ತುಮಕೂರು

ನಾಡಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ನೇಮಿಸುವಂತೆ ಒತ್ತಾಯ

Published On :

ಹುಳಿಯಾರು: ಜಾತಿ, ಆದಾಯ ಪ್ರಮಾಣಪತ್ರ, ಪಹಣಿ, ಅಂಗವಿಕಲ, ವೃದ್ಧಾಪ್ಯ ಹಾಗೂ ವಿಧವಾವೇತನ ಸೇರಿದಂತೆ ಕಂದಾಯ ಇಲಾಖೆಯಲ್ಲಿ ದೊರೆಯುವ ಜಮೀನಿನ ದಾಖಲೆಗಳನ್ನು ಪಡೆಯಲು ಪ್ರತಿ ನಿತ್ಯ ನೂರಾರು ಮಂದಿ ರೈತರು ಪಟ್ಟಣದ ನಾಡಕಚೇರಿಗೆ ಅಲೆಯುವಂತಾಗಿದೆ.ಇದಕ್ಕೆ ಮೂಲ ಕಾರಣ ನಾಡಕಚೇರಿಯಲ್ಲಿ ಕೊಠಡಿಗಳ, ಸಿಬ್ಬಂದಿಗಳ ಮತ್ತು ಕಂಪ್ಯೂಟರ್ ಆಪರೇಟರ್, ಕಂಪ್ಯೂಟರ್ ಪ್ರಿಂಟರ್ ಉಪಕರಣಗಳ
ಕೊರತೆ. ಇದರಿಂದಾಗಿ ರೈತರು ಪರದಾಡುವ ಸ್ಧಿತಿ ನಿರ್ಮಾಣಗೊಂಡಿದ್ದು ಕೂಡಲೇ ಇದನ್ನು ಪರಿಹರಿಸುವಂತೆ ಹೋಬಳಿಯ ಗ್ರಾ.ಪಂ.ಸದಸ್ಯರು ಹಾಗೂ ಸಾರ್ವಜನಿಕರು  ತಿಪಟೂರು ಉಪವಿಭಾಗಧಿಕಾರಿ ಶಿಲ್ಪಾ ಅವರನ್ನು ಒತ್ತಾಯಿಸಿದರು.
ಹುಳಿಯಾರಿನಲ್ಲಿ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರೊಂದಿಗೆ ಸ್ಥಳೀಯರು,
ಗ್ರಾ.ಪಂ.ಸದಸ್ಯರು ಹಾಗೂ ಸುತ್ತಮುತ್ತಲ ಸಾರ್ವಜನಿಕರು ನಾಡಕಚೇರಿಯಲ್ಲಿ ನಿತ್ಯ ಎದುರಾಗುವ ಸಮಸ್ಯೆಗಳನ್ನು ಬಿಚ್ಚಿಟ್ಟರು.
ಕೃಷಿಗೆ ಸಂಬಂಧಿಸಿದ ದಾಖಲೆಪತ್ರ ಮತ್ತು ಜಾತಿ ಆದಾಯ ಪ್ರಮಾಣ ಪತ್ರಗಳಂತ ಪ್ರಮುಖ ದಾಖಲೆಪತ್ರಗಳನ್ನು ನೀಡುತಿದ್ದ ನೆಮ್ಮದಿ ಕೇಂದ್ರವನ್ನ ವಜಾಗೊಳಿಸಿದ ಸರ್ಕಾರ ನಾಡಕಚೇರಿಯಲ್ಲಿಯೇ ಅಟಲ್ ಜೀ ಸ್ನೇಹ ಕೇಂದ್ರವನ್ನ ಸ್ಧಾಪಿಸಿ ಜಮೀನುಗಳ ದಾಖಲೆ ಪತ್ರನಿಡುವ ಯೋಜನೆಯನ್ನ ಜಾರಿಗೆ ತಂದಿದೆ.
ಆದರೆ ಈ ಹೊಸ ಯೋಜನೆಯನ್ನ ಜಾರಿಗೊಳಿಸಿದ ಸರಕಾರ ಇದಕ್ಕೆ ಬೇಕಾದ ಕೊಠಡಿಗಳನ್ನ, ಸಿಬ್ಬಂದಿಗಳನ್ನ ಕಂಪ್ಯೂಟರ್ ಉಪಕರಣಗಳನ್ನ ಸಮರ್ಪಕವಾಗಿ ನೀಡದಿರುವುದು ವಿಷಾದನೀಯ. ಇದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇರುವ ಕೊಠಡಿಗಳಲ್ಲಿಯೇ ಅನುಸರಿಸಿಕೊಂಡು ಹಿಂಸೆಯಿಂದ ಕೆಲಸ ನಿರ್ವಹಿಸುವ ಪರಿಸ್ಧಿತಿ ನಿರ್ಮಾಣಗೊಂಡಿದೆ.  ಪರಿಣಾಮ ಕಚೇರಿಗೆ ಬರುವ ರೈತರು ಕೂರಲು, ನಿಲ್ಲಲು ಸ್ಥಳವಿಲ್ಲದೆ ತಮ್ಮ ಕೆಲಸ ಮಾಡಿಸಿಕೊಳ್ಳಲು ಪರದಾಡುವಂತಾಗಿದೆ ಎಂದು ದೂರಿದರು. ಸಮಸ್ಯೆ ಬಗ್ಗೆ ವಿಳಂಬವಿಲ್ಲದೆ ಕೂಡಲೆ ಗಮನಹರಿಸುವಂತೆ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.