ತುಮಕೂರು

ಚನ್ನಿಗಪ್ಪ ಪ್ರತಿಕೃತಿ ದಹಿಸಿ ಪ್ರತಿಭಟನೆ

Published On :

ತುಮಕೂರು: ಮಾಜಿ ಸಚಿವ ಸಿ. ಚನ್ನಿಗಪ್ಪ ಹಾಗೂ ಅವರ ಪುತ್ರ ಗೌರಿಶಂಕರ್ ಅವರು ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಕೆ.ಎನ್. ರಾಜಣ್ಣ ಅಭಿಮಾನಿ ಬಳಗದವರು ನಗರದಲ್ಲಿ ಬುಧವಾರ ಚನ್ನಿಗಪ್ಪ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಕೆ.ಎನ್. ರಾಜಣ್ಣ ಅವರು ಮಧುಗಿರಿ ಶಾಸಕರದ ನಂತರ ಮರಳು ದಂಧೆಗೆ ಕಡಿವಾಣ ಹಾಕಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮಾಜಿ ಸಚಿವ ಸಿ. ಚನ್ನಿಗಪ್ಪ ಹಾಗೂ ಅವರ ಪುತ್ರ ಗೌರಿಶಂಕರ್ ಅವರು ಕೆ.ಎನ್. ರಾಜಣ್ಣ ಅವರು ಮರಳು ದಂಧೆಗೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದಿರುವುದು ಹಾಸ್ಯಾಸ್ಪದ ಸಂಗತಿ ಎಂದು ಅಭಿಮಾನಿ ಬಳಗ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕೆ.ಎನ್. ರಾಜಣ್ಣ ಅವರು ಶಾಸಕರಾದ ನಂತರ ಮರಳು ದಂಧೆ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಅಲ್ಲದೇ ಜಿಪಂ ಕೆಡಿಪಿ ಸಭೆಯಲ್ಲೂ ಕೂಡ ಅಕ್ರಮ ಮರಳು ದಂಧೆ ವಿರುದ್ಧ ಧ್ವನಿ ಎತ್ತಿದ್ದರು. ಇಷ್ಟಿದ್ದರೂ ಚನ್ನಿಗಪ್ಪ ಹಾಗೂ ಅವರ ಪುತ್ರ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದುಕ್ಕೆ ಅಭಿಮಾನಿ ಬಳಗ ಆಕ್ರೋಶ ವ್ಯಕ್ತಪಡಿಸಿದೆ.
ಈಗಾಗಲೇ ಶಾಸಕರು ಅಕ್ರಮ ಮರಳು ಸಾಗಾಣೆ ಮಾಡುತ್ತಿದ್ದ ಲಾರಿಗಳನ್ನು ಹಿಡಿಸಿ ದಂಡ ಸಹ ವಿಧಿಸಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಮಧುಗಿರಿ ತಾಲೂಕಿನಲ್ಲಿ ಹರಿಯುವ ಜಯಮಂಗಲಿ ನದಿಯ ಮರಳು  ತೆಗೆಯಲು ಸರ್ಕಾರ ಟೆಂಡರ್ ಕರೆದಿದ್ದಾಗ ದೊಡ್ಡಮಟ್ಟದ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಆ ಟೆಂಡರ್ ಅನ್ನು ರದ್ದುಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಚನ್ನಿಗಪ್ಪ ಮತ್ತು ಅವರ ಪುತ್ರ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಲಾಭದತ್ತ ಬ್ಯಾಂಕ್: ಕೆ.ಎನ್. ರಾಜಣ್ಣ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ನಂತರ ನಷ್ಟದಲ್ಲಿದ್ದ ಬ್ಯಾಂಕ್ ಅನ್ನು ಅಭೂತಪೂರ್ವ ಲಾಭದತ್ತ ಕೊಂಡೊಯ್ದಿದ್ದಾರೆ. ಈಗಾಗಲೇ ಎರಡು ಬಾರಿ ಬ್ಯಾಂಕ್ಗೆ ಪ್ರಶಸ್ತಿ ನೀಡಿದೆ. ಇಷ್ಟಿದ್ದರೂ ಸಹ ಚನ್ನಿಗಪ್ಪ ಹಾಗೂ ಅವರ ಪುತ್ರ ಗೌರಿಶಂಕರ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುತ್ತಿರುವ ಚನ್ನಿಗಪ್ಪ ಹಾಗೂ ಅವರ ಪುತ್ರ ಗೌರಿಶಂಕರನನ್ನು ಮಧುಗಿರಿ ಜನತೆ ದೂರವಿಡಬೇಕೆಂದು ತಿಳಿಸಿದರು. ಪ್ರತಿಭಟನೆಯಲ್ಲಿ ಟಿ.ಪಿ. ಮಂಜುನಾಥ, ದೇವರಾಜು, ಶಿವಕುಮಾರ್, ಚಂದ್ರಶೇಖರ ಗೌಡ ಇದ್ದರು.
ಚನ್ನಿಗಪ್ಪ ವಿರುದ್ಧ ಆಕ್ರೋಶ: ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತುಮಕೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ ಮಾತನಾಡಿ ಮಾಜಿ ಸಚಿವ ಚನ್ನಿಗಪ್ಪ ಅವರು ನಾಲಿಗೆಯನ್ನು ಬೇಕಾ ಬಿಟ್ಟಿ ಹರಿ ಬಿಡುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಅವರು ಬೆಳಗಾವಿಯಲ್ಲಿದ್ದು ಅವರು ಬಂದ ಕೂಡಲೇ ಚನ್ನಿಗಪ್ಪ ವಿರುದ್ಧ ಪ್ರತಿಭಟನೆ ತೀವ್ರಗೊಳಿಸುವುದಾಗಿ ತಿಳಿಸಿದ್ದಾರೆ. ಮಧುಗಿರಿಯ ಜನತೆ ಗೌರಿಶಂಕರನನ್ನು ಆಯ್ಕೆ ಮಾಡಿದ್ದರೂ 3 ತಿಂಗಳಲ್ಲೇ ರಾಜಿನಾಮೆ ನೀಡಿ ಬಿಜೆಪಿಗೆ ಸೇರಿದ್ದು ಅವರ ನೈತಿಕ ಅಧಃಪತನಕ್ಕೆ ಕಾರಣ. ಇಷ್ಟಿದ್ದರೂ ರಾಜಣ್ಣ ಅವರ ವಿರುದ್ಧ ಆರೋಪ ಮಾಡಲು ಅವರ್ಯಾರು ಎಂದರು. ನಂತರ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರ ಅವರು ಮಧುಗಿರಿ ಶಾಸಕರ ವಿರುದ್ಧ ಅಸಂಬದ್ಧ ಹೇಳಿಕೆ ನೀಡುತ್ತಿರುವ ಸಿ. ಚನ್ನಿಗಪ್ಪ ಹಾಗೂ ಅವರ ಪುತ್ರ ಗೌರಿಶಂಕರನನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.