ಅರಸು ನಿವಾಸ ಸ್ಮಾರಕ ಆಗಲಿ: ಚಂದ್ರಶೇಖರ್
ಚಿಕ್ಕನಾಯಕನಹಳ್ಳಿ: ಹಿಂದುಳಿದ ವರ್ಗಗಳ ನೇತಾರ ಹಾಗು ಬಡವರ ಪಾಲಿನ ಆಶಾಕಿರಣ ದಿ-ಡಿ.ದೇವರಾಜ ಅರಸು ನಿವಾಸವನ್ನು ಖಾಸಗಿ ಪಾಲಾಗಲು ಬಿಡದೆ ಸರ್ಕಾರ ವಶಕ್ಕೆ ಪಡೆದು ಸ್ಮಾರಕವನ್ನಾಗಿ ಮಾಡಬೇಕೆಂದು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ರಾಜ್ಯ ಸಂಚಾಲಕ ಸಿ.ಡಿ.ಚಂದ್ರಶೇಖರ್ ನುಡಿದರು.
ಪಟ್ಟಣದ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಅರಸು 98ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅರಸು ಗತಿಸಿ ದಶಕಗಳೇ ಕಳೆದರೂ ಅವರು ಜನಮಾನಸದಲ್ಲಿ ಉಳಿಯಲು ಅವರ ಬಡವರ ಪರವಾದ ಕಾಳಜಿಕಾರಣ. ಈ ನಿಟ್ಟಿನಲ್ಲಿ ಅವರ ನಿವಾಸವನ್ನು ಅವರ ಮಕ್ಕಳು ತಮ್ಮ ಕೌಟುಂಬಿಕ ಸಮಸ್ಯೆಗಾಗಿ ಕಾಂಗ್ರೆಸ್ ಪಕ್ಷದ ಸಚಿವರೊಬ್ಬರಿಗೆ ಮಾರಾಟ ಮಾಡಿದ್ದು,ಅದನ್ನು ಅವರು ನಾಶಡಿಸುತ್ತಿದ್ದರೆ. ಸರ್ಕಾರ ಕೂಡಲೇ ಅದನ್ನು ವಶಕ್ಕೆ ಪಡೆದು ಸ್ಮಾರಕ ನಿರ್ಮಿಸುವ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಹಿಂದುಳಿದ ವರ್ಗದ ಮುಖಂಡ ಸಿ.ಎಸ್.ನಟರಾಜ್ ಮಾತನಾಡಿದರು. ಇದೇ ಸಂದರ್ಭದಲ್ಲಿ ದಾನಿಗಳ ನೆರವಿನಿಂದ ಶಾಲಾಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಗಾಗಿ ಲೋಟ ಮತ್ತು ಉಚಿತ ನೋಟ್ ಪುಸ್ತಕ ವಿತರಿಸಲಾಯಿತು.
ಶಿಕ್ಷಕ ಸಿ.ಗುರುಮೂರ್ತಿ, ಸುಪ್ರೀಂ ಸುಬ್ರಮಣ್ಣ, ಪುರಸಭಾ ಸದಸ್ಯರಾದ ದ ಅಶೋಕ, ರೇಣುಕಾ ಸಣ್ಣಮುದ್ದಯ್ಯ, ಮಹಮದ್ ಖಲಂದರ್, ಇಂದಿರಾ ಪ್ರಕಾಶ್, ಅರಸು ಸಮಾಜದ ನಾಗರಾಜ ಅರಸು, ದೊಂಬಿದಾಸರ ಸಮಾಜದ ರಂಗನಾಥ್, ಕಾಂಗ್ರೆಸ್ ಮುಖಂಡ ಕೆ.ಜಿ. ಕೃಷ್ಣೇಗೌಡ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

