ತುಮಕೂರು

ಸಂಘ- ಸಂಸ್ಥೆ ಹೆಸರಲ್ಲಿ ಒತ್ತುವರಿ: ಆರೋಪ

Published On :

ಪಾವಗಡ: ಪಟ್ಟಣದ ಪುರಸಭೆಗೆ ಸೇರಿದ ಪಾರ್ಕ್ ಸೈಟ್ಗಳು ಕೆಲ ಹಿತಾಸಕ್ತಿಗಳು ಸಂಘ- ಸಂಸ್ಥೆಗಳ ಹೆಸರಿನಲ್ಲಿ ಒತ್ತುವರಿ ಮಾಡಿಕೊಂಡು ಸಾರ್ವಜನಿಕರಿಗೆ ಅನ್ಯಾಯ ಮಾಡಿದ್ದಾರೆಂದು ಜೈಕರ್ನಾಟಕ ತಾ.ಅಧ್ಯಕ್ಷ ಧರ್ಮಪಾಲ್ ಆರೋಪಿಸಿದ್ದಾರೆ.
ಪಟ್ಟಣದ ಪುರಸಭೆ ವ್ಯಾಪ್ತಿಗೆ ಸೇರಿದ ಉದ್ಯಾನವನಗಳಿಗೆ ಮೀಸಲಿದ್ದ ಆನೇಕ ಸೈಟ್ಗಳು ಒತ್ತುವರಿಯಾಗಿವೆ ಎಂದ ಅವರು, ನಿಯಮ ಉಲ್ಲಂಘಿಸಿ ಸಂಘ- ಸಂಸ್ಥೆಗಳ ಹೆಸರಿನಲ್ಲಿ ಕೆಲವರಿಗೆ ಪಾರ್ಕ್ ಸೈಟ್ಗಳನ್ನು ಹಂಚಿಕೆ ಮಾಡಿರುವುದಲ್ಲದೇ ಪಾರ್ಕ್ ಸೈಟ್ವೊಂದರಲ್ಲಿ ಇತ್ತೀಚಿಗೆ ಸಮುದಾಯ ಭವನ ನಿರ್ಮಾಣದ ಹೆಸರಿನಲ್ಲಿ ಪುರಸಭೆಯಿಂದ 12 ಲಕ್ಷ ಹಣ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪಟ್ಟಣದ ಪುರಸಭೆ ವ್ಯಾಪ್ತಿಯ ಪಾರ್ಕ್ ಸೈಟ್ಗಳ ವಿವರ ಪಡೆಯಲು ಮಾಹಿತಿ ಹಕ್ಕು ಆನ್ವಯ ಪುರಸಭೆ ಮುಖ್ಯಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಪಟ್ಟಣದಲ್ಲಿ 30ಕ್ಕಿಂತ ಹೆಚ್ಚು ಉದ್ಯನವನಗಳಿಗೆ ಮೀಸಲಿಟ್ಟ ಪಾರ್ಕ್ ಸೈಟ್ಗಳಿವೆ. ಆ ಸೈಟ್ಗಳ ಸುತ್ತಳತೆ ಹಾಗೂ ಸರ್ವೆ ನಂ. ಬಡಾವಣೆಯ ಹೆಸರು ತಿಳಿಸಿದ್ದಾರೆ. ಪಟ್ಟಣದ ಬಹುತೇಕ ಪಾರ್ಕ್ ಸೈಟ್ಗಳು ಒತ್ತುವರಿಯಾಗಿದ್ದು, ಒತ್ತುವರಿಯಾದ ಪಾರ್ಕ್ ಸೈಟ್ಗಳನ್ನು ಯಾವ ಉದ್ದೇಶಕ್ಕೆ, ಯಾವ ಸಂಘ ಸಂಸ್ಥೆಗೆ ನೀಡಿದ್ದಾರೆ ಎಂಬುವುದು ಸ್ಪಷ್ಟಪಡಿಸಿಲ್ಲ. ಮಾಹಿತಿ ಹಕ್ಕು ಅನ್ವಯ ಪುರಸಭೆ ಮುಖ್ಯಾಧಿಕಾರಿಗಳು ಪಾರ್ಕ್ ಸೈಟ್ಗಳ ವಿವರ ನೀಡುವಂತೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.