ತುಮಕೂರು

'ರೈತರ ಅಭ್ಯುದಯಕ್ಕೆ ಬ್ಯಾಂಕ್ ಮಹತ್ವದ ಯೋಜನೆ'

Published On :

ಗುಬ್ಬಿ: ಕೃಷಿ ಅಭಿವೃದ್ಧಿಗಾಗಿ ತಾಲೂಕಿನ ರೈತರಿಗೆ 6.5 ಕೋಟಿ ರು.ಗಳಷ್ಟು ಸಾಲ ನೀಡಿದ ಪಿಎಲ್ಡಿ ಬ್ಯಾಂಕ್ನಲ್ಲಿ 3275 ಮಂದಿ ಸಾಲಗಾರರಿದ್ದಾರೆ. ರೈತರ ಅಭ್ಯುದಯಕ್ಕೆ ಬ್ಯಾಂಕ್ ಹಲವಾರು ಮಹತ್ವದ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಪಿಎಲ್ಡಿ ಬ್ಯಾಂಕ್ ನೂತನ ಅಧ್ಯಕ್ಷ ಎನ್. ಸದಾಶಿವಯ್ಯ ತಿಳಿಸಿದರು. ಪಟ್ಟಣದಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕೃಷಿ ಚಟುವಟಿಕೆಗಾಗಿ ಸಾಲ ಪಡೆಯುವ ರೈತರು ಬೇರೆ ಉದ್ದೇಶಗಳಿಗೆ ಬಳಸಿಕೊಂಡು ಮರುಪಾವತಿ ಮಾಡದಿರುವ ನಿದರ್ಶನಗಳು ಹೆಚ್ಚಾಗಿವೆ. ಸರಕಾರ ನೀಡುವ ಪೊಳ್ಳು ಭರವಸೆ ಹಾಗೂ ತಪ್ಪು ಸಂದೇಶಗಳಿಂದ ಸಹಕಾರಿ ಬ್ಯಾಂಕ್ನಲ್ಲಿ ಸಾಲ ಮರುಪಾವತಿ ಕುಂಠಿತವಾಗಿದೆ. ಸಹಕಾರಿ ಕ್ರಾಂತಿ ಮೂಲಕ ರೈತರು ಅಭಿವೃದ್ಧಿ ಹೊಂದಲು ಸಕಾಲಕ್ಕೆ ಮರುಪಾವತಿ ಅತಿ ಮುಖ್ಯ ಎಂದ ಅವರು ರೈತರಲ್ಲಿ ಸಾಲಮನ್ನ ಜಾರಿಗೊಳಿಸುವ ಆಸೆ ಹುಟ್ಟಿಸುವ ಸರಕಾರದ ಯೋಜನೆಗಳು ಸಹಕಾರಿ ಬ್ಯಾಂಕ್ಗಳ ಅಭಿವೃದ್ಧಿಗೆ ಮಾರಕವಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಿಟ್ಟೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಂಕರಾನಂದ, ತಾಪಂ ಸದಸ್ಯ ಸೋಮೇಶ್. ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾದ ಡಿ.ಬಿ.ಚಂದ್ರಣ್ಣ, ಬಿ.ಕೆ.ಪರಮಶಿವಯ್ಯ, ಸೋಮಶೇಖರಯ್ಯ, ನರಸಿಂಹಯ್ಯ, ನಿಂಗೇಗೌಡ, ಜಯಮ್ಮ, ಜಿ.ಎಂ.ಬಸವರಾಜು, ಎಂ.ಎಸ್.ರಂಗಪ್ಪ, ಸಿಡಿಒ ನಂಜಪ್ಪ, ವಕೀಲರ ಸಂಘದ ಕೆ.ಜಿ.ನಾರಾಯಣ್, ರಾಜೀವ್, ಸಿದ್ದರಾಮಯ್ಯ ಇತರರು ಅಭಿನಂದಿಸಿದರು.
ನಿವೃತ್ತ ನೌಕರರ ಸಂಘದ ವಾರ್ಷಿಕೋತ್ಸವ
ಚಿಕ್ಕನಾಯಕನಹಳ್ಳಿ: ಪಟ್ಟಣದ ನಿವೃತ್ತ ನೌಕರರ ಸಂಘದ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ಸಿ.ಡಿ.ರುದ್ರಮುನಿ ತಿಳಿಸಿದ್ದಾರೆ.  ಡಿ.17ರಂದು  ಮಂಗಳವಾರ ಬೆಳಿಗ್ಗೆ 10.30ಕ್ಕೆ ಸಂಘದ ಆವರಣದಲ್ಲಿ ವಾರ್ಷಿಕೋತ್ಸವ ಹಮ್ಮಿಕೊಂಡಿದ್ದು,ಇದರ ಅಂಗವಾಗಿ 75ವರ್ಷ ತುಂಬಿರುವ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸನ್ಮಾನಕ್ಕೆ ಅರ್ಹರಾದವರು ತಮ್ಮ ವಯಸ್ಸಿನ ಖಾತರಿ ಬಗ್ಗೆ ಜನ್ಮ ದಿನಾಂಕವನ್ನು 10ನೇ ತಾರೀಖಿನೊಳಗೆ ಸಂಘದ ಅಧ್ಯಕ್ಷರಾದ ಸಿ.ರಾಮಯ್ಯನವರಿಗಾಗಲಿ, ಅಥವಾ ಸಂಘದ ಕಾರ್ಯದರ್ಶಿ ರುದ್ರಮುನಿಯವರಿಗಾಗಲಿ ತಲುಪಿಸಲು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.