ಅಂಗವಿಕಲರಿಗೂ ಸಮಾನ ಅವಕಾಶ ನೀಡಿ: ರಾಜ್ಕುಮಾರ್
ಶಿರಾ: ಸಮಾಜದಲ್ಲಿರುವ ಎಲ್ಲಾ ಅಂಗವಿಕಲರಿಗೂ ಸಮಾನ ಅವಕಾಶ ನೀಡಿ ಅವರನ್ನು ಮುಖ್ಯವಾಹಿನಿಗೆ ತರಲು ಎಲ್ಲರೂ ಪ್ರಯತ್ನಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ರಾಜ್ಕುಮಾರ್ ಅವರು ತಿಳಿಸಿದರು.
ಅವರು ನಗರದ ಜಿ.ಕೆ.ಎಂ.ಹೆಚ್.ಪಿ.ಬಿ.ಎಸ್. ಶಾಲೆಯಲ್ಲಿ ನಡೆದ 21ನೇ ವಿಶ್ವ ಅಂಗವಿಕಲರ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ, ಶಿಕ್ಷಣ ಇಲಾಖೆ ಅಂಗವಿಕಲ ಮಕ್ಕಳಿಗೆ ಪ್ರತಿ ವರ್ಷ ವೈದ್ಯಕೀಯ
ತಪಾಸಣಾ ಶಿಬಿರವನ್ನು ಏರ್ಪಡಿಸಿ ಈ ಮಕ್ಕಳಿಗೆ ಅವಶ್ಯಕವಾದ ಸಾಧನ-ಸಲಕರಣೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿ, ಇದೇ ಸಂದರ್ಭದಲ್ಲಿ ಅಂಗವಿಕಲ ಮಕ್ಕಳಿಗೆ ಸಾಧನ ಸಲಕರಣೆಗಳನ್ನು ವಿತರಿಸಿದರು.
ತಾಲೂಕು ಅಂಗವಿಕಲರ ಸಂಘದ ಅಧ್ಯಕ್ಷ ಚಿತ್ತಯ್ಯ ಮಾತನಾಡಿ ಪ್ರತಿ ವರ್ಷ ಆಚರಿಸುವ ವಿಶ್ವ ಅಂಗವಿಕಲರ ದಿನಾಚರಣೆಯು ಅಂಗವಿಕಲ ಬಂಧುಗಳಿಗೆ ವರದಾನವಿದ್ದಂತೆ ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಇಲಾಖೆ ಅಂಗವಿಕಲರ ಸಂಘದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಸಮಾರಂಭದಲ್ಲಿ ಅಂಗವಿಕಲ ಮಕ್ಕಳಿಗಾಗಿ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಬಿ.ಆರ್.ಸಿ. ಜೆ.ಸಿದ್ದರಾಜು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್. ಹಿಮಂತರಾಜ್, ಡಿ.ಐ.ಇ.ಆರ್.ಟಿ. ರಾಜಣ್ಣ ಮಾತನಾಡಿದರು.
ಐ.ಇ.ಆರ್.ಟಿ. ಎಂ.ಎನ್. ಧನಂಜಯ ಸ್ವಾಗತಿಸಿ, ಈರಣ್ಣ ವಂದಿಸಿದರು. ದೈಹಿಕ ಶಿಕ್ಷಕರು, ವಿಶೇಷ ನೂರಾರು ಅಂಗವಿಕಲ ಮಕ್ಕಳು ಮತ್ತು ಪೋಷಕರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

