'ಕಾನೂನು ಬದ್ಧ ವಿಚ್ಛೇದನದಿಂದ ಮಹಿಳೆಗೆ ಸವಲತ್ತು ಸಾಧ್ಯ'
ಕ.ಪ್ರ.ವಾರ್ತೆ ಕುಣಿಗಲ್ ಆ. 27
ಯಾವುದೇ ಜಾತಿಯವರಿರಲಿ ಮದುವೆ ಅವರ ಸಂಪ್ರದಾಯ, ಕಟ್ಟುಪಾಡುಗಳಂತೆ ನಡೆದರೂ, ಹಲವು ಕಾರಣಗಳಿಂದಾಗುವ ವಿಚ್ಛೇದನ ಕಾನೂನು ಬದ್ಧವಾಗಿ ಆದಾಗ ಮಾತ್ರವೆ ನೊಂದ ಮಹಿಳೆಯರಿಗೆ ಕಾನೂನು ಬದ್ಧ ನೆರವು ಸವಲತ್ತು ದೊರಕಲು ಸಾಧ್ಯ ಎಂದು ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶೆ ಎಲ್.ಶಾರದ ತಿಳಿಸಿದರು.
ಮಂಗಳವಾರ, ಪಟ್ಟಣದ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿನ ಖಾಸಗಿ ಕಾರ್ಖಾನೆಯಲ್ಲಿ, ಕಾರ್ಮಿಕರಿಗಾಗಿ ಜಿಲ್ಲಾ, ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ ಇತರೆ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಕಾನೂನು ಅರಿವು ನೆರವು ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶದ ಬಹುತೇಕ ಪ್ರದೇಶಗಳಲ್ಲಿ ಸೂಕ್ತ ಕಾನೂನಿನ ಅರಿವಿಲ್ಲದೆ ಹಲವು ಸಮಸ್ಯೆಗಳನ್ನು ಮಹಿಳೆಯರು ಎದುರಿಸುತ್ತಾ, ಅಶಾಂತಿಯಿಂದ ಬಳಲುವಂತಾಗಿದ್ದಾರೆ. ಮಹಿಳೆಯರು ಅದರಲ್ಲೂ ದುಡಿಯುವ ವರ್ಗದ ಮಹಿಳೆಯರು ದೈನಂದಿನ ಜೀವನದಲ್ಲಿ ತಮಗೆ ಎದುರಾಗುವ ಪರಿಸ್ಥಿತಿಗೆ ಅನುಗುಣವಾಗಿ ಕನಿಷ್ಠ ಕಾನೂನಿನ ಅರಿವು ಪಡೆದಾಗ ಕಾನೂನಿಂದ ನೆಮ್ಮದಿಯುತ ಜೀವನ ನಡೆಸಬಹುದಾಗಿದೆ. ಮಹಿಳಾ ಕಾರ್ಮಿಕರು ಸೇರಿದಂತೆ ಕಾನೂನಿನ ಅರಿವಿನ ಬಗ್ಗೆ ಯಾವುದೇ ನಾಗರಿಕರು ನ್ಯಾಯಾಲಯದ ಕಾನೂನು ಸೇವಾ ಪ್ರಾಧಿಕಾರದಲ್ಲಿ ಉಚಿತ ನೆರವು ಪಡೆಯಬಹುದೆಂದರು.
ಶೋಷಣೆ: ವಕೀಲರ ಸಂಘದ ಅಧ್ಯಕ್ಷ ಕೆ.ಎಚ್.ದಯಾನಂದ್, ಮಹಿಳಾ ಕಾರ್ಮಿಕರು ಇಂದು ಹೆಚ್ಚಿನ ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ, ಕಾನೂನು ಬದ್ಧವಾಗಿ ಅವರಿಗ ಕಲ್ಪಿಸಲಾಗಿರುವ ಕಾನೂನುಗಳ ಬಗ್ಗೆ ಕನಿಷ್ಠ ಅರಿವಿದ್ದಲ್ಲಿ, ಶೋಷಣೆ ಮುಕ್ತ ವಾತಾವರಣದಲ್ಲಿ ತಮಗಿರುವ ಸಂವಿಧಾನ ಬದ್ಧ ಹಕ್ಕನ್ನು , ಜೀವನವನ್ನು ಅನುಭವಿಸಬಹುದೆಂದರು. ವಕೀಲರಾದ ಕೆ.ಎಂ.ತಿಮ್ಮಪ್ಪ, ನವೀದಾ ಸುಲ್ತಾನ್, ಕಾರ್ಮಿಕ ಕಾಯಿದೆ, ಕಾರ್ಮಿಕರಿಗೆ ನೀಡಲಾಗಿರುವ ಕಾನೂನು ಬದ್ಧ ಸವಲತ್ತುಗಳ ಬಗ್ಗೆ ವಿವರಿಸಿದರು.
ಕಾರ್ಖಾನೆ ಮಾಲೀಕ ಬಾಲಾಜಿ ಅಧ್ಯಕ್ಷತೆ ವಹಿಸಿದ್ದು, ನ್ಯಾಯಾಧೀಶ ಎನ್.ಮುನಿರಾಜು, ಜಿ.ಕೆ.ದಾಕ್ಷಾಯಿಣಿ, ಎಪಿಪಿ ಸುರೇಖಾ ಹಿರೆಮಠ, ವಕೀಲ ನಿಸ್ಸಾರ್ ಆಹಮದ್, ಲೋಕೇಶ್, ಚಂದ್ರಶೇಖರ್, ರೆಹಮಾನ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

