ತುಮಕೂರು

60 ವರ್ಷ ಮೇಲ್ಪಟ್ಟವರಿಗೆ ಬಸ್ಸಿನಲ್ಲಿ ರಿಯಾಯ್ತಿಗೆ ಒತ್ತಾಯ

Published On :

ತುಮಕೂರು: 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಬಸ್ಸಿನಲ್ಲಿ ಪ್ರಯಾಣಿಸಲು ರಿಯಾಯಿತಿ ನೀಡಬೇಕೆಂದು ಜಿಲ್ಲಾ ಹಿರಿಯ ನಾಗರಿಕರ ವೇದಿಕೆಯ ಲಕ್ಷ್ಮೀಕಾಂತ್ ಒತ್ತಾಯಿಸಿದರು. ಇಲ್ಲಿನ ಬಾಲಭವನದಲ್ಲಿ ತುಮಕೂರು ಜಿಲ್ಲಾ ಹಿರಿಯ ನಾಗರಿಕರ ವೇದಿಕೆಯ ವತಿಯಿಂದ ಏರ್ಪಾಟಾಗಿದ್ದ ಸಭೆಯಲ್ಲಿ ಮಾತನಾಡಿದರು.
60ವರ್ಷ ತುಂಬಿದ ಎಲ್ಲರೂ  ಹಿರಿಯ ನಾಗರಿಕರಾಗಿದ್ದು ಅವರು ಸರ್ಕಾರದಿಂದ ದೊರೆಯಬಹುದಾದ ಎಲ್ಲಾ ಸೌಲತ್ತುಗಳನ್ನು ಪಡೆಯಲು ಸಂಘಟಿತರಾಗಬೇಕು ಎಂದರು. ಹಿರಿಯ ನಾಗರಿಕರ ಕುಂದುಕೊರತೆಗಳನ್ನು ಪ್ರತಿ ತಿಂಗಳು 11 ನೇ ತಾರೀಖು ನಡೆಯುವ ಮಾಸಿಕ ಸಭೆಯಲ್ಲಿ ತಿಳಿಸುವುದರ ಮೂಲಕ ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳು ಮತ್ತು ಸಂಘದ ಕಡೆಯಿಂದ ಸಹಾಯ ಪಡೆಯಬೇಕೆಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮಾಲೂರಪ್ಪನವರು ಹಿರಿಯ ನಾಗರಿಕರು ಹಾಗೂ ಗುರುಹಿರಿಯರಲ್ಲಿ ಗೌರವ ಹೆಚ್ಚಿಸಿ ಪೂಜ್ಯ ಭಾವನೆಯನ್ನು ಬೆಳೆಸಲು ಹಾಗೂ ಸಮಾಜವನ್ನು ಸನ್ಮಾರ್ಗಕ್ಕೆ ತರಲು ಹಿರಿಯ ನಾಗರಿಕರ ಜವಬ್ದಾರಿ ಹೆಚ್ಚಿಗೆ ಇದೆ, ಭ್ರಷ್ಟಾಚಾರ ನಿರ್ಮೂಲನದಂತಹ ಕಾರ್ಯಕ್ರಮಗಳನ್ನು ಹಾಗೂ ಹಿರಿಯ ನಾಗರಿಕರಿಗೆ ದೊರೆಯಬಹುದಾದ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಎಲ್ಲರೂ ಮುಂದಾಗಬೇಕು ಎಂದರು. ಕೇಂದ್ರ ಸರ್ಕಾರದವರು ರೈಲಿನಲ್ಲಿ ಪುರುಷರಿಗೆ ಶೇ. 40, ಮಹಿಳೆಯರಿಗೆ ಶೇ. 50 ರಿಯಾಯಿತಿ ಪ್ರಯಾಣದರ ನೀಡುತ್ತಿರುವಂತೆ ಕರ್ನಾಟಕ ಸರ್ಕಾರವು  ಬಸ್ಸಿನಲ್ಲಿ ಹಿರಿಯ ನಾಗರಿಕ ಪುರುಷರಿಗೆ ಶೇ. 40, ಮಹಿಳೆಯರಿಗೆ ಶೇ. 50 ರಿಯಾಯಿತಿ ಪ್ರಯಾಣದರ ನಿಗದಿ ಪಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಎನ್. ಎಸ್. ಕೃಷ್ಣಮೂರ್ತಿ ಪ್ರಾರ್ಥಿಸಿದರು. ಎಂ ರಾಜರಾವ್ ಥಾವರೆ ವಂದಿಸಿದರು.   ಮಾಲೂರಪ್ಪ, ಲಕ್ಷ್ಮೀಕಾಂತ್, ಎಸ್ ಶಿವದೇವಯ್ಯ, ಅಬ್ದುಲ್ ಕರೀಂ, ಪುಟ್ಟಣ್ಣ, ರಾಮಲಿಂಗೇಗೌಡ, ಹೆಚ್.ಎಂ ಕೃಷ್ಣಯ್ಯ, ಜಿ.ಸಿ ನಾಗಭೂಷಣ, ಪುಟ್ಟಕಾಮಯ್ಯ, ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.