ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ
ತುರುವೇಕೆರೆ: ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಜಯಗಳಿಸಿದ್ದರಿಂದ ಸಂತಸಗೊಂಡ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಿಹಿ ಹಂಚುವ ಮೂಲಕ ಹಾಗೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಇದೆ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್.ಶಿವರಾಜು, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಸ್.ದಾನಿಗೌಡ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ, ಚೌದ್ರಿ ರಂಗಪ್ಪ ಮತ್ತಿತರರು ಈ ಸಂದರ್ಭದಲ್ಲಿ ಮಾತನಾಡಿದರು. ಪಟ್ಟಣ ಪಂಚಾಯ್ತಿ ಸದಸ್ಯರಾದ ಕೆ.ಟಿ.ಶಿವಶಂಕರ್, ಮಹೇಶ್, ಶ್ರೀನಿವಾಸ್ ಮೂರ್ತಿ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಪ್ರಸನ್ನಕುಮಾರ್, ದುಂಡ ಉಮೇಶ್, ರಾಮಡಿಹಳ್ಳಿ ಬಸವರಾಜು, ಪಟ್ಟಣ ಹಿಂದುಳಿದ ವರ್ಗಗಳ ಅಧ್ಯಕ್ಷ ಟಿ.ಕೆ.ಸತೀಶ್, ಹುಣುಸೇಮರದಳ್ಳಿ ನಟರಾಜು, ಕೋಳಾಲದ ಜೈಗಿರಿ ಸುಂದರ್, ಮುದಿಗೆರೆ ಶಿವರಾಜು ಮತ್ತಿತರರು ಉಪಸ್ಥಿತರಿದ್ದರು.
ತುಮಕೂರು: ಆ. 27 ರಂದು ಕುಂದು ಕೊರತೆ ಅಹವಾಲು ಸಭೆ
ತುಮಕೂರು: ತುಮಕೂರು ರಾಷ್ಟ್ರೀಯ ಹೆದ್ದಾರಿ 234 ಅನ್ನು ಮಧುಗಿರಿಯಿಂದ ಆಂಧ್ರ ಗಡಿಯವರೆಗೆ ಪುನರ್‌ವಸತಿ ಹಾಗೂ ಎರಡು ಪಥದ ಉನ್ನತೀಕರಣ ಕಾರ್ಯ ಕೈಗೊಳ್ಳಲಾಗುವ ಹಿನ್ನಲೆಯಲ್ಲಿ ಪರಿಸರ ಸಾರ್ವಜನಿಕ ಆಲಿಕೆಯನ್ನು ನಡೆಸಬೇಕಾಗಿರುವ ಹಿನ್ನಲೆಯಲ್ಲಿ ಆ.27 ರಂದು ಬೆಳಿಗ್ಗೆ 11.30 ಗಂಟೆಗೆ ಪರಿಸರ ಸಾರ್ವಜನಿಕ ಸಭೆಯನ್ನು ಕೊರಟಗೆರೆಯ ಗುರುಭವನದಲ್ಲಿ ಕರೆಯಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ. ಯೋಜನಾ ಸ್ಥಳದಲ್ಲಿ ವಾಸವಾಗಿರುವ ಆಸಕ್ತ ನಿವಾಸಿಗಳು, ಪರಸರಾಸಕ್ತ ಗುಂಪುಗಳು ಮತ್ತು ಈ ಯೋಜನೆಯಿಂದ ತೊಂದರೆಗೊಳಗಾಗಬಹುದಾದ ಸಾರ್ವಜನಿಕರು ತಮ್ಮ ಸಲಹೆಗಳು, ಅನಿಸಿಕೆಗಳು, ಟೀಕೆ, ಟಿಪ್ಪಣಿಗಳು ಹಾಗೂ ಅಹವಾಲುಗಳನ್ನು ಮೌಖಿಕ, ಲಿಖಿತ, ಇ-ಮೇಲ್ ಮೂಲಕ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು, ಪರಿಸರ ಸಾರ್ವಜನಿಕ ಸಮಿತಿ (ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ, ತುಮಕೂರು) ಇವರಿಗೆ ಸಲ್ಲಿಸಬಹುದು.
ಆಸಕ್ತರು ಮೇಲೆ ತಿಳಿಸಲಾಗಿರುವ ಸಭೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

