ತುಮಕೂರು

ಕನ್ನಡ ಭಾಷೆ ಮನೆ ಮಾತಾಗಲಿ: ಮಂಜುನಾಥ ದೇವ

Published On :

ಮಧುಗಿರಿ: ಕನ್ನಡ ಭಾಷೆ ಮನೆ ಮಾತಾಗಬೇಕು. ಭಾವನಾತ್ಮಕವಾದ ನಮ್ಮ ಭಾಷೆಯನ್ನು ನವೆಂಬರಗೆ ಸೀಮಿತಗೊಳಿಸದೇ ನಿತ್ಯೋತ್ಸವವಾಗಬೇಕು ಎಂದು ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ ದೇವ ಕರೆ ನೀಡಿದರು.
ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಕನ್ನಡ ಜಾಗೃತಿ ವೇದಿಕೆ ವತಿಯಿಂದ ಏರ್ಪಡಿಸಿದ್ದ 3ನೇ ವರ್ಷದ ವೈಭವದ ಕನ್ನಡ ರಾಜೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕನ್ನಡ ನಮ್ಮ  ತಾಯಿ,ಮಾತೃ ಭಾಷೆಯನ್ನು ಪ್ರೀತಿಸಿ, ನಮ್ಮ ನಾಡು,ನುಡಿ,ನೆಲ, ಜಲ ವಿಚಾರ ಬಂದಾಗ ಮುಂದಿನ ಭವಿಷ್ಯಕ್ಕಾಗಿ ಪ್ರತಿಯೊಬ್ಬ ಕನ್ನಡಿಗನೂ ಹೋರಾಟಕ್ಕೆ ಸಜ್ಜಾಗಬೇಕು ಎಂದರು.  
ಮಾಜಿ ಶಾಸಕ ಡಿ.ಸಿ. ಗೌರಿಶಂಕರ್ ಕಾರ್ಯಕ್ರಮ ಉದ್ಘಾಟಿಸಿ ಮಧುಗಿರಿ ಜನತೆ  ಹಿಂದಿನ ಚುನಾವಣೆಯಲ್ಲಿ ಶಾಸಕನನ್ನಾಗಿ ಆಯ್ಕೆ ಮಾಡಿದರು. ಹಾಗಾಗಿ ಎಂದೆಂದಿಗೂ ನಾ ಮರೆಯಲಾರೆ ಮಧುಗಿರಿ ಎಂದು ಭಾವುಕರಾದರು. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ಮುಂದೆ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದರು. ಮಾಜಿ ಸಚಿವ ಸಿ.ಚನ್ನಿಗಪ್ಪ ಬಡವರ ಸೇವೆಯೇ ನಮ್ಮ ಗುರಿ, ಹಾಗಾಗಿ ಬೈರನಾಯಕನಹಳ್ಳಿಯಲ್ಲಿ ಬಡವರಿಗಾಗಿ ಕಾಲೇಜು ಸ್ಥಾಪಿಸಿ ವಿದ್ಯಾದಾನ ನೀಡಲು ಮುಂದಾಗಿದ್ದನೇ.ಈ ನೆಲದ ಋಣ ತಿರೀಸಲು ಕನ್ನಡ ತಾಯಿ ಸೇವ ಮಾಡಲು ಸದಾ ಸಿದ್ಧನಿದ್ದೇನೆ ಎಂದರು. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಚನ್ನಿಗಪ್ಪ ಪುತ್ರ ಡಿ.ಸಿ.ಗೌರಿಶಂಕರ್ ಅವರನ್ನು ಕನ್ನಡ ಜಾಗೃತಿ ವೇದಿಕೆಯಿಂದ ಸನ್ಮಾನಿಸಿದರು. ಮುಖಂಡಡ ರಮೇಶ್ ರೆಡ್ಡಿ, ಜಾಗೃತಿ ವೇದಿಕೆ ಗೌರವಾಧ್ಯಕ್ಷ ಕೇಬಲ್ ಸುಬ್ಬು, ಅಧ್ಯಕ್ಷ  ಶ್ರೀಧರ, ಪುರುಷೋತ್ತಮ್, ಕಾರ್ಯದರ್ಶಿ ರಾಘವೇಂದ್ರ, ಬಾಲು, ಸ್ವಾಮಿ, ಅಶ್ವತ್ಥ, ಅಕ್ಷಯ್, ರಮೇಶ್,ನವೀನ್, ರೋಷನ್, ಕಿರಣ್ ಗೌಡ ಇನ್ನು ಅನೇಕರು ಉಪಸ್ಥಿತರಿದ್ದರು. ಅದ್ಧೂರಿ ಸಂಗೀತ ರಸ ಸಂಜೆ ನಡೆಯಿತು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.