ತುಮಕೂರು

ಸಮಾಜ ಬಾಹಿರ ಕೃತ್ಯ ತಡೆಗೆ ಪೊಲೀಸ್ ದಿವ್ಯದೃಷ್ಟಿ

Published On :

ತುಮಕೂರು: ಸಮಾಜ ಬಾಹಿರ ಕೃತ್ಯ ತಡೆಯಲು ತುಮಕೂರು ಪೊಲೀಸರು ದಿವ್ಯದೃಷ್ಟಿಯತ್ತ ಹೊರಳಿದ್ದಾರೆ. ರಾಜ್ಯದಲ್ಲೇ ಮೊದಲ ಬಾರಿಗೆ ತುಮಕೂರಿನಲ್ಲಿ ಅಪರಾಧ, ಸಮಾಜ ಬಾಹಿರ ಕೃತ್ಯ ತಡೆಗಟ್ಟುವ ಹಿನ್ನೆಲೆಯಲ್ಲಿ ಹೊಸ ಚಿಂತನೆ ನಡೆದಿದ್ದು, ಬುಧವಾರ ದಿವ್ಯದೃಷ್ಟಿ ಮೊಬೈಲ್ ವಾಹನಕ್ಕೆ ಚಾಲನೆ ನೀಡಲಾಗಿದೆ.
ಈ ವಾಹನದಲ್ಲಿ ಪ್ಯಾನ್ ಟಿಲ್ಟ್ ಝೂಮ್ ಕ್ಯಾಮೆರಾ ಇದೆ. ಅದು 200 ಮೀಟರ್ ವರೆಗೂ ಸ್ವಷ್ಟ ಚಿತ್ರ ನೀಡುತ್ತದೆ. 400 ಮೀಟರ್ವರೆಗೆ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ. 140 ಕಿಮೀ ವೇಗದಲ್ಲಿ ಸಾಗುವ ವಾಹನಗಳ ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯುವ,  ರೆಕಾರ್ಡ್ ಮಾಡುವ ಸಾಮರ್ಥ್ಯವಿದೆ. ಈ ಕ್ಯಾಮೆರಾ ಡಿಜಿಟೆಲ್ ವಿಡಿಯೊ ರೆಕಾರ್ಡ್ಗಿಂಗ್ಗೆ ಸಂಪರ್ಕ ಸಾಧಿಸಿದೆ.  ಅಂತರ್ಜಾಲ ಬಳಸಿ ನೇರ ವಿಡಿಯೋ ದೃಶ್ಯಗಳನ್ನು ಕುಗ್ರಾಮದಲ್ಲಿ ಕುಳಿತು, ಅದಕ್ಕೆ ತಕ್ಕಂತೆ ಸೂಚನೆ ನೀಡಬಹುದಾಗಿದೆ. ಈ ದಿವ್ಯದೃಷ್ಟಿಯಿಂದ ಉತ್ತಮ ಗುಣಮಟ್ಟದ ಚಿತ್ರ ಸಿಗುವುದರಿಂದ ಎಲೆಕ್ಟ್ರಾನಿಕ್ ಸಾಕ್ಷ್ಯ ಆಗಿ ನ್ಯಾಯಾಲಯದಲ್ಲೂ ಬಳಸಬಹುದಾಗಿದೆ ಎಂದು ತಿಳಿಸಿದರು. ಅಷ್ಟೇ ಅಲ್ಲ ಸಿಸಿ ಟಿವಿ  ಕ್ಯಾಮೆರಾ, ಜಿಪಿಎಸ್ ಟ್ರ್ಕಾಕಿಂಗ್ ಸಿಸ್ಟಂ, ವೈಫೈ ಸಂಪರ್ಕ ಸಹ ಇದ್ದು, ನೇರ ಪೊಲೀಸ್ ಕಂಟ್ರೋಲ್ ರೂಂ ಸಂಪರ್ಕ ಹೊಂದಿರುವುದು ಇದರ ವಿಶೇಷ. ಜನಸಂದಣಿ ಇಲ್ಲದ ಪ್ರದೇಶಗಳಲ್ಲಿ ಅಪರಾಧ ಕೃತ್ಯ ಅಥವಾ ಸಮಾಜ  ಬಾಹಿರ ಕೃತ್ಯಗಳು ಜರುಗುತ್ತಿದ್ದುದು ಕಂಡು ಬಂದಲ್ಲಿ, ಸುಮಾರು 2.2 ಲಕ್ಷ ರು. ಮೌಲ್ಯದ ಪೊಲೀಸ್ ಕ್ಯಾಮೆರಾ ದಿವ್ಯದೃಷ್ಟಿ ಬೀರಿ, ನೇರವಾಗಿ ಪೊಲೀಸ್ ಕಂಟ್ರೋಲ್ ರೂಂಗೆ ಸಂದೇಶ ರವಾನಿಸಲಿದೆ.



ಅರ್ಜಿ ಆಹ್ವಾನ
ತುಮಕೂರು: ಮಕ್ಕಳ ಶಿಕ್ಷಣ ಹಕ್ಕು ಅಧಿನಿಯಮ 2009 ರ ಪ್ರಕಾರ 2014-15ನೇ ಸಾಲಿಗೆ 1 ನೇ ತರಗತಿ ಅಥವಾ ಪೂರ್ವ ಪ್ರಾಥಮಿಕ ತರಗತಿಗೆ ದಾಖಲಾತಿಗಾಗಿ ರು. 3.50 ಲಕ್ಷದವರೆಗೆ ವಾರ್ಷಿಕ ಆದಾಯ ಹೊಂದಿರುವವರು ಜನವರಿ 7, 2014ರಿಂದ ಫೆ. 8ರವರೆಗೆ ತಮ್ಮ ನೆರೆಹೊರೆಯ ಶಾಲೆಗಳಿಗೆ ಅರ್ಜಿ ಸಲ್ಲಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.