ತುಮಕೂರು- ಚಿತ್ರದುರ್ಗ ರೇಲ್ವೆ ಯೋಜನೆ ಶೀಘ್ರ
ಶಿರಾ: ತುಮಕೂರು-ಶಿರಾ-ಹಿರಿಯೂರು-ಚಿತ್ರದುರ್ಗ ಮಾರ್ಗದ ರೈಲ್ವೆ ಯೋಜನೆ ಶೀಘ್ರವಾಗಿ ಕಾರ್ಯಾರಂಭವಾಗಲಿದೆ ಎಂದು ಸದರಿ ಯೋಜನೆಗಾಗಿ ಲೋಕಸಭೆಯಲ್ಲಿ ಚರ್ಚಿಸಿ ಶ್ರಮಿಸಿ ಹೋರಾಡಿದ ಚಿತ್ರದುರ್ಗ ಸಂಸದ ಜನಾರ್ದನಸ್ವಾಮಿ ತಿಳಿಸಿದರು.
ಅವರು ಪಟ್ಟಣದ ಹೊರ ವಲಯದ ಕಾಮತ್ ಉಪಚಾರ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಾ ಜನತೆಯ ಬಹುದಿನದ ಬೇಡಿಕೆಯಾದ ಸುಮಾರು 45 ವರ್ಷಗಳಿಂದಲೂ ಪ್ರಯತ್ನ ಪಡುತ್ತಿರುವ ಸದರಿ ರೇಲ್ವೆ ಯೋಜನೆ ಇದೀಗ ಕಾರ್ಯರೂಪಕ್ಕೆ ಬರಲು ಸಜ್ಜಾಗಿದ್ದು ಶಿರಾ ಜನತೆ ಆಸೆ ಶೀಘ್ರವಾಗಿ ಈಡೇರಲಿದೆ ಎಂದು ತಿಳಿಸಿದರು.
ಸದರಿ ರೈಲ್ವೆ ಯೋಜನೆಯೂ 191 ಕಿ.ಮೀ. ವಿಸ್ತೀರ್ಣ ಹೊಂದಿದ್ದು ಈ ಯೋಜನೆಗಾಗಿ ಸುಮಾರು 4000 ಕೋಟಿ ವಿನಿಯೋಜನೆ ಮಾಡಲಾಗುತ್ತಿದ್ದು ಈ ಯೋಜನೆಯಲ್ಲಿ 19 ಸ್ಟೇಷನ್ಗಳು ಬರುತ್ತಿದ್ದು, ಇದರಲ್ಲಿ ಶಿರಾಕ್ಕೆ ಸಂಬಂಧಪಟ್ಟಂತೆ ತುಮಕೂರಿನಿಂದ ಊರುಕೆರೆ, ತಿಮ್ಮರಾಜನಹಳ್ಳಿ, ಜೋಗಿಹಳ್ಳಿ, ಚಿಕ್ಕನಹಳ್ಳಿ, ಶಿರಾ, ತಾವರೆಕೆರೆ, ಸೇರಿದಂತೆ ಒಟ್ಟು 6 ಸ್ಟೇಷನ್ಗಳು ಬರುತ್ತವೆ ಎಂದಾಗ ಕಳ್ಳಂಬಳ್ಳವನ್ನೇಕೆ ಕೈಬಿಟ್ಟಿರಿ ಎಂಬ ಪತ್ರಕರ್ತರ ಪ್ರಶ್ನೆಗೆ ಯೋಜನೆಯಲ್ಲಿ ಕಳ್ಳಂಬಳ್ಳ ಸೇರಿಸುವುದಾಗಿ ತಿಳಿಸಿದರು.
ಇನ್ನು ವಿಳಂಬವಾಗಲಾರದು: 191 ಕಿ.ಮೀ. ಉದ್ದದ ರೇಲ್ವೆ ಯೋಜನೆಗೆ ಈಗಾಗಲೇ ಭೂಮಿ ಗುರ್ತಿಸಿದ್ದು, ಸಂಬಂಭಟ್ಟವರಿಗೆ ನೋಟಿಸ್ ನೀಡಲಾಗಿದೆ. ಹಣ ಸಂದಾಯ ಮಾಡಲು ಪ್ರಯತ್ನ ನಡೆಯುತ್ತಿದೆ. ಸದರಿ ಯೋಜನೆ ಯಾವುದೇ ಕಾರಣಕ್ಕೂ ವಿಳಂಬವಾಗಲಾರದು, ಸುಸೂತ್ರವಾಗಿ ನಡೆಯುತ್ತಿದೆ ಎಂದ ಅವರು ಸಂಬಂಧಪಟ್ಟ ಜಮೀನಿನವರು ಸಾರ್ವಜನಿಕರು ಯಾವುದೇ ಅಡ್ಡಿ ಆತಂಕಗಳನ್ನು ಒಡ್ಡದೆ ಯೋಜನೆ ಕಾರ್ಯಗತವಾಗುವವರೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಶಿರಾ ಈಗಾಗಲೇ ರಾಷ್ಟ್ರೀಯ ಹೆದ್ದಾರಿ 4 ನ್ನು ಹೊಂದಿದ್ದು, ಇಡೀ ರಾಜ್ಯದಲ್ಲಿಯೇ ಅಭಿವೃದ್ದಿ ಹೊಂದುತ್ತಿರುವ ತಾಲೂಕಾಗಿದ್ದು ಇದೀಗ ರೈಲ್ವೆ ಯೋಜನೆ ಜಾರಿಗೆ ಬಂದರೆ ಉತ್ತಮ ವಾಣಿಜ್ಯ ಕೇಂದ್ರವಾಗಿಯೂ ಹೆಸರು ಗಳಿಸಿ ಅಭಿವೃದ್ದಿ ರಥವಾಗಿ ಪರಿಣಮಿಸುತ್ತದೆ ಎಂದರು. ಸದರಿ ರೇಲ್ವೆ ಯೋಜನೆ ಜಾರಿಗೆ ಬರಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಜಿ.ಎಸ್.ಬಸವರಾಜು ಸೇರಿದಂತೆ ಹಲವರ ಶ್ರಮವಿದ್ದು, ಈ ಯೋಜನೆಗೆ ಶ್ರಮಿಸಿದ ತಾಲೂಕಿನ ಹಲವು ಸಂಘ ಸಂಸ್ಥೆಗಳು, ಮುಖಂಡರುಗಳು ಸರ್ವ ಪಕ್ಷಗಳ ಕಾರ್ಯಕರ್ತರು, ಸಮಾಜ ಸೇವಕರು ಇವರೆಲ್ಲರಿಗೂ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

