ತುಮಕೂರು

ಕಾಂಗ್ರೆಸ್ನಿಂದ ಮಾತ್ರ ಅಭಿವೃದ್ಧಿ ಸಾಧ್ಯ

Published On :

ಕ.ಪ್ರ.ವಾರ್ತೆ    ಕುಣಿಗಲ್    ಆ. 16
ದೇಶದ ಅಲ್ಪಸಂಖ್ಯಾತರ, ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗದ ಜನತೆಯ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವಾಗಿದ್ದು, ದೇಶದ ಸಮಗ್ರ ಅಭಿವೃದ್ಧಿಗೆ ತಮ್ಮನ್ನು ಬೆಂಬಲಿಸಬೇಕೆಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಮನವಿ ಮಾಡಿದರು.
ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ಎರಡನೇ ಬಾರಿಗೆ ಕ್ಷೇತ್ರಕ್ಕೆ ಪ್ರಚಾರಕ್ಕಾಗಿ ಆಗಮಿಸಿದ ಅವರು, ಪಟ್ಟಣದ ಬಿದನಗೆರೆ, ಕೋಟೆ, ಗುಜ್ಜಾರಿ ಮೊಹಲ್ಲಾ ಸೇರಿದಂತೆ ಹುಚ್ಚಮಾಸ್ತಿ ಗೌಡ ಸರ್ಕಲ್ನಲ್ಲಿ ಮತಯಾಚನೆ ಮಾಡಿ,  ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾರಿಗೆ ತಂದ ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ದೇಶದಲ್ಲಿನ ಭ್ರಷ್ಟಾಚಾರ ಸಾಕಷ್ಟು ಪ್ರಮಾಣ ದಲ್ಲಿ ನಿಯಂತ್ರಣಕ್ಕೆ ಬಂದಿದೆ. ಇನ್ನು ಸಾಮಾನ್ಯವರ್ಗದ ಜನತೆಯ ಮಕ್ಕಳೂ ಉತ್ತಮ ಶಿಕ್ಷಣ ಪಡೆಯುವ ದಿಸೆಯಲ್ಲಿ ಕೇವಲ ಸಿರಿವಂತರಿಗೆ ಮೀಸಲಾಗಿದ್ದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೂ ಎಲ್ಲಾ ವರ್ಗದವರೂ  ಸರಿಸಮಾನವಾದ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಶಿಕ್ಷಣಹಕ್ಕು ಅದಿನಿಯಮ ಜಾರಿಗೆ ತಂದಿದೆ.
ಇನ್ನು ದೇಶದ ಯಾವುದೇ ಪ್ರಜೆ ಹಸಿವಿನಿಂದ ಬಳಲುವುದನ್ನುವ ಪರಿಣಾಮಕಾರಿಯಾಗಿ ನಿಯಂತ್ರಿಸಲು ಆಹಾರಭದ್ರತೆ ಮಸೂದೆ ಜಾರಿಗೊಳಿಸಲಾಗುತ್ತಿದೆ. ಅಲ್ಪಸಂಖ್ಯಾತ ವರ್ಗದ ಏಳಿಗೆಗಾಗಿ ಹಲವು ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ಮುಂದೆಯೂ ಉತ್ತಮ ಜನಪರ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿ, ಸದ್ಯದ ಪರಿಸ್ಥಿತಿಯಲ್ಲಿ ಜನತೆಗೆ ಬೇಡವಾದ ಚುನಾವಣೆಯನ್ನು ಬಲವಂತವಾಗಿ ಜನತೆ ಮೇಲೆ ಹೇರಿರುವ ಜೆಡಿಎಸ್ ಪಕ್ಷಕ್ಕೆ ತಕ್ಕಪಾಠ ಕಲಿಸಬೇಕೆಂದರು.
ಶಾಸಕ  ರಫೀಕ್ ಅಹಮದ್, ಮಾಜಿ ಶಾಸಕಎಸ್.ಪಿ. ಮುದ್ದುಹನುಮೇಗೌಡ, ಬಿ.ಬಿ.ರಾಮಸ್ವಾಮಿಗೌಡ, ಮುಖಂಡರಾದ ಆಡಿಟರ್ ನಾಗರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಫೀ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್, ಸೇರಿದಂತೆ ಮುಖಂಡರಾದ ಹೇರೂರು ಶಂಕರ್, ಇಂದ್ರಕುಮಾರ್, ರಂಗಸ್ವಾಮಿಸ್ವಾಮಿ, ರೆಹಮಾನ್ ಷರೀಫ್, ಏಜಾಸ್ ಪಾಷ, ಅಕ್ಬರ್ಪಾಶ, ಇಂದುಮತಿ ಸೇರಿದಂತೆ ಇತರರು ಪಾಲ್ಗೊಂಡಿದ್ದು, ಹುಚ್ಚಮಾಸ್ತಿಗೌಡ ಸರ್ಕಲ್ನಲ್ಲಿ ಸುರಿವ ಮಳೆಯ ನಡುವೆಯೂ ಮತಯಾಚನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.