ತುಮಕೂರು

ನಾಡು ನುಡಿ ಸಂಸ್ಕೃತಿ ಮಾತನ್ನಾಡುವ ಕಲೆಗೆ ಸೀಮಿತ

Published On :

ತುಮಕೂರು: ಇಂದಿನ ಸಮಾಜದಲ್ಲಿ ನಾಡು ನುಡಿ ಸಂಸ್ಕೃತಿ ಕೇವಲ ಮಾತನ್ನಾಡುವ ಕಲೆಗೆ ಮಾತ್ರ ಸೀಮಿತವಾಗಿವೆ ಆ ವಿಚಾರವಾಗಿ ಮಾತನ್ನಾಡುವ ನಾವುಗಳೇ ಅದರ ವಿರುದ್ಧ ನಡೆ ಅನುಸರಿಸುತ್ತಿರುವುದು ಮುಂದಿನ ತಲೆಮಾರಿನ ಜನಜೀವನವನ್ನು ಇರಲಿ ತಮ್ಮ ಜೀವನವನ್ನೇ ಅಧೋಗತಿಗೆ ತಳ್ಳುವಂತಿದೆ ಎಂದು ಗೌರಿಶಂಕರ ಸ್ವಾಮೀಜಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುಸುಮ ಕಲಾ ಸಂಘ ಮಳೇಕಲ್ಲಹಳ್ಳಿ ಮತ್ತು ಗುಲ್ಬರ್ಗದ ಕರ್ನಾಟಕ ಕಲಾ ಸಾಹಿತ್ಯ ಸಂಸ್ಕೃತಿ ಸೇವಾ ಸಂಸ್ಥೆ ಸಹಯೋಗದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಇಂದು ಸಮಾಜದ ನಡೆಯನ್ನೆ ಮತ್ತೊಂದು ದಾರಿಯಲ್ಲಿ ಕೊಂಡುಯ್ಯವ ಆಸೆ ಆಮಿಷಗಳ ದಾರಿಯನ್ನು ಎಲ್ಲಾ ವರ್ಗದ ಜನರನ್ನು ಸೆಳೆಯ ಸುಳಿತದಲ್ಲಿ ಬೀಳುತ್ತಿರುವುದು ದುರದೃಷ್ಟಕರ ಎಂದರು.
ಇನ್ನಾದರೂ ಯುವ ಸಮುದಾಯ ಎಚ್ಚೆತ್ತುಕೊಂಡು ಸಮಾಜೋದ್ಧಾರದ ದಾರಿಯಲ್ಲಿ ನಡೆಯಬೇಕು ಎಂದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಗತಿಪರ ಚಿಂತಕ, ನವ ಸಾಹಿತ್ಯ ಚಿಂತಕ ತ್ಯಾಗರಾಜು ಮಾತನಾಡಿ ಜನಪದ ಕಲೆ ಕೇವಲ ಗ್ರಾಮೀಣ ಪ್ರದೇಶದಲ್ಲಿ ತನ್ನ ಸೊಗಡನ್ನು ಉಳಿಸಿಕೊಂಡಿದೆ. ನಗರ ಪ್ರದೇಶದಲ್ಲಿ ತನ್ನತನದ ಜೊತೆಗೆ ಆಧುನಿಕತೆಯ ಸೊಬಗನ್ನು ಮೈಗೂಡಿಸಿಕೊಂಡು ಮತ್ತೊಂದು ರೂಪದೊಂದಿಗೆ ಬೆಳೆಯುತ್ತಿರುವುದ ಸಂತೋಷದ ವಿಚಾರ ಎಂದರು. ಪಾಶ್ಚಾತ್ಯ ಪ್ರಭಾವದಿಂದ ತನ್ನ ಎಲ್ಲೆಯನ್ನು ದಾಟಿ ತನ್ನ ಮೂಲವನ್ನೆ ಕಳೆದುಕೊಳ್ಳುತ್ತಿರುವುದು ಚಿಂತಿಸಬೇಕಾದ ವಿಚಾರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಿದ್ದನಂಜಯ್ಯ ಮಧನಘಟ್ಟ, ರಮೇಶ್ ಮೆಳೇಕಲ್ಲಹಳ್ಳಿ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಗುಲ್ಬರ್ಗದ  ಕರ್ನಾಟಕ ಕಲಾ ಸಾಹಿತ್ಯ ಸಂಸ್ಕೃತಿ ಸೇವಾ ಸಂಸ್ಥೆ ವತಿಯಿಂದ ಶರಣಬಸಪ್ಪ ಹಾಗೂ ತಂಡದಿಂದ ತತ್ವಪದ ಹಾಗೂ ಜನಪದ ಗೀತೆಗಳ ಗಾಯನ ಕಾರ್ಯಕ್ರಮ ಹಾಗೂ ಮೆಳೇಕಲ್ಲಹಳ್ಳಿ ಕುಸುಮ ಕಲಾ ಸಂಘ ಇವರಿಂದ ಹಿಂಗೈತಪ್ಲೋಕ ನಾಟಕಗಳು ಪ್ರದರ್ಶನಗೊಂಡವು. ದರ್ಶನ್ ನಿರೂಪಿಸಿ ವಂದಿಸಿದರು. ವೆಂಕಟೇಶ್ ಸ್ವಾಗತಿಸಿದರು ಶರತ್ ಪ್ರಾರ್ಥಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.