ತುಮಕೂರು

ಪನಾಮ ಸೊರಗು ರೋಗಕ್ಕೆ ತುತ್ತಾಗುತ್ತಿರುವ ಬಾಳೆ

Published On :

ತಿಪಟೂರು: ಇತ್ತೀಚಿನ ದಿನಗಳಲ್ಲಿ ರೈತರು ಬಾಳೆಯನ್ನು ಹೆಚ್ಚಿನ ವಿಸ್ತೀರ್ಣದಲ್ಲಿ ಬೆಳೆಯುತ್ತಿದ್ದು, ಅಧಿಕ ಇಳುವರಿಯನ್ನು ಸಹ ಪಡೆಯುತ್ತಿದ್ದಾರೆ. ಆದರೆ ಪನಾಮ ಸೊರಗು ರೋಗಕ್ಕೆ ಬಾಳೆಯು ತುತ್ತಾಗುತ್ತಿದ್ದು, ರೈತರು ಸಂಕಷ್ಟದ ಸುಳಿಗೆ ಸಿಲುಕಿ ಆರ್ಥಿಕ ನಷ್ಟಕ್ಕೊಳಗಾಗುತ್ತಿದ್ದಾರೆಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.  ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಬಿದರೆಗುಡಿ ಕಾವಲ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬಾಳೆಯಲ್ಲಿ ಪನಾಮ ಸೊರಗು ರೋಗ ನಿರ್ವಹಣೆ ಪ್ರಾತ್ಯಕ್ಷಿಕೆಯಲ್ಲಿ ರೋಗದ ಗುಣಲಕ್ಷಣಗಳನ್ನು ವಿವರಿಸಿದ ಅವರು ರೋಗಬಾಧಿತ ಗಿಡಗಳ ಎಲೆಗಳು ಮೊದಲಿಗೆ ಹಳದಿಯಾಗಿ ಜೋತು ಬೀಳುತ್ತವೆ.  ನಂತರ ಗಿಡಗಳು ಸೊರಗುತ್ತದೆ. ಇಂತಹ ಪರಿಣಾಮಕಾರಿ ರೋಗವನ್ನು ತಡೆಗಟ್ಟಲು ನಾಟಿ ಮಾಡುವ ಮೊದಲು ಅರೋಗ್ಯವಂತ ಕಂದುಗಳನ್ನು ಆಯ್ಕೆ ಮಾಡುವುದು, ಕಂದುಗಳ ಮೇಲಿರುವ ಹಳೆಯ ಬೇರುಗಳನ್ನು ಸ್ವಚ್ಛಗೊಳಿಸುವುದು ನಂತರ ಕಂದುಗಳನ್ನು ಪ್ರತಿ ಲೀಟರ್ ನೀರಿಗೆ ಒಂದು ಗ್ರಾಂ ಕಾರ್ಬಲ್ ಡೈಜಿಯಂ ಶಿಲೀಂದ್ರನಾಶಕ ಬೆರೆಸಿದ ದ್ರಾವಣದಲ್ಲಿ 10-15 ನಿಮಿಷ ದ್ರಾವಣದಲ್ಲಿ ಬಿಡುವುದು. ನಾಟಿಗೆ ಮೊದಲು ಪ್ರತಿ ಗುಣಿಗೆ 0.5ಕೆ.ಜಿ. ಬೇವಿನ ಹಿಂಡಿ ಹಾಗೂ 50ಗ್ರಾಂ ಟ್ರೈಕೋಡರ್ಮ ಹಾಕಿ ನಾಟಿ ಮಾಡುವುದರಿಂದ ಮುಂದೆ ಬರುವ ರೋಗವನ್ನು ತಡೆಗಟ್ಟಬಹುದು. ಈ ರೀತಿ ನಿರ್ವಹಣೆ ಮಾಡದಿದ್ದಲ್ಲಿ ನಂತರದ ದಿನಗಳಲ್ಲಿ ರೋಗ ಕಂಡುಬಂದಾಗ ಪ್ರತಿ ಲೀ. ನೀರಿಗೆ 20ಗ್ರಾಂ ಕಾರ್ಬನ್ ಡೈಜಿಯಂ ಅಥವಾ 10 ಮಿ.ಲೀ. ಹೆಕ್ಸಕೊನಜೋಲ್ ಶೀಲಿಂದ್ರನಾಶಕ ಬೆರೆಸಿದ ದ್ರಾವಣವನ್ನು ಸಿದ್ಧಪಡಿಸಬೇಕು. ಮತ್ತು ಚುಚ್ಚು ಮದ್ದು ಮೂಲಕ ಪ್ರತಿ ಗಿಡಕ್ಕೆ 10.ಮಿ.ಲೀ ಸಿಂಪರಣಾ ದ್ರಾವಣವನ್ನು ಸಿರೆಂಜ್ ಮೂಲಕ ಗಿಡಕ್ಕೆ ಕೊಡುವುದು. ಅಥವಾ ಪ್ರತಿ ಲೀಟರ್ ನೀರಿಗೆ 1 ಗ್ರಾಂ ಕಾರ್ಬಲ್ ಡೈಜಿಯಂ ಅಥವಾ 2 ಮಿ.ಸೀ. ಹೆಕ್ಸಕೊನಜೋಲ್ ಬೆರೆಸಿದ ದ್ರಾವಣವನ್ನು ಸಿದ್ಧಪಡಿಸಿ ನಂತರ 3ಲೀಟರ್ ಸಿಂಪರಣಾ ದ್ರಾವಣವನ್ನು ಪ್ರತಿ ಗಿಡದ ಬುಡದ ಸುತ್ತ ಸುರಿಯಬೇಕೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.