'ಸಮುದಾಯ ಅಭಿವೃದ್ಧಿಗೆ ಸಂಘಟನೆ ಅಗತ್ಯ'
ಕ.ಪ್ರ.ವಾರ್ತೆ , ಚಿಕ್ಕನಾಯಕನಹಳ್ಳಿ , ಆ. 25
ವರ್ಷ ಇತಿಹಾಸವಿರುವ ರಾಜ್ಯ ವಕ್ಕಲಿಗ ಸಂಘದಲ್ಲಿ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ರಾಜ್ಯ ವಕ್ಕಲಿಗ ಸಂಘದ ಜಂಟಿ ಕಾರ್ಯದರ್ಶಿ ಯಲಚವಾಡಿ ನಾಗರಾಜ್ ನುಡಿದರು.
ಪಟ್ಟಣದ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಗುರುತಿನ ಚೀಟಿ ನೀಡಬೇಕಿದೆ: ಪ್ರಸ್ತುತ ಜಿಲ್ಲೆಯಲ್ಲಿ ಸಂಘ 22 ಸಾವಿರ ಸದಸ್ಯರನ್ನು ಹೊಂದಿದ್ದು, ಎಲ್ಲರಿಗು ಗುರುತಿನಚೀಟಿ ನೀಡಬೇಕಾಗಿದೆ. ತಾಲೂಕಿನಲ್ಲಿ ಹಾಲಿ 75 ಜನ ಸದಸ್ಯರಿದ್ದು, ಮುಂಬರುವ ದಿನಗಳಲ್ಲಿ ಸದಸ್ಯ ನೋಂದಣಿಗೆ ಒತ್ತು ನೀಡಲಾಗುವುದು. ರಾಜ್ಯ ಸಂಘದ ವಾರ್ಷಿಕ ಸಭೆಯ್ಲಲಿ ಕೈಗೊಂಡ ನಿರ್ಣಯದಂತೆ ಪ್ರತಿ ತಾಲೂಕಿನಲ್ಲಿ ಜನಾಂಗದ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಶಿಕ್ಷಣ ಸಂಸ್ಥೆ ಮತ್ತು ವಿದ್ಯಾರ್ಥಿ ನಿಲಯಗಳನ್ನು ತೆರೆಯಲಿದ್ದೇವೆ. ಇದರಲ್ಲಿ ಜನಾಂಗದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ಮುಖ್ಯ ಉದ್ದೇಶವಾಗಿದೆ.
ತುಮಕೂರಿನಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ತೆರೆದು, ಶೇ. 30 ರಷ್ಟು ಕಡಿಮೆ ವೆಚ್ಚವನ್ನು ಪಡೆದು ಚಿಕಿತ್ಸೆ ನೀಡಲಾಗುವುದು. ಜಿಲ್ಲಾ ಕೇಂದ್ರದ್ಲಲಿ ಈಗಾಗಲೇ ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ತೆರೆಯಲಾಗಿದ್ದು, 200 ಬಾಲಕಿಯರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಪಿಯುಸಿಯಿಂದ ಪಿಜಿವರಗೆ ವ್ಯಾಸಂಗ ಮಾಡುವವರಿಗೆ ಇಲ್ಲಿ ಪ್ರವೇಶಾವಕಾಶವಿದೆ. ಮುಂಬರುವ ದಿನಗಳಲ್ಲಿ ಬಾಲಕರಿಗು ವಸತಿ ನಿಲಯವನ್ನು ತೆರೆಯಲಾಗುವುದು. ರಾಷ್ಟ್ರಕವಿ ಕುವೆಂಪು ಹೆಸರಿನಲ್ಲಿ ರಂಗಮಂದಿರ ನಿರ್ಮಿಸಿ ವಿವಿಧ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಒಕ್ಕಲಿಗ ಜಾನಂಗದಲ್ಲಿರುವ ಒಳಪಂಗಡ ಜಿಲ್ಲೆಯಲ್ಲಿಯೇ ಜಾಸ್ತಿಯಿದ್ದು, ಅವುಗಳನ್ನು ಒಂದೇ ವೇದಿಕೆಯಲ್ಲಿ ತರಲಾಗುವುದು. ಇದರಿಂದ ಜನಾಂಗದ ಶಕ್ತಿ ವೃದ್ಧಿಸುತ್ತದೆ ಎಂದರು.
ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಡಾ. ಎಸ್.ಜಿ.ಪರಮೇಶ್ವರ್, ಪುರಸಭಾ ಸದಸ್ಯ ಹೆಚ್.ಬಿ.ಪ್ರಕಾಶ್, ಕೆ.ಜಿ.ಕೃಷ್ಣೇಗೌಡ, ರಾಮಚಂದ್ರಯ್ಯ, ದೊರೆಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

