ಮೂಢನಂಬಿಕೆ ದೇಶದ ಪ್ರಗತಿಗೆ ಮಾರಕ: ಶಿವಕುಮಾರ್
ತಿಪಟೂರು: ಭಾರತೀಯ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಮೂಢನಂಬಿಕೆಗಳು ದೇಶದ ಪ್ರಗತಿಗೆ ಮಾರಕ ಎಂದು ಉಪನ್ಯಾಸಕ ಮಾಕಳ್ಳಿ ಶಿವಕುಮಾರ್ ತಿಳಿಸಿದರು
ತಾಲೂಕಿನ ಹುಲ್ಲುಕಟ್ಟೆ ಗ್ರಾಮದಲ್ಲಿ ಕಲ್ಪತರು ಪದವಿ ಪೂರ್ವ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಮೂಢನಂಬಿಕೆಗಳು ಮತ್ತು ಸಮಾಜ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು ಇಂದಿನ ಆಧುನಿಕ ಯುಗದಲ್ಲೂ ಕೂಡ ಭಾರತೀಯ ಸಮಾಜದಲ್ಲಿ ಮೂಢನಂಬಿಕೆಗಳಾದ ಮಾಟ, ಮಂತ್ರ, ವಾಮಾಚಾರ, ಭಾನುಮತಿ, ಮಡೆಸ್ನಾನ, ಜ್ಯೋತಿಷ್ಯ, ವಾಸ್ತು,ಪ್ರಾಣಿಬಲಿ, ನರಬಲಿ ಮೊದಲಾದವುಗಳಿಂದ ಜನಸಾಮಾನ್ಯರು, ದುರ್ಬಲರು ಮಾನಸಿಕ ಹಾಗೂ ದೈಹಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ಮೌಢ್ಯತೆಗಳನ್ನು ಸಾಮಾನ್ಯರ ಮೇಲೆ ಒತ್ತಾಯ ಪೂರ್ವಕವಾಗಿ ಹೇರಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಮೂಢನಂಬಿಕೆಗಳು ಮಾನವ ಸಮಾಜದ ಮೌನ ಹಾಗೂ ಅಪಾಯಕಾರಿ ಶತ್ರುಗಳಾಗಿವೆ. ಈ ಮೌಢ್ಯಗಳಿಂದ ಜನತೆ ಹೊರಬಂದು ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವವನ್ನು ಬೆಳೆಸಿಕೊಂಡು ದೇಶದ ಪ್ರಗತಿಗೆ ಪೂರಕವಾಗಿಬದುಕನ್ನು ಸಾಗಿಸಬೇಕೆಂದು ಕರೆ ನೀಡಿದರು.
ಪಂಡಿತ ಪರಮಶಿವಯ್ಯ ಸ್ಥಳೀಯ ಔಷಧೀಯ ಗಿಡಮೂಲಿಕೆಗಳ ಮಹತ್ವ ಕುರಿತು ಮಾತನಾಡಿ ಸ್ಥಳೀಯವಾಗಿ ಲಭ್ಯವಿರುವ ಅಮೃತ ಬಳ್ಳಿ, ದೊಡ್ಡಪತ್ರೆ, ಚಕ್ರಮುನಿ, ವಿಟಮಿನ್ ಸೊಪ್ಪು, ಲೊಳೆಸರ ಮೊದಲಾದವುಗಳನ್ನು ಹಲವಾರು ರೋಗಗಳಿಗೆ ಔಷಧವಾಗಿ ಬಳಸಬಹುದೆಂದು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಗುಂಡಣ್ಣ ವಹಿಸಿದ್ದರು. ಗ್ರಾಮಸ್ಥರಾದ ಶಿವಬಸವಯ್ಯ, ಶಿವರುದ್ರಯ್ಯ, ನಿವೃತ್ತ ಶಿಕ್ಷಕ ಶಿವಯ್ಯ, ಉಪನ್ಯಾಸಕರಾದ ರಂಗನಾಥ್, ದಿಲೀಪ್ ಮತ್ತಿತರರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಎನ್.ಎಸ್.ಎಸ್.ಅಧಿಕಾರಿ ರಾಜಶೇಖರ್ ಸ್ವಾಗತಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

