ತುಮಕೂರು

ಆಧುನಿಕ ಜೀವನ ಶೈಲಿಯಿಂದಾಗಿ ಹೊಸ ರೋಗ

Published On :

ಕ.ಪ್ರ.ವಾರ್ತೆ ,  ಮಧುಗಿರಿ ,  ಆ. 25
ಆಧುನಿಕ ಜೀವನ ಶೈಲಿಯಿಂದಾಗಿ ಹೊಸ  ಹೊಸ ರೋಗಗಳು ಭಾರತೀಯರನ್ನು ಕಾಡುತ್ತಿರುವುದು ವಿಷಾದಕರ ಸಂಗತಿ ಎಂದು ಸಿದ್ದರಬೆಟ್ಟ ಕ್ಷೇತ್ರದ ಶ್ರೀವೀರಭದ್ರಶಿವಾಚಾರ್ಯ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ತುಮಕೂರು, ಸ್ನೇಹ ಮನೋವಿಕಾಸ ಕೇಂದ್ರ, ಸೇಜಲ್ ನ್ಯೂ ಲೈಫ್ ಫೌಂಡೇಷನ್, ಭಾರತೀಯ ವೈದ್ಯಕೀಯ ಸಂಘ ಹಾಗೂ ರಾಘವೇಂದ್ರ  ಆಸ್ಪತ್ರೆ ಮಧುಗಿರಿ ಸಂಯುಕ್ತಾಶ್ರಯದಲ್ಲಿ ಉಚಿತ ನರ, ಮನೋರೋಗ, ಮದ್ಯಪಾನ, ಮಾದಕ ವ್ಯಸನಿಗಳಿಗೆ ಬೃಹತ್ ಆರೋಗ್ಯ ತಪಾಸಣಾ ಚಿಕಿತ್ಸಾ ಶಿಬಿರ ಉದ್ಘಾಟಿಸಿ  ಮಾತನಾಡಿದರು.
ಆಧುನಿಕ ಜೀವನ ಶೈಲಿ ಪದ್ಧತಿಯಿಂದ  ಮನುಷ್ಯನಿಗೆ ಹೊಸ ರೋಗಗಳು ಕಾಣಿಸಿಕೊಂಡು ಭಾರತೀಯರನ್ನು ಕಾಡುತ್ತಿವೆ. ಹಾಗಾಗಿ  ಮಾರಕ ಕಾಯಿಲೆಗಳಿಂದ ಜನರು ದೂರವಿರಲು  ಭಾರತೀಯ  ಪಾರಂಪರಿಕ ಜೀವನ  ಪದ್ಧತಿ ಅನುಸರಿಸುವ ನಿಟ್ಟಿನಲ್ಲಿ  ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದ ಅವರು, ಆತ್ಮವಿಶ್ವಾಸದಿಂದ  ಭಾರತೀಯ  ಸಂಸ್ಕೃತಿ  ಆಚಾರ-ವಿಚಾರ  ಮೈಗೂಡಿಸಿಕೊಳ್ಳುವ ಮೂಲಕ  ಪೌಷ್ಠಿಕಾಂಶ ಆಹಾರ ಸೇವಿಸುವ ನಿಟ್ಟಿನಲ್ಲಿ ಸದೃಢರಾಗಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಕರೆ ನೀಡಿದರು.  
ಭಾರತೀಯ ವೈದ್ಯಕೀಯ ಸಂಘಗಳ ತಾ.ಅಧ್ಯಕ್ಷ ಡಾ.ಜಿ.ಕೆ.ಜಯರಾಮ್, ಮನೋರೋಗ ಉಳ್ಳವರಿಗೆ  ತುಮಕೂರಿನ ಡಾ.ಲೋಕೇಶ್ ಬಾಬು ಉಚಿತವಾಗಿ ಪರೀಕ್ಷಿಸಿ ಔಷಧೋಪಚಾರ ನೀಡುತ್ತಾರೆ. ಇದರ ಪ್ರಯೋಜನ ಪಡೆದುಕೊಂಡು ಆರೋಗ್ಯ ರಕ್ಷಿಸಿಕೊಳ್ಳಿ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸ್ನೇಹ ಮನೋವಿಕಾಸ ಕೇಂದ್ರದ  ವ್ಯವಸ್ಥಾಪಕ ಡಾ. ಲೋಕೇಶ್ ಬಾಬು, ಡಾ.ಚೇತನ್, ಪಿಆರ್‌ಓ ಪುಟ್ಟರಾಜು ಜೆಎಸ್ ಆಸ್ಪತ್ರೆ ಡಾ.ಸೋಮಶೇಖರ್ ಉಪಸ್ಥಿತರಿದ್ದರು. ರಮ್ಯ ಪ್ರಾರ್ಥಿಸಿ ಮಂಜುನಾಥ್ ಸ್ವಾಗತಿಸಿ ವಂದಿಸಿದರು. 50ಕ್ಕೂ ಅಧಿಕ ರೋಗಿಗಳು ಇದರ ಪ್ರಯೋಜನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.