ರಾಷ್ಟ್ರಮಟ್ಟದ ಖೋ-ಖೋ ಮೂಲಕ ಜಿಲ್ಲೆಗೆ ಖ್ಯಾತಿ
ಕ.ಪ್ರ. ವಾರ್ತೆ ತುಮಕೂರು ಡಿ. 8
ವಿವೇಕಾನಂದ ಕ್ರೀಡಾಸಂಸ್ಥೆ ತುಮಕೂರಿನಲ್ಲಿ ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾವಳಿ ನಡೆಸುವ ಮೂಲಕ ನಗರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಶ್ಲಾಘಿಸಿದರು.
ಅವರು ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸ್ವಾಮಿ ವಿವೇಕಾನಂದ ಕ್ರೀಡಾಸಂಸ್ಥೆ, ರಾಜ್ಯ ಖೋ-ಖೋ ಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಂಡಿರುವ 25ನೇ ಸಬ್ ಜೂನಿಯರ್ ಬಾಲಕ-ಬಾಲಕಿಯರ ಮತ್ತು 24ನೇ ಪುರುಷ ಮತ್ತು ಮಹಿಳೆಯ ಫೆಡರೇಷನ್ ಕಪ್ ಪಂದ್ಯಾವಳಿಯ ನಾಲ್ಕನೇ ದಿನವಾದ ಶನಿವಾರ ಮಹಾರಾಷ್ಟ್ರ ಮತ್ತು ಪಶ್ವಿಮ ಬಂಗಾಳ ತಂಡಗಳ ಆಟಗಾರರ ಪರಿಚಯ ಮಾಡಿಕೊಂಡ ನಂತರ ಮಾತನಾಡಿದರು.
ದೇಶಿಯ ಕ್ರೀಡೆಯಾದ ಖೋ-ಖೋ ಆಟವನ್ನು ಇಷ್ಟೊಂದು ಅದ್ಧೂರಿಯಾಗಿ ನಡೆಸುವ ಮೂಲಕ ಕರ್ನಾಟಕ ಅದರಲ್ಲಿಯೂ ತುಮಕೂರನ್ನು ವಿಶ್ವವಿಖ್ಯಾತಗೊಳಿಸಿದ್ದಾರೆ ಎಂದರು.
ಈ ಕ್ರೀಡಾಕೂಟದಲ್ಲಿ ದೇಶದ ಮೂಲೆ, ಮೂಲೆಯಿಂದ 1500 ಕ್ಕೂ ಹೆಚ್ಚು ಕ್ರೀಡಾಪಟುಗಳ ಭಾಗವಹಿಸಿರುವುದು ಸಂತಸದ ವಿಚಾರವಾಗಿದೆ. ಕ್ರಿಕೆಟ್ನಷ್ಟೇ ದೇಶಿಯ ಕ್ರೀಡೆಗಳಿಗೂ ಮಹತ್ವ ದೊರೆತರೆ ನಮ್ಮ ಕಬಡ್ಡಿ, ಖೋ-ಖೋ, ಕುಸ್ತಿ ಮತ್ತಿತರ ಆಟಗಳು ಒಳ್ಳೆಯ ಹೆಸರು ಮಾಡಲಿವೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಖ್ಯಾತಿ: ಬೆಂಗಳೂರನ್ನು ಹೊರತು ಪಡಿಸಿದಂತೆ ಮುಂದಿನ ದಿನಗಳಲ್ಲಿ ತುಮಕೂರು, ಮಂಗಳೂರು ಮತ್ತು ಹುಬ್ಬಳಿ ಧಾರವಾಡ ನಗರಗಳಿಗೆ ಕೈಗಾರಿಕೆಗಳು ದೊಡ್ಡ ದೊಡ್ಡ ಕಂಪನಿಗಳು ಉತ್ಪನ್ನ ಪ್ರಾರಂಭಿಸಲಿದ್ದು, ಕರ್ನಾಟಕವೂ ಕೈಗಾರಿಕೆಯಲ್ಲಿ ರಾಷ್ಟ್ರೀಯ ಖ್ಯಾತಿ ಪಡೆಯಲಿದೆ. ಅದಕ್ಕಿಂತಲೂ ಮೊದಲೇ ಕ್ರೀಡೆಯಲ್ಲಿ ವಿದೇಶಿ ಮಾನ್ಯತೆ ಪಡೆಯುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ನುಡಿದರು.
ವಿವೇಕಾನಂದ ಕ್ರೀಡಾಸಂಸ್ಥೆಯ ಧನಿಯಾಕುಮಾರ್, ವಿನಯ್, ಸುನೀಲ್, ಕೆಜೆಪಿ ಮುಖಂಡ ಜ್ಯೋತಿ ಗಣೇಶ್, ರಾಜ್ಯ ಖೋ-ಖೋ ಸಂಸ್ಥೆಯ ಉಪಾಧ್ಯಕ್ಷ ರಾಜಗೋಪಾಲ್, ಕಾರ್ಯದರ್ಶಿ ಲೋಕೇಶ್ವರ್, ರಾಜ್ಯ ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಜಿ.ಎಂ. ಸಣ್ಣಮುದ್ದಯ್ಯ, ನಗರಸಭಾ ಸದಸ್ಯ ಬಿ.ಎಸ್. ನಾಗಣ್ಣ, ವಿವೇಕಾನಂದ ಕ್ರೀಡಾ ಸಂಸ್ಥೆಯ ಗೌರವಾಧ್ಯಕ್ಷ ಸುರೇಶ್, ಕ್ರೀಡಾ ತರಬೇತುದಾರರ ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

