್ರಕ್ಕೆ ವಿಶ್ವದ ಯಾವುದೇ ರಾಷ್ಟ್ರವೂ ಸರಿಸಮಾನವಲ್ಲ, ವಿಜ್ಞಾನ, ತಂತ್ರಜ್ಞಾನ, ಶೈಕ್ಷಣಿಕ, ಸಂಪರ್ಕ ಕ್ಷೇತ್ರದಲ್ಲಿ ಭಾರತವು ಯಾವ ರಾಷ್ಟ್ರಗಳಿಗೂ ಕಡಿಮೆ ಇಲ್ಲದೆ ಮುಂದುವರೆಯುತ್ತಾ, ಮುಂದುವರೆದ ರಾಷ್ಟ್ರಗಳೇ ಬೆರಗಾಗುವಂತೆ ಸಾಧನೆ ಮಾಡುತ್ತಿದೆ ಎಂದರು.
ಉಪನ್ಯಾಸಕ ಡಾ.ಗೋಪಾಲ್ ಮುಖ್ಯಭಾಷಣ ನೆರವೇರಿಸಿದರು. ಜಿಪಂ ಸದಸ್ಯರಾದ ವೈ.ಎಚ್.ಹುಚ್ಚಯ್ಯ, ದೊಡ್ಡಯ್ಯ, ಡಿವೈಎಸ್ಪಿ ಉಮಾರಾಣಿ, ಸಿಪಿಐ ಧಮೇಂದ್ರ,ಇಒ ರಾಮಚಂದ್ರಪ್ಪ, ಬಿಇಒ ವಿ.ಜಿ.ಲೋಕೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ್ ಇತರರು ಉಪಸ್ಥತರಿದ್ದರು. ಕೃಷಿ, ಹೈನುಗಾರಿಕೆ, ತೋಟಗಾರಿಕೆ, ರೇಷ್ಮೆ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ, ಮಾಜಿ ಸೈನಿಕರಿಗೆ, ಸ್ವಾತಂತ್ರ ಹೋರಾಟಗಾರರಿಗೆ, ಉತ್ತಮ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ, ಕ್ರೀಡೆಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ, ಎಸ್ಎಸ್ಎಲ್ಸಿ, ಪಿಯುಸಿ, ಪದವಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಶಾಲಾ ಮಕ್ಕಳಿಂದ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರಿಗೆ ಮುದ ನೀಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

