ಸಂಗೀತ ಕ್ಷೇತ್ರದ ಮೇಲೂ ಜಾಗತೀಕರಣದ ಪ್ರಭಾವ
ಕ.ಪ್ರ.ವಾರ್ತೆ ತುಮಕೂರು ಡಿ. 3
ಜಾಗತೀಕರಣದ ಪ್ರಭಾವ ಸಂಗೀತ ಕ್ಷೇತ್ರದ ಮೇಲೂ ಆಗುತ್ತಿದ್ದು ನಮ್ಮ ಜಾನಪದ ಸಂಸ್ಕೃತಿ, ಪರಂಪರೆ ಬಿಂಬಿಸುವ ಮೌಲ್ಯಯುತ ಹಾಡುಗಳ ದಿನೇ ದಿನೇ ಕಣ್ಮರೆಯಾಗುತ್ತಿವೆ ಎಂದು ಸಾಹಿತಿ, ತುಮಕೂರು ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಹೊನ್ನಗಾನಹಳ್ಳಿ ಕರಿಯಣ್ಣ ವಿಷಾದಿಸಿದರು.
ಅನನ್ಯ ಸಾಂಸ್ಕೃತಿಕ ವೇದಿಕೆ ಎಸ್.ಎಸ್. ಪುರಂನ ತ್ರಿನೇತ್ರ ಸ್ಕೂಲ್ ಆಫ್ ಡ್ಯಾನ್ಸ್ನಲ್ಲಿ ಹಮ್ಮಿಕೊಂಡಿದ್ದ ಕನ್ನಡ ಗೀತಗಾಯನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಸಂಗೀತದಲ್ಲಿ ಪಾಶ್ಚಾತ್ಯ ಅನುಕರಣೆ ಹೆಚ್ಚಾಗುತ್ತಿದೆ. ನಮ್ಮತನ ನಮ್ಮ ಮೌಲ್ಯಗಳನ್ನು ಮರೆಯುತ್ತಿದ್ದೇವೆ. ಇದು ನಮ್ಮ ಸಾಂಸ್ಕೃತಿಕ ಪರಂಪರೆ ಹಾಗೂ ಬದುಕಿನ ಮೇಲೆಯೂ ಪರಿಣಾಮ ಬೀರುತ್ತಿದೆ. ಅರ್ಥವಿಲ್ಲದ ಭಾಷೆ ಹಾಗೂ ಹಾಡುಗಳನ್ನು ಅನುಕರಿಸುವ ಬದಲು ನಮ್ಮ ಮಾತೃಭೂಮಿಯ ಹಾಡುಗಳಿಗೆ ಒತ್ತು ಕೊಟ್ಟರೆ ಕೇಳುಗರಿಗೆ ನಮಗೆಲ್ಲಾ ಸಂತೋಷ ತರುತ್ತದೆ ಎಂದ ಅವರು ಸಂಗೀತಕ್ಕೆ ಜಾತಿ, ಭಾಷೆ ಸೋಂಕಿಲ್ಲ. ಎಲ್ಲೆಯ ಗಡಿ ಇಲ್ಲ. ಎಲ್ಲರನ್ನು ಗೆಲ್ಲುವ ಸಾಮರ್ಥ್ಯವಿದೆ ಎಂದರು.
ಬೇಸರ ಬೇಡ: ತೀರ್ಪುಗಾರರಾಗಿದ್ದ ಗಾಯಕ ಮಲ್ಲಿಕಾರ್ಜು ಕೆಂಕೆರೆ ಮಾತನಾಡಿ ಹಾಡುಗಾರರಿಗೆ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯವಾಗಬೇಕೆ ಹೊರೆತು ಬಹುಮಾನ ಸಿಗಲಿಲ್ಲ ಎಂದು ಬೇಸರ ಪಟ್ಟುಕೊಳ್ಳಬಾರದು ಎಂದರು.
ಇದೊಂದು ಕಲೆಯಾಗಿದ್ದು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪೂರಕವಾಗುವ ಹಾಗೂ ತಮ್ಮಲ್ಲಿರುವ ಸುಪ್ತ ಪ್ರತಿಭೆ ಹೊರಹಾಕಲು ಇಂತಹ ಸ್ಪರ್ಧಾ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ. ಸಂಗೀತಗಾರ ಮಾನಸಿಕ ನೆಮ್ಮದಿ ತಂದುಕೊಳ್ಳಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಅನನ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಸಿ. ಲಲಿತಾ ಮಾತನಾಡಿ ಉದಯೋನ್ಮುಖರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಹಾಗೂ ಕನ್ನಡ ಕವಿವರ್ಯರು ನಾಡು ನುಡಿಯ ಬಗ್ಗೆ ಕಳಕಳಿ ಹೊಂದಿದವರ ಸ್ಮರಣೆ, ನಾಡಿನ ಸಂಸ್ಕೃತಿ ಪೋಷಣೆಗೆ ಇಂತಹ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ ಎಂದರು.
ಸ್ಪರ್ಧೆಗಳಲ್ಲಿ ಬಹುಮಾನ ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ಹಿರಿ, ಕಿರಿಯ ಗಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾ ಪ್ರದರ್ಶನ ನೀಡಿರುವುದು ಸಂತೋಷದ ಸಂಗತಿ ಎಂದರು. ನಾಗರತ್ನ ಚಂದ್ರಪ್ಪ, ಗಾಯಕ ತು.ಮ. ಬಸವರಾಜ, ಮೋಹನ್ ಜಾದುಗಾರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

