ತಾಲೂಕಿನ 7 ಮಸೀದಿಗಳಿಗೆ ಕಾಂಪೌಂಡ್ ಭಾಗ್ಯ
ತುರುವೇಕೆರೆ: ತಾಲೂಕಿನ 7 ಮಸೀದಿಗಳಿಗೆ ಸರ್ಕಾರ ಕಾಂಪೌಂಡ್ ಭಾಗ್ಯಕ್ಕೆ ಹಸಿರು ನಿಶಾನೆ ತೋರಿದೆ.
ಸರ್ಕಾರ ತಲಾ 1 ಲಕ್ಷ ರು.ಗಳ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆಂದು ಹಣ ಬಿಡುಗಡೆ ಮಾಡಿದೆ. ತಾಲೂಕಿನ ದಂಡಿನಶಿವರ ಹೋಬಳಿಯ ಹಟ್ಟಿಹಳ್ಳಿಯ ಹಜರತ್ ಸೈಯದ್ ಸಂಕಲಿ ಪೀರ್ ಖಾದರ್ ಷವಲಿ ದರ್ಗಾ, ದಬ್ಬೇಘಟ್ಟ ಹೋಬಳಿ ಮುದ್ದನಹಳ್ಳಿಯ ಜಲಾಲ್‌ವುದ್ದೀನ್ ಷಾವಲಿ ದರ್ಗಾ, ಮಾಯಸಂದ್ರ ಹೋಬಳಿ ಜಡೆಯ ಗ್ರಾಮದ ಹಜರತ್ ಸೈಯದ್ ನೂರ್‌ಷಾ ಖಾದರ್ ಜಿಲಾನಿ ದರ್ಗಾ, ನಿಂಬೇಹಳ್ಳಿಯ ಮಸ್ಜಿದ್-ಎ-ಆಹ್ಲೆ ಸುನಾತುಲ್ ಜಮಾತ್‌ಗೆ, ದಬ್ಬೇಘಟ್ಟಾ ಹೋಬಳಿ ಅರೇಹಳ್ಳಿಯ ಹಜರತ್ ಸೈಯದ್ ಮದಾರ ಷಾ ವಲ್ಲಿ ದರ್ಗಾ, ಮಾಯಸಂದ್ರ ಹೋಬಳಿ ದಾಸಿಹಳ್ಳಿಯ ಆಹ್ಲೆ ಸುನ್ನಾತ್‌ಉಲ್ ಜಮಾತ್, ಜುಮ್ಮಾ ಮಸೀದಿ, ಬಾಣಸಂದ್ರದ ಜಾಮಿಯಾ ಮಸೀದಿಯ ಕಾಪೌಂಡ್ ನಿರ್ಮಾಣೆಕ್ಕೆಂದು ತಲಾ ಒಂದು ಲಕ್ಷ ರು.ಗಳನ್ನು ಬಿಡುಗಡೆ ಮಾಡಿದೆ ಎಂದು ಮುಸ್ಲಿಂ ಮುಖಂಡ ರಫೀಕ್ ಅಹಮದ್ ತಿಳಿಸಿದ್ದಾರೆ. ಸದ್ಯ ಹಣ ಬಿಡುಗಡೆಯಾಗಿರುವ ಮಸೀದಿಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರು ವಕ್ಫ್ ಮಂಡಲಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ಶ್ರೇಯೋಭಿವೃದ್ಧಿಗೆ ಪಣತೊಟ್ಟಿದ್ದು ಏಕಕಾಲದಲ್ಲಿ ತಾಲ್ಲೂಕಿನ 7 ಮಸೀದಿಗಳ ಜೀರ್ಣೋಧ್ಧಾರ ನಿರ್ಮಾಣ ಕ್ಕೆ ಮುಂದಾಗಿರುವುದಕ್ಕೆ ರಫೀಕ್ ಅಹಮದ್ ಅಭಿನಂದಿಸಿದ್ದಾರೆ.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್.ಶಿವರಾಜು, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಚ್.ಹನುಮಂತಯ್ಯ, ತಾಲೂಕು ಕಾಂಗ್ರೆಸ್ ಕಾರ್ಯದರ್ಶಿ ನಂಜುಂಡಯ್ಯ ಹಾಗೂ ಪಟ್ಟಣ ಪಂಚಾಯ್ತಿಯ ಸದಸ್ಯ ಎಚ್.ಮಹೇಶ್ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಮುಸ್ಲಿಂ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ, ವಕ್ಪ್ ಖಾತೆ ಸಚಿವ ಖಮರುಲ್ಲಾ ಇಸ್ಲಾಂ, ವಕ್ಪ್ ಮಂಡಲಿ ಅಧ್ಯಕ್ಷ ಜಹೀರ್ ಹುಸೇನ್, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ತುಮಕೂರು ಶಾಸಕ ರಫೀಕ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ರವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

