ತುಮಕೂರು

ಅಮಾನಿಕೆರೆ ಒತ್ತುವರಿ ತೆರವು ಕಾರ್ಯಾಚರಣೆ

Published On :

ಕ.ಪ್ರ.ವಾರ್ತೆ , ಗುಬ್ಬಿ , ಆ. 21
ತಾಲೂಕಿನ ತೊರೇಹಳ್ಳಿ ಬಳಿಯ ಗುಬ್ಬಿ ಅಮಾನಿಕೆರೆಗೆ ಸಂಬಂಧಿಸಿದ 173 ಎಕರೆ ಪ್ರದೇಶ ಒತ್ತುವರಿಯಾಗಿರುವ ಬಗ್ಗೆ ಲೋಕಾಯುಕ್ತರಿಗೆ ನೀಡಿದ ದೂರಿನ ಅನ್ವಯ ಕಂದಾಯ ಇಲಾಖಾಧಿಕಾರಿಗಳು ಬುಧವಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದರು.
ತೊರೇಹಳ್ಳಿ  ಟಿ.ಆರ್.ರಂಗಪ್ಪಗೌಡ ಗುಬ್ಬಿ ಅಮಾನಿಕೆರೆ ಪ್ರದೇಶ ಒತ್ತುವರಿಯಾಗಿದೆ ಎಂದು 2006 ರಲ್ಲಿ ಲೋಕಾಯುಕ್ತರಿಗೆ ದೂರು ನೀಡಿದ ಕಾರಣ ಕಾರ್ಯಾಚರಣೆ ನಡೆಸಲಾಯಿತು. ಅರ್ಜಿ ಸಲ್ಲಿಸಿದ ವ್ಯಕ್ತಿ ನಿಧನರಾದರೂ ಸಹ ಈ ಅರ್ಜಿಗೆ ಲೋಕಾಯುಕ್ತರು ಜೀವ ನೀಡಿದ್ದು, ಇಂದು ಕಾರ್ಯಾಚರಣೆಯಲ್ಲಿ ಸ.ನಂ 274 ರಲ್ಲಿನ 173 ಎಕರೆ ಪ್ರದೇಶಕ್ಕೆ ಸಂಬಂಧಿಸಿದ ತೊರೇಹಳ್ಳಿ, ಗೋಳೇನಹಳ್ಳಿ, ಅಂಬಾರಪುರ, ಹೊನ್ನಶೆಟ್ಟಿಹಳ್ಳಿ ಸೇರಿದಂತೆ ಈ ಸ.ನಂ ನಲ್ಲಿ ಬೆಳೆದ ತೆಂಗು, ಅಡಿಕೆ, ಬಾಳೆ, ಬಿದಿರು ಸೇರಿದಂತೆ ಹಲವು ಬೆಳೆಗಳನ್ನು ತಹಸೀಲ್ದಾರರ್ಸಿದ್ದಪ್ಪ ಅವರ ಸಮ್ಮುಖದಲ್ಲಿ ಜೆಸಿಬಿ ಮತ್ತು ಹಿಟಾಚಿ ಯಂತ್ರ ಬಳಸಿ ತೆರವುಗೊಳಿಸಿ ತಮ್ಮ ಸ್ವಾಧಿನಕ್ಕೆ ತೆಗೆದುಕೊಂಡರು. ನಂತರ ಅಮಾನಿಕೆರೆಯ ಗಡಿ ಭಾಗದ ಗುರುತಿಸಲು ಟ್ರಂಚ್ ತೆಗೆದು ಮುಂದಿನ ದಿನಗಳಲ್ಲಿ ಯಾವುದೇ ತರಹದ ಬೆಳೆ ಬೆಳೆಯಲು ಅವಕಾಶ ನೀಡದಂತೆ ಕ್ರಮ ವಹಿಸಿದರು. ಕಾರ್ಯಾಚರಣೆಯಲ್ಲಿ ಕಂದಾಯ ತನಿಖಾಧಿಕಾರಿ ನರಸಿಂಹರಾಜು, ಹೇಮಾವತಿ ಎಇಇ ಶಿವಕುಮಾರ್, ಎಇ ನಾಗರಾಜು, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.