ಧಾರ್ಮಿಕ ನಂಬಿಕೆಯಿಂದ ಮಾತ್ರ ವ್ಯಕ್ತಿ ಸದೃಢ
ತಿಪಟೂರು: ಧಾರ್ಮಿಕ ನಂಬಿಕೆಯಿಂದ ಮಾತ್ರ ಮಾನವನ ಆತ್ಮ ಸದೃಢಗೊಳ್ಳಲು ಸಾಧ್ಯ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥಸ್ವಾಮೀಜಿ ಕಿವಿಮಾತು ಹೇಳಿದ್ದಾರೆ.
ತಾಲೂಕಿನ ಅಂಚೆ ಕೊಪ್ಪಲು ಗ್ರಾಮದಲ್ಲಿ ಏರ್ಪಡಿಸಿದ್ದ ಕೋದಂಡರಾಮಲಿಂಗೇಶ್ವರ ವಿಗ್ರಹ ಪ್ರತಿಷ್ಠಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಧಾರ್ಮಿಕ ನಂಬಿಕೆಯಿಂದ ಮನುಷ್ಯನ ಆತ್ಮ ಜಾಗೃತಗೊಳ್ಳುವುದಲ್ಲದೆ ಮನುಷ್ಯ ಮನುಷ್ಯನ ನಡುವೆ ಒಡೆದು ಹೋಗಿರುವ ಮನಸ್ಸುಗಳನ್ನು ಒಗ್ಗೂಡಿಸಬೇಕಾಗಿದ್ದು, ಪ್ರತಿಯೊಬ್ಬರಲ್ಲಿ ಅಂತರಾತ್ಮಕವಾಗಿ ಅಡಗಿರುವ ಶಕ್ತಿಯನ್ನು ಜಾಗೃತಿಗೊಳಿಸಿ ಸಮಾಜಮುಖಿಯಾಗಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ದೃಷ್ಟಿಯಿಂದ ನಮ್ಮ ಪೂರ್ವಜರು ಹಾಕಿಕೊಟ್ಟ ದಾರಿಯೇ ಧಾರ್ಮಿಕ ಕೇಂದ್ರಗಳು ಮನಶಾಂತಿ ನೆಲೆಗೊಳ್ಳಬೇಕಾಗಿದೆ ಎಂದರು.
ನೀರಾವರಿಗೆ ಮೊದಲ ಆದ್ಯತೆ: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ರಾಜ್ಯದಲ್ಲಿ ದೇವಸ್ಥಾನಗಳು ಜೀರ್ಣೋದ್ಧಾರವಾದಬೇಕಾಗಿದ್ದು ಮನುಷ್ಯನಿಗೆ ದೇವರ ಬಗ್ಗೆ ವೈಯಕ್ತಿಕ ಭಯವಿರುವುದರಿಂದ ಧಾರ್ಮಿಕ ಚಿಂತನೆ ಮಾಡುತ್ತ ಒಳ್ಳೆಯ ಮಾರ್ಗದತ್ತ ಬದಲಾಗುತ್ತಾನೆ ಎಂದರು. ಜಿಲ್ಲೆಯಲ್ಲಿ ಮಳೆ ಇಲ್ಲದೆ ಅಂತರ್ಜಲ ಮಟ್ಟ ಕುಸಿದಿದ್ದು ಶುದ್ದ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುವುದಲ್ಲದೆ ಮುಂದಿನ ಬಜೆಟ್ನಲ್ಲಿ ತಿಪಟೂರು ಅರಸೀಕೆರೆಗಳಿಗೆ ಅನುಕೂಲವಾಗುವ ರೀತಿ ಗೊರೂರು ಡ್ಯಾಂನಿಂದ ನೀರನ್ನು ನಾಲೆಗಳ ಮುಖಾಂತರ ರು. 500ಕೋಟಿ ವೆಚ್ಚದಲ್ಲಿ ಬಯಲು ಸೀಮೆ ಪ್ರದೇಶಕ್ಕೆ ನೀರನ್ನು ಒದಗಿಸುವ ಯೋಜನೆ ಜಾರಿಗೆ ತರಲಾಗುವುದು ಎಂದರು.
ಶಾಸಕ ಕೆ.ಷಡಕ್ಷರಿ ಮಾತನಾಡಿ, ತಾಲೂಕಿನ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡುವುದಲ್ಲದೆ ಮುಂದಿನ ಬಜೆಟ್ನಲ್ಲಿ ತಾಲೂಕಿಗೆ ಅನುಕೂಲವಾಗುವಂತೆ ಪರಮಶಿವಯ್ಯ ವರದಿ ಆಧಾರದ ಮೇಲೆ ಯಗಚಿ ಅಣೆಕಟ್ಟಿನ ಮೂಲಕ ನೀರಾವರಿಗೆ ಅನುಕೂಲವಾಗುವಂತೆ ಯೋಜನೆಯೊಂದನ್ನು ರೂಪಿಸಲಾಗುವುದು ಹಾಗೂ ಕೊನೆಹಳ್ಳಿ ಮತ್ತು ಕರಡಿ ಗ್ರಾಮಗಳಲ್ಲಿ ವಿದ್ಯುತ್ ಉಪಸ್ಥಾವರ ಸ್ಥಾಪಿಸುವುದಾಗಿ ತಿಳಿಸಿದರು.
ಕೈಗಾರಿಕೆಗೆ ಒತ್ತು ನೀಡಿ: ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಗ್ರಾಮೀಣ ಜನರ ವಲಸೆ ಹೋಗುವುದನ್ನು ತಪ್ಪಿಸಲು ಹೆಚ್ಚಿಗೆ ಕೈಗಾರಿಕೆಗಳಿಗೆ ಅದ್ಯತೆ ನೀಡಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ತೋಟಗಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಕೆ.ಶಂಕರಲಿಂಗೇಗೌಡ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ದೇಶದಲ್ಲಿ ರಾಮನ ದೇವಸ್ಥಾನ ಅತಿ ಮುಖ್ಯವಾದದು. ಮನುಷ್ಯನಿದೆ ವಿದ್ಯೆ ಮತ್ತು ಧಾರ್ಮಿಕ ನಂಬಿಕೆಗಳು ಸನ್ಮಾರ್ಗದಲ್ಲಿ ನಡೆಸುತ್ತವೆ ಎಂದರು. ದಸರೀಘಟ್ಟ ಆದಿಚುಂಚನಗಿರಿ ಶಾಖಾ ಮಠದ ಚಂದ್ರಶೇಖರನಾಥ ಸ್ವಾಮೀಜಿ, ಮಾಜಿ ಶಾಸಕ ಬಿ.ಸಿ.ನಾಗೇಶ್, ಗ್ರಾ.ಪಂ.ಅಧ್ಯಕ್ಷ ಮಲ್ಲೇಶ್, ಮುಖಂಡರಾದ ಶಂಕರ್, ಹರ್ಷಬಾನು ಮತ್ತಿತರರಿದ್ದರು. ಇದೆ ಸಂದರ್ಭದಲ್ಲಿ ಐಪಿಎಸ್ ಅಧಿಕಾರಿ ಆರ್.ಚೇತನ್, ಶಂಕರಪ್ಪ ಅವರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

