ತುಮಕೂರು

ಶಿರಾ ದೊಡ್ಡ ಕೆರೆಗೆ ಹೇಮಾವತಿ ಜಲಾಶಯ ನೀರು

Published On :

ಕ.ಪ್ರ.ವಾರ್ತೆ , ಶಿರಾ , ಆ. 21
ನೀರಿಗಾಗಿ ಪರಿತಪಿಸುತ್ತಿದ್ದ ಶಿರಾ ಜನತೆಯ ನೀರಿನ  ದಾಹ ನೀಗಿಸಲು ಅಂತು ಇಂತು ಹೇಮಾವತಿ ನೀರು ಶಿರಾ ದೊಡ್ಡ ಕೆರೆಯನ್ನು ಸೇರಿದೆ.
ಕಳೆದ 10 ದಿನಗಳಿಂದಲೂ ಕಳ್ಳಂಬೆಳ್ಳ ಕೆರೆಯಿಂದ ಶಿರಾ ನಗರದ ಜನತೆಗೆ ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ಕಳ್ಳಂಬೆಳ್ಳ ಕೆರೆ ತುಂಬುವ ಮುನ್ನವೆ ಹಳ್ಳದ ಮೂಲಕ ನೇರವಾಗಿ ನೀರನ್ನು ಶಿರಾ ಕೆರೆಯತ್ತ ಹರಿ ಬಿಡಲಾಗಿತ್ತು.10 ದಿನಗಳಿಂದಲೂ ಹಳ್ಳದ ಗುಂಟ ಹೇಮಾವತಿಯ ನೀರು ಶಿರಾ ಕೆರೆಯನ್ನು ಪ್ರವೇಶಿಸಿರುವುದು ಪಟ್ಟಣದ ಜನತೆಗೆ ಸಂತಸ ತಂದಿದೆ.
ನೀರಿನ ಕೊರತೆಯಿಂದಾಗಿ ಕಳೆದ ಒಂದು ತಿಂಗಳಿಂದಲೂ ಇಲ್ಲಿನ ನಗರಸಭೆಯು 15-20 ದಿನಗಳಿಗೊಮ್ಮೆ ಕೊಳವೆ ಬಾವಿಗಳ ನೀರನ್ನು ಸಂಗ್ರಹಿಸಿ ಸಾರ್ವಜನಿಕರಿಗೆ ಪೂರೈಸಲಾಗುತ್ತಿತ್ತು. ಈಗ ಕೆರೆಗೆ ನೀರು ಬುರುತ್ತಿದ್ದು. ಜನತೆಗೆ ಆಶಾ ಭಾವನೆ ಉಂಟಾಗಿದೆ. ನೀರು ಕೆರೆಗೆ ಪಾದಾರ್ಪಣೆ ಮಾಡುತ್ತಿದ್ದಂತೆಯೇ ನಗರಸಭೆ ಆಯುಕ್ತ ಬಿ.ಟಿ.ರಂಗಸ್ವಾಮಿ, ಸದಸ್ಯರಾದ ಎಸ್.ಜೆ.ರಾಜಣ್ಣ, ಪುಟ್ಟರಾಜು, ಹಬೀಬ್‌ಖಾನ್, ಅಹಮದಿ, ಮೌನೇಶ್, ಅಂಜಿನಪ್ಪ, ಎಂಜಿನಿಯರ್ ಮಂಜುನಾಥ್, ನಂಜಪ್ಪ ಮತ್ತಿತರರು ಭೇಟಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.