ಎನ್.ತಿಮ್ಮಾರೆಡ್ಡಿ ರಾಜ್ಯ ಜೆಡಿಎಸ್ ಉಪಾಧ್ಯಕ್ಷ
ಪಾವಗಡ: ರಾಜ್ಯ ಜೆಡಿಎಸ್ ಘಟಕದ ಉಪಾಧ್ಯಕ್ಷರಾಗಿ ತಾಲೂಕಿನ ಹೊಟ್ಟೆ ಬೊಮ್ಮನಹಳ್ಳಿ ಎನ್.ತಿಮ್ಮಾರೆಡ್ಡಿ ಅವರನ್ನು ನೇಮಕ ಮಾಡಿರುವುದಾಗಿ ರಾಜ್ಯ ಜೆಡಿಎಸ್ ಘಟಕದ ಪ್ರಕಟಣೆ ತಿಳಿಸಿದೆ. ಕಳೆದ 40ವರ್ಷಗಳಿಂದ ಜನತಾ ಪರಿವಾರದಲ್ಲಿ ಗುರಿತಿಸಿಕೊಂಡಿದ್ದ ಎನ್.ತಿಮ್ಮಾರೆಡ್ಡಿ, ಜೆಡಿಎಸ್ ಪರಮೋಚ್ಛ ನಾಯಕ ಎಚ್.ಡಿ.ದೇವೆಗೌಡರ ಒಡನಾಡಿ ಹಾಗೂ ಕಟ್ಟಾ ಬೆಂಬಲಿಗರು. ಇವರ ಪಕ್ಷ ನಿಷ್ಠೆ ಹಾಗೂ ಸೇವೆ ಸೇರಿದಂತೆ ಕಳೆದ 25ವರ್ಷಗಳಿಂದ ಜೆಡಿಎಸ್ ಪಕ್ಷವನ್ನು ಸಂಘಟಿಸಿದ ಅವರ ಕಾರ್ಯಚಟುವಟಿಕೆ ಗುರ್ತಿಸಿದ ರಾಜ್ಯ ಜೆಡಿಎಸ್ ಘಟಕ ನೇಮಕ ಮಾಡಿ ಆದೇಶ ಹೊರಡಿಸಿದೆ.
ಸರಳ ಸಜ್ಜನಿಕೆಗೆ ಹೆಸರು: ಪಕ್ಷ ಸಂಘಟನೆ ಸೇರಿದಂತೆ ಸರಳ ಸಜ್ಜನಿಕೆಗೆ ಹೆಸರಾದ ಗಡಿ ಭಾಗದ ಎನ್.ತಿಮ್ಮಾರೆಡ್ಡಿ ಅವರನ್ನು ಗುರ್ತಿಸಿ ಪಕ್ಷದ ಜವಾಬ್ದಾರಿ ಹಾಗೂ ಮಹತ್ತರವಾದ ರಾಜ್ಯ ಘಟಕದ ಉಪಾಧ್ಯಕ್ಷರ ಸ್ಥಾನ ನೀಡಿರುವುದಕ್ಕೆ ಪಕ್ಷದ ತಾಲೂಕಿನ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ. ತಿಮ್ಮಾರೆಡ್ಡಿ ಉಪಾಧ್ಯಕ್ಷ ಸ್ಥಾನಕ್ಕೆ ಸಹಕರಿಸಿದ ಎಚ್.ಡಿ.ದೇವೇಗೌಡ, ಮಾಜಿ ಸಿಎಂ, ವಿಧಾನಸಭೆ ವಿರೋಧ ಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎ.ಕೃಷ್ಣಪ್ಪ ಅವರಿಗೆ ಕೆ.ಆರ್.ಸುರೇಶ್ ಬಲರಾಮರೆಡ್ಡಿ, ವೇಣುಸ್ವಾಮಿ ನಾಗಭೂಷಣ್ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

